ಸಂಜೆ ವೇಳೆ ಮೈಸೂರು ವಿವಿ ಆವರಣದಲ್ಲಿ ಹೆಣ್ಮಕ್ಕಳು ಒಂಟಿಯಾಗಿ ತಿರುಗಾಡುವುದಕ್ಕೆ ನಿಷೇಧ -ಅಚ್ಚರಿ ಆದೇಶ

ಸಂಜೆ ವೇಳೆ ಮೈಸೂರು ವಿವಿ ಆವರಣದಲ್ಲಿ ಹೆಣ್ಮಕ್ಕಳು ಒಂಟಿಯಾಗಿ ತಿರುಗಾಡುವುದಕ್ಕೆ ನಿಷೇಧ -ಅಚ್ಚರಿ ಆದೇಶ

ಮೈಸೂರು: ನಗರದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆನ್ನಲ್ಲೇ ಮೈಸೂರು ವಿಶ್ವವಿದ್ಯಾಲಯ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಸಂಜೆ 6.30ರ ನಂತರ ಪ್ರವೇಶವನ್ನ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ, ಕುಕ್ಕರಹಳ್ಳಿ ಕೆರೆ ಆವರಣ ಸೇರಿ ಮಾನಸ ಗಂಗೋತ್ರಿ ಕ್ಯಾಂಪಸ್​ನಲ್ಲಿ ಸಂಜೆ 6:30ರ ನಂತರ ಹೆಣ್ಣು ಮಕ್ಕಳು ಒಂಟಿಯಾಗಿ ಓಡಾಡದಂತೆ ನಿಷೇಧ ಹೇರಿ ಆದೇಶ ಹೊರಡಿಸಿದೆ.

ಸಂಜೆ 6:30ರ ನಂತರ ಕ್ಯಾಂಪಸ್‌ನಲ್ಲಿ ಬಿಗಿ ಕ್ರಮ‌ಕೈಗೊಂಡ ಮೈಸೂರು ವಿವಿ, ಆರು ಘಂಟೆ ಬಳಿಕ ವಿದ್ಯಾರ್ಥಿನಿಯರು ಓಡಾಡದಂತೆ ಸೂಚನೆ ನೀಡಿದೆ. ಮತ್ತು ಕುಕ್ಕರಹಳ್ಳಿ ಕೆರೆ, ಕ್ಯಾಂಪಸ್‌ನಲ್ಲಿ ಗಸ್ತು ಹೆಚ್ಚಿಸಲು ಸೆಕ್ಯೂರಿಟಿಗಳಿಗೆ ಕುಲ ಸಚಿವ ಶಿವಪ್ಪ ಸೂಚನೆ ನೀಡಿದ್ದಾರೆ.

blank

Source: newsfirstlive.com Source link