‘ತಪ್ಪು ಮಾಡ್ಬಿಟ್ಟೆ, ದಟ್ಸ್​ ಓಕೆ’ ಎಂದ ಶಿಲ್ಪಾ ಶೆಟ್ಟಿ; ಇನ್​ಸ್ಟಾಗ್ರಾಂ ಪೋಸ್ಟ್​ ಫುಲ್​​ ವೈರಲ್​​

‘ತಪ್ಪು ಮಾಡ್ಬಿಟ್ಟೆ, ದಟ್ಸ್​ ಓಕೆ’ ಎಂದ ಶಿಲ್ಪಾ ಶೆಟ್ಟಿ; ಇನ್​ಸ್ಟಾಗ್ರಾಂ ಪೋಸ್ಟ್​ ಫುಲ್​​ ವೈರಲ್​​

ಅಶ್ಲೀಲ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿರುವ ಪತಿ ರಾಜ್​​ ಕುಂದ್ರಾರನ್ನು ಬಿಡಿಸಲು ಬಾಲಿವುಡ್​​​ ನಟಿ ಶಿಲ್ಪಾ ಶೆಟ್ಟಿ ಪ್ರಯತ್ನ ಮಾಡುತ್ತಲೇ ಇದ್ದಾರೆ. ಈ ಮಧ್ಯೆ ತನ್ನ ಇನ್​ಸ್ಟಾಗ್ರಾಂನಲ್ಲಿ ಒಂದು ನೋಟ್​​ ಹಂಚಿಕೊಂಡಿದ್ದು, ತಾವು ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ತನ್ನ ಇನ್​ಸ್ಟಾಗ್ರಾಂನ ಸ್ಟೋರಿಯಲ್ಲಿ ಯಾವುದೇ ಒಂದು ಪುಸ್ತಕದ ಸಾಲುಗಳನ್ನು ಪೋಸ್ಟ್​ ಮಾಡಿರುವ ಶಿಲ್ಪಾ ಶೆಟ್ಟಿ ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಹೀಗೆ ನಿರ್ಭೀತಿಯಿಂದ ಶಿಲ್ಪಾ ಶೆಟ್ಟಿ ಹಾಕಿರುವ ಪೋಸ್ಟ್​ ಈಗ ಫುಲ್​​ ವೈರಲ್​​ ಆಗಿದೆ.

 

blank

ಪೋಸ್ಟ್​ನಲ್ಲಿ ಏನಿದೆ?

ಮನುಷ್ಯ ಜೀವನಪೂರ್ತಿ ತಪ್ಪು ಮಾಡುತ್ತಲೇ ಇರುತ್ತಾನೆ, ಕಲಿಯುತ್ತಲೇ ಹೋಗುತ್ತಾನೆ. ನಾನು ಕೆಲವು ತಪ್ಪುಗಳನ್ನು ಮಾಡಿದ್ದೇನೆ. ತಪ್ಪು ಮಾಡದೆ ನಮ್ಮ ಜೀವನ ಆಸಕ್ತಿದಾಯಕವಾಗಿ ಇರಲು ಸಾಧ್ಯವೇ ಇಲ್ಲ. ನಮ್ಮ ತಪ್ಪುಗಳು ಯಾರನ್ನು ನೋವಿಸಬಾರದು ಅಷ್ಟೇ ಎಂದು ತಮ್ಮ ಭಾವನೆ ಹೊರಹಾಕಿದ್ದಾರೆ.

blank

ಎಲ್ಲರು ತಪ್ಪು ಮಾಡುತ್ತಾರೆ. ನನ್ನಲ್ಲಿಯೂ ಕೆಲವು ತಪ್ಪುಗಳಿವೆ. ತಪ್ಪುಗಳು ನಮಗೆ ಜೀವನದ ಪಾಠ ಕಲಿಸುತ್ತವೆ. ಹಾಗಾಗಿ ನಾನು ತಪ್ಪು ಮಾಡಿದ ಮೇಲೆ ಇದರಿಂದ ಏನು ಕಲಿತಿದ್ದೇನೆ ಎಂದು ನೋಡುತ್ತೇನೆ ಎಂದು ಶಿಲ್ಪಾ ಶೆಟ್ಟಿ ಪೋಸ್ಟ್​ ಮಾಡಿರುವ ನೋಟ್​ನಲ್ಲಿದೆ.

ನಾನು ತಪ್ಪು ಮಾಡುತ್ತೇನೆ, ನನ್ನನ್ನು ನಾನು ಕ್ಷಮಿಸುತ್ತೇನೆ. ಈ ತಪ್ಪುಗಳಿಂದಲೇ ಕಲಿತು ಮುಂದಕ್ಕೆ ಸಾಗುತ್ತೇನೆ. ತಪ್ಪು ಮಾಡಿದ್ದರೂ ಪರವಾಗಿಲ್ಲ, ತಿದ್ದುಕೊಂಡು ಹೋಗುತ್ತೇನೆ ಎಂದು ಸ್ಪಷ್ಟವಾಗಿರುವ ಕೋಟ್​​ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: RRR ಶೂಟಿಂಗ್ ಕಂಪ್ಲೀಟ್ ; ಅದಕ್ಕಾಗಿ ರಾಜಮೌಳಿ ತೆಗೆದುಕೊಂಡ ಟೈಮ್​ ಎಷ್ಟು ಗೊತ್ತಾ?

Source: newsfirstlive.com Source link