‘ಶೇ.55 ರಷ್ಟು ಬಿಜೆಪಿ ಸಂಸದರು ಕ್ರಿಮಿನಲ್​​ ಹಿನ್ನೆಲೆ ಹೊಂದಿದ್ದಾರೆ’ -ಧ್ರುವ ನಾರಾಯಣ್

‘ಶೇ.55 ರಷ್ಟು ಬಿಜೆಪಿ ಸಂಸದರು ಕ್ರಿಮಿನಲ್​​ ಹಿನ್ನೆಲೆ ಹೊಂದಿದ್ದಾರೆ’ -ಧ್ರುವ ನಾರಾಯಣ್

ಮೈಸೂರು: ಯಥಾ ರಾಜ ತಥಾ ಪ್ರಜಾ ಎಂಬಂತೆ ಮೈಸೂರು ಸೇರಿದಂತೆ ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್​​ ಹೇಳಿದ್ದಾರೆ. ಈ ಸಂಬಂಧ ಟ್ವೀಟ್​​ ಮಾಡಿರುವ ಧ್ರುವ ನಾರಾಯಣ್​, ಕಲ್ಚರಲ್ ಸಿಟಿ ಮೈಸೂರು ಕ್ರಿಮಿನಲ್ ಸಿಟಿ ಆಗುತ್ತಿರುವುದು ಅತ್ಯಂತ ಆತಂಕಕಾರಿ ವಿಷಯ. ದರೋಡೆ, ಶೂಟೌಟ್, ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಮೈಸೂರಿನ ಘನತೆ ಗೌರವ ಚ್ಯುತಿ ಬಂದಿದೆ ಎಂದು ಬರೆದುಕೊಂಡಿದ್ದಾರೆ.

ಭಾರತದ ಸಂಸತ್ತಿನ ಸದಸ್ಯದ ಪೈಕಿ ಶೆ. 55ರಷ್ಟು ಬಿಜೆಪಿ ಎಂಪಿಗಳು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವು ಬಿಜೆಪಿ ಎಂಎಲ್ಎ, ಎಂಪಿಗಳು ಮತ್ತು ಇತರೆ ಮುಖಂಡರ ಮೇಲಿರುವ 62 ಕ್ರಿಮಿನಲ್ ಪ್ರಕರಣಗಳನ್ನು ವಾಪಾಸ್ ಪಡೆದಿದೆ ಎಂದು ಮತ್ತೊಂದು ಟ್ವೀಟ್​​​​ ಮಾಡಿದ್ದಾರೆ.

ಇದನ್ನೂ ಓದಿ: ಮೈಸೂರು ಬೆನ್ನಲ್ಲೇ ಬೆಳಗಾವಿಯಲ್ಲಿ ಮತ್ತೊಂದು ಕೇಸ್​​; ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ

Source: newsfirstlive.com Source link