ಸುಪ್ರೀಂಕೋರ್ಟ್​ಗೆ ನ್ಯಾಯಮೂರ್ತಿಗಳ ಪದೋನ್ನತಿ: ಭಾಷಣದ ವೇಳೆ ಗದ್ಗದಿತರಾದ ನ್ಯಾ. ಬಿ.ವಿ ನಾಗರತ್ನ

ಸುಪ್ರೀಂಕೋರ್ಟ್​ಗೆ ನ್ಯಾಯಮೂರ್ತಿಗಳ ಪದೋನ್ನತಿ: ಭಾಷಣದ ವೇಳೆ ಗದ್ಗದಿತರಾದ ನ್ಯಾ. ಬಿ.ವಿ ನಾಗರತ್ನ

ಬೆಂಗಳೂರು: ಸುಪ್ರೀಂಕೋರ್ಟ್​ಗೆ ಪದೋನ್ನತಿ ಪಡೆದ ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ, ನ್ಯಾ. ಬಿ.ವಿ ನಾಗರತ್ನ ಅವರನ್ನು ಬೀಳ್ಕೊಡಲಾಯಿತು. ಹೈಕೋರ್ಟ್ ಹಾಲ್ ನಂ.1 ರಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಉಭಯ ನ್ಯಾಯಮೂರ್ತಿಗಳಿಗೆ ಬಾರ್ ಕೌನ್ಸಿಲ್ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.

ಕೋವಿಡ್ ನಡುವೆ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಒತ್ತು ನೀಡಿರುವುದು; ಪ್ರಕರಣ ಇತ್ಯರ್ಥದಲ್ಲೂ ಕರ್ನಾಟಕ ಹೈಕೋರ್ಟ್ ಸಾಧನೆ ಮಾಡಿದೆ ಎಂದು ಸಿಜೆ ಎ.ಎಸ್ ಒಕಾ ಅವರ ನೇತೃತ್ವವನ್ನು ಬಾರ್ ಕೌನ್ಸಿಲ್ ಶ್ಲಾಘಿಸಿತು.

blank

ಇದನ್ನೂ ಓದಿ: ರಾಜ್ಯದ 6 ಹೆಚ್ಚುವರಿ ನ್ಯಾ.ಮೂರ್ತಿಗಳನ್ನು ಖಾಯಂಗೊಳಿಸಲು ‘ಸುಪ್ರೀಂ’ ಕೊಲಿಜಿಯಂ ಶಿಫಾರಸ್ಸು

ಈ ವೇಳೆ ಮಹಾತ್ಮ ಗಾಂಧೀಜಿ ಅವರ ಉಕ್ತಿ ಉಲ್ಲೇಖಿಸಿದ ಸಿಜೆ ಎ.ಎಸ್ ಒಕಾ, ಆತ್ಮಸಾಕ್ಷಿಯ ಕೋರ್ಟ್ ಗಿಂತ ದೊಡ್ಡ ಕೋರ್ಟ್ ಮತ್ತೊಂದಿಲ್ಲ. ನ್ಯಾಯಾಂಗದಲ್ಲಿ ಎಲ್ಲರೂ ಈ ಮಾತನ್ನು ನೆನಪಿನಲ್ಲಿಡಬೇಕು ಎಂದರು.

ಬಳಿಕ ನ್ಯಾ.ಬಿ.ವಿ.ನಾಗರತ್ನ ಮಾತನಾಡಿ, ಕಾರ್ಯ ನಿರ್ವಹಣೆ ವೇಳೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಈ ವೇಳೆ ಅವರು ಗದ್ಗದಿತರಾದರು.

ಇದನ್ನೂ ಓದಿ: ಅತ್ಯಾಚಾರದ ಆರೋಪಿಗಳು ಹೊರರಾಜ್ಯದವರೆಂಬ ಶಂಕೆ; ತ.ನಾಡು, ಕೇರಳದತ್ತ ಹೊರಟ ಪೊಲೀಸ್?

Source: newsfirstlive.com Source link