ವಿಲನ್ ಆಗಿ ಘರ್ಜಿಸೋಕೆ ರೆಡಿಯಾದ್ರು ಸ್ಯಾಂಡಲ್​ವುಡ್ ಕವಿರತ್ನ..!

ವಿಲನ್ ಆಗಿ ಘರ್ಜಿಸೋಕೆ ರೆಡಿಯಾದ್ರು ಸ್ಯಾಂಡಲ್​ವುಡ್ ಕವಿರತ್ನ..!

ಸ್ಯಾಂಡಲ್​ವುಡ್ ಬಹುಮುಖ ಪ್ರತಿಭೆ ಕವಿರತ್ನ ಡಾ.ವಿ ನಾಗೇಂದ್ರ ಪ್ರಸಾದ್. ಸದ್ಯಕ್ಕಂತು ಸ್ಯಾಂಡಲ್​ವುಡ್​ ಸಂಗೀತ ಲೋಕದಲ್ಲಿ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಸಿರಿಯೆ ಹೆಚ್ಚೆಚ್ಚು ಹಾಡುಗಳಾಗಿ ಮೇಳೈಸುತ್ತಿರೋದು.. ಎರಡೂವರೆ ಸಾವಿರ ಹಾಡುಗಳನ್ನ ಬರೆದು ಮುನ್ನುಗುತ್ತಿರೋ ನಾಗೇಂದ್ರ ಪ್ರಸಾದ್ ಫಸ್ಟ್ ಟೈಮ್ ಖಡಕ್ ವಿಲನ್ ಆಗಿ ಪಾತ್ರ ನಿರ್ವಹಿಸಲು ಮುಂದಾಗಿದ್ದಾರೆ..

‘ಗಾಜಿನ ಮನೆ’ ಅನ್ನೋ ಸಿನಿಮಾಕ್ಕೆ ಸ್ಕ್ರಿಪ್ಟ್ ಬರೆಯೋ ಮೂಲಕ ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟವರು ಡಾ.ವಿ.ನಾಗೇಂದ್ರ ಪ್ರಸಾದ್​. ಶ್ರೀ ಮಂಜುನಾಥ್ ಸಿನಿಮಾದಲ್ಲಿ ಸ್ಕ್ರಿಪ್ಟ್ ವರ್ಕ್ ಮಾಡಿ ಒಂದೊಂದೆ ಹೆಜ್ಜೆಯನ್ನ ಚಿತ್ರರಂಗದಲ್ಲಿ ಇಡುತ್ತಾ ಬಂದವರು ನಾಗೇಂದ್ರ ಪ್ರಸಾದ್. ಹಾಡು ಬರೆಯೋದಾಗ್ಲಿ, ಸಿನಿಮಾ ಪಾತ್ರ ಮಾಡೋದಾಗ್ಲಿ, ಸಿನಿಮಾ ಸ್ಕ್ರಿಪ್ಟ್ ಆಗಿರಲಿ, ಸಿನಿಮಾ ಸಂಭಾಷಣೆಯೇ ಆಗಿರಲಿ ಸಿಕ್ಕ ಚಾನ್ಸ್ ಅನ್ನ ಕಣ್ಣಿಗೆ ಒತ್ತಿಕೊಂಡು ಕನ್ನಡ ಚಿತ್ರರಂಗದಲ್ಲಿ ಬೆಳೆದವರು ನಾಗೇಂದ್ರ ಪ್ರಸಾದ್.

blank

ಇವತ್ತು ಎರಡು ಸಾವಿರಕ್ಕೂ ಹೆಚ್ಚು ಹಾಡುಗಳನ್ನ ಬರೆದಿದ್ದಾರೆ. ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಸಿನಿಮಾ ನಿರ್ದೇಶನ ಮಾಡಿದ್ದಾರೆ. ನಟನಾಗಿಯೂ ಗುರುತಿಸಿಕೊಂಡಿದ್ದಾರೆ.. ಆದ್ರೆ ಫಾರ್ ದಿ ಫಸ್ಟ್ ಟೈಮ್ ನಾಗೇಂದ್ರ ಪ್ರಸಾದ್ ಅವರ ಕರಿಯರ್​​ನಲ್ಲೇ ವಿಲನ್ ಆಗಿ ಅಭಿನಯ ಮಾಡಿಡ್ತಿದ್ದಾರೆ..

ವಿಲನ್ ಆಗಿ ಫೋಸು ಕೊಟ್ರು ಸ್ಯಾಂಡಲ್​ವುಡ್ ಕವಿರತ್ನ
ಫಸ್ಟ್ ಟೈಮ್ ಕೆಡಿ ಪಾತ್ರದಲ್ಲಿ ನಾಗೇಂದ್ರ ಪ್ರಸಾದ್ ಯತ್ನ

ಅಷ್ಟಕ್ಕೂ ಇದ್ಯಾವ ಸಿನಿಮಾ ಅನ್ನೋ ಪ್ರಶ್ನೆಗೆ ಉತ್ತರ ಇಂಗ್ಲೀಷ್ ಮಂಜ.. ಇಂಗ್ಲೀಷ್ ಮಂಜ.. ಗೀತಾ ಬ್ಯಾಂಗಲ್ ಸ್ಟೋರ್ , ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ಅಭಿನಯದ ಹೊಸ ಸಿನಿಮಾ.. ಆರ್ಯ ಮಹೇಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಸಿನಿಮಾ ಇಂಗ್ಲೀಷ್ ಮಂಜ.. ಬೆಂಗಳೂರಿನ ಹೊರ ವಲಯದಲ್ಲಿ ‘‘ಇಂಗ್ಲೀಷ್ ಮಂಜ’’ನ ಶೂಟಿಂಗ್ ಆಗುತ್ತಿದೆ.. ವಿಲನ್ ಬಿಲ್ಡಪ್​ನೊಂದಿಗೆ ನಟ ಪ್ರಮೋದ್ ಮುಂದೆ ವಿಲನ್ ನಾಗೇಂದ್ರ ಪ್ರಸಾದ್ ಘರ್ಜಿಸುತ್ತಿದ್ದಾರೆ.

blank

ಇನ್ನು ಈ ಚಿತ್ರದಲ್ಲಿ ಮತ್ತೊಬ್ಬ ವಿಲನ್ ಆಗಿ ನಾಗೇಂದ್ರ ಅರಸ್ ನಟಿಸುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಯುವ ಭರವಸೆಯ ನಾಯಕ ನಟ ಪ್ರಮೋದ್ ಟೈಟಲ್​ಗೋಸ್ಕರನೇ ಈ ಸಿನಿಮಾವನ್ನ ಒಪ್ಪಿಕೊಂಡ್ರಂತೆ.. ಕೊನೆಯ ಹಂತದ ಶೂಟಿಂಗ್​​ನಲ್ಲಿರೋ ಇಂಗ್ಲಿಷ್ ಮಂಜ ಸಿನಿಮಾ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬಂದು ನಿಲ್ಲೋ ಪ್ಲಾನ್​ನಲ್ಲಿ ಕೆಲಸ ಮಾಡ್ತಿದೆ. ಸ್ಟಾರ್ ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ವಿಲನ್ ಪಾತ್ರ ಈ ಸಿನಿಮಾದಲ್ಲಿ ಹೇಗೆ ಮೂಡಿ ಬಂದಿರಬಹುದು ಅನ್ನೋ ಕುತೂಹಲ ಚಿತ್ರಪ್ರೇಮಿಗಳಲ್ಲಿ ಶುರುವಾಗಿದೆ.

ಇದನ್ನೂ ಓದಿ: ಅತ್ಯಾಚಾರ ಪ್ರಕರಣಗಳ ವಿರುದ್ಧ ಕೆಂಡವಾದ ರಮ್ಯಾ-ಮಹಿಳಾ ವಿರೋಧಿ ಮನಸ್ಥಿತಿಗೆ ಏನಂದ್ರು?

Source: newsfirstlive.com Source link