ಸೋಷಿಯಲ್ ಮೀಡಿಯಾದಲ್ಲಿ ಪರಿಚಯ – ಯುವತಿಗೆ ಲಕ್ಷಾಂತರ ರೂ. ವಂಚಿಸಿದ್ದ ವಂಚಕ ಅಂದರ್

ಬೆಂಗಳೂರು: ಸೋಶಿಯಲ್ ಮೀಡಿಯಾ ಮೂಲಕ ಪರಿಚಯಗೊಂಡ ಯುವತಿಯನ್ನು ಪುಸಲಾಯಿಸಿ ಆಕೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ್ದ ವಂಚಕನನ್ನು ಗಂಗಮ್ಮಗುಡಿ ಪೊಲೀಸರು ಬಂಧಿಸಿದ್ದಾರೆ.

ಮಾದನಾಯಕಹಳ್ಳಿ ನಿವಾಸಿ ಘನಶ್ಯಾಮ್ ಬಂಧಿತ. ಸದ್ಯ ಆರೋಪಿಯಿಂದ 8 ಲಕ್ಷ ಮೌಲ್ಯದ 180 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದ್ವಿತೀಯ ಪಿಯುಸಿ ಅನುತೀರ್ಣಗೊಂಡಿದ್ದ ಘನಶ್ಯಾಮ್, ಸಣ್ಣ-ಪುಟ್ಟ ಕೆಲಸ ಮಾಡಿ ತಿರುಗಾಡುತ್ತಿದ್ದನು. ಆದರೆ ಒಮ್ಮೆ ಯುವತಿಯ ತಂದೆ ಗೋಪಾಲ್ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿದೆ ಎಂದು ಗಂಗಮ್ಮ ಗುಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ ತನಿಖೆಗಿಳಿದ ಪೊಲೀಸರಿಗೆ ಯಾರೋ ಪರಿಚಯದವರೇ ಈ ಕೃತ್ಯ ಎಸಗಿದ್ದಾರೆ ಅಂತ ತಿಳಿದುಬಂದಿದೆ. ಇದೇ ಅನುಮಾನದಲ್ಲಿ ದೂರುದಾರರ ಮಗಳನ್ನು ವಿಚಾರಣೆ ಮಾಡಿದಾಗ ಅಸಲಿ ವಿಷಯ ಹೊರಗೆ ಬಂದಿದೆ. ಇದನ್ನೂ ಓದಿ:ಸ್ನಾನಕ್ಕೆಂದು ಬಾತ್‍ರೂಮಿಗೆ ಹೋದ ಮಹಿಳೆಯ ಅನುಮಾನಾಸ್ಪದ ಸಾವು

ದೂರದಾರರ ಮಗಳಿಗೆ ಆರೋಪಿ ಘನಶ್ಯಾಮ್ ಇನ್​ಸ್ಟಾಗ್ರಾಮ್​ನಲ್ಲಿ ಪರಿಚಯ ಆಗಿದ್ದ. ಹೀಗೆ ಪರಿಚಯ ಆದ ಮೇಲೆ ಕಷ್ಟ ಇದೆ ಎಂದು ಯುವತಿ ಬಳಿ ಚಿನ್ನ ಕೇಳಿದ್ದ. ಮೊದಲಿಗೆ ಯುವತಿ ಪೋಷಕರಿಗೆ ತಿಳಿಸದೇ 10 ಗ್ರಾಂ ಚಿನ್ನ ನೀಡಿದ್ದಳು. ಬಳಿಕ ಜೊತೆಗೂಡಿ ಒಟ್ಟಿಗೆ ಸುತ್ತಾಡುತ್ತಿದ್ದರು. ಯುವತಿಯ ವೀಕ್ನೆಸ್ ಅರಿತ ಆರೋಪಿ ಮತ್ತೆ ಚಿನ್ನಾಭರಣ ನೀಡುವಂತೆ ಒತ್ತಡ ಹೇರಿದ್ದಾನೆ. ಚಿನ್ನಾಭರಣ ನೀಡದಿದ್ದರೆ ನನ್ನ ಜೊತೆ ಸುತ್ತಾಡಿದ ವೀಡಿಯೋ ಕುಟುಂಬಸ್ಥರಿಗೆ ಕಳುಹಿಸಿ ಮಾನ ಹರಾಜು ಹಾಕುವುದಾಗಿ ಬೆದರಿಸಿದ್ದ. ಇದರಿಂದ ಹೆದರಿದ ಯುವತಿ ಆರೋಪಿ ಅಣತಿಯಂತೆ ಚಿನ್ನ ನೀಡಿದ್ದಳು. ಆದರೆ ಇಷ್ಟಕ್ಕೆ ಸುಮ್ಮನಾಗದ ಆರೋಪಿ ಪೋಷಕರಿಲ್ಲದ ವೇಳೆ ಮನೆಗೆ ಬಂದು ಇದ್ದ ಚಿನ್ನವನ್ನೆಲ್ಲಾ ಕಳ್ಳತನ ಮಾಡಿದ್ದಾನೆ. ಇದನ್ನೂ ಓದಿ:ಎಲ್ಲೆಲ್ಲೋ ರೇಪ್ ಕೇಸ್ ಆದ್ರೇ ನನ್ನನ್ನು ಯಾಕೆ ಕೇಳ್ತಿರಾ: ಜಿ.ಎಂ ಸಿದ್ದೇಶ್ವರ್ ಉಡಾಫೆ

Source: publictv.in Source link