‘ಹಿಟ್ಲರ್​ ಕಲ್ಯಾಣ’ ಸೀರಿಯಲ್​ನ ದೇವ್​ ಯಾರು ಗೊತ್ತಾ..?

‘ಹಿಟ್ಲರ್​ ಕಲ್ಯಾಣ’ ಸೀರಿಯಲ್​ನ ದೇವ್​ ಯಾರು ಗೊತ್ತಾ..?

ಹಿಟ್ಲರ್​ ಕಲ್ಯಾಣ ಸೀರಿಯಲ್​ ದಿನೇ ದಿನೇ ಕುತೂಹಲ ಹೆಚ್ಚಿಸುತ್ತಿದ್ದು, ಯಡವಟ್ಟು ಲೀಲಾಳ ಬಜಾರಿತನ, ಎಷ್ಟೇ ಶ್ರೀಮಂತಿಕೆ ಇದ್ದರು ಇನ್ನೊಬ್ಬರನ್ನ ತುಳಿದು ಬದುಕಬಾರದು ಅಂತಾ ಹೇಳೊ ನಮ್ಮ ಮಿಸ್ಟರ್​ ಪರ್ಫೆಕ್ಟ್ ಅಭಿರಾಮ್ ಜೈಶಂಕರ್ ಅಲಿಯಾಸ್​ ಎಜೆಯ ಆ ಗತ್ತು ವರ್ಕೌಟ್​ ಆಗಿದೆ.. ಜನ್ರ ಫೇವರೇಟ್​ ಲಿಸ್ಟ್​​ನಲ್ಲಿ ಹಿಟ್ಲರ್​ ಕಲ್ಯಾಣ ರಾರಾಜಿಸುತ್ತಿದೆ.

ಸದ್ಯ ಮಿಸ್ಟರ್​ ಪರ್ಫೆಕ್ಟ್​ ಆಸ್ತಿ ಪತ್ರದ ಜೊತೆ ಲೀಲಾಗೆ ಮದುವೆ ಪ್ರಪೋಸಲ್​ ಇಟ್ಟಿದ್ದಾರೆ. ಇನ್ನ ನಮ್ಮ ಲೀಲಾ ಕೇಳ್ಬೇಕಾ.. ಸ್ವಾಭಿಮಾನದ ವಿಷಯದಲ್ಲಿ ಎತ್ತಿದ ಕೈ.. ಎಜೆ ಪ್ರಪೋಸಲ್​​ನ್ನಾ ಸರಾಸಗಾಟವಾಗಿ ತಳ್ಳಿಹಾಕಿ ಖಡಕ್​ ಉತ್ತರ ನೀಡಿದ್ದಾಳೆ.. ಈ ನಡುವೆ ಇನ್ನೊಬ್ಬರ ಎಂಟ್ರಿಯಾಗಿದೆ. ಆ ಖಡಕ್​ ವಿಲನ್​ ನೋಡಿದ್ರೆ ಅಬ್ಬಾ..! ಏನ್​ ಪರ್ಸನಾಲಿಟಿ, ಏನ್​ ಲುಕ್ಕು ಅನ್ನೋದು ಗ್ಯಾರಂಟಿ. ಲೀಲಾಳ ತಂಗಿ ರೇವತಿ ಹಿಂದೆ ಬಿದ್ದಿರುವ ಖಡಕ್​ ಲುಕ್​ನ ದಿ ವಿಲನ್..​ ದೇವ್​.

blank

ಅಂದ್ಹಾಗೆ..ಈ ದೇವ್​ ಪಾತ್ರಕ್ಕೆ ಬಣ್ಣ ಹಚ್ಚಿರುವವರು ಯಾರು ಎಂಬ ಪ್ರಶ್ನೆಗೆ ಉತ್ತರ ನಾವು ಹೇಳ್ತಿವಿ.. ದೇವ್​ ಪಾತ್ರದ ಮೂಲಕ ನೆಗೆಟಿವ್​ ಶೇಡ್​ನಲ್ಲಿ ಮಿಂಚುತ್ತಿರುವ ಹುಡುಗ ಶೌರ್ಯ ಶಶಾಂಕ್​ ಉಂಬ್ರೆ.
ಅಪ್ಪಟ ರಂಗಭೂಮಿಯ ಪ್ರತಿಭೆ ಶೌರ್ಯ ನಾಟಕಗಳ ಜೊತೆ ಮಾಡ್ಲಿಂಗ್ನಲ್ಲಿಯೂ ಹಾರ್ಟ್​ ಫೇವರೇಟ್​ ಎನಿಸಿಕೊಂಡಿರುವ ಹಾರ್ಡ್​ ವರ್ಕಿಂಗ್​ ಚಲುವ. ಇನ್ನೂ​ ಓದಿದ್ದೆಲ್ಲ ಚೆನ್ನೈನಲ್ಲಿಯಾದ್ರು ಕನ್ನಡ ಸೊಗಡನ್ನ ಮೈಗುಡಿಸಿಕೊಂಡಿದ್ದಾರೆ. ನಟನೆಯಷ್ಟೆಯಲ್ಲದೇ ಬರವಣಿಗೆಯಲ್ಲಿಯೂ ಆಸಕ್ತಿ ಹೊಂದಿರುವ ಇವರು, ಇನ್​ಸ್ಟಾನಲ್ಲಿ ಬರೆಯೋ ಕೊಟ್ಸ್​ ಪಾಪ್ಯುಲರ್ ಆಗಿದೆ.

blank

ತಮಿಳಿನ ಸ್ಟಾರ್​ ವಿಜಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ತಳಮ್​ ಪೋ ಸೀರಿಯಲ್​ನಲ್ಲಿ ನೆಗೆಟಿವ್​ ಶೇಡ್​ ಇರುವ ಭದ್ರ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿರುವ ಶೌರ್ಯ ಬಹುಭಾಷಾ ಪ್ರತಿಭೆ. ಕನ್ನಡದಲ್ಲಿ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ಸೈಕೋ ಸೂರ್ಯ ಎಂಬ ಪಾತ್ರದ ಮೂಲಕ ಕಾಣಿಸಿಕೊಂಡಿದ್ದಾರೆ. ಸದ್ಯ ಹಿಟ್ಲರ್​ ಕಲ್ಯಾಣದಲ್ಲಿ ಕೆಡಿ ಪೊಲೀಸ್​ ಆಫೀಸರ್​ ದೇವ್​ ಪಾತ್ರದ ಮೂಲಕ ಮತ್ತೆ ಕನ್ನಡಿಗರ ಮನೆ ಮನೆಗೆ ಬರುತ್ತಿದ್ದು, ಕಿರುತೆರೆಯ ಭರವಸೆಯ ಖಳನಾಯಕರಾಗುವ ಎಲ್ಲಾ ಸಾಧ್ಯತೆ ಇದೆ. ಒಟ್ನಲ್ಲಿ ಇವರ ಎಂಟ್ರಿ ಮೂಲಕ ಹಿಟ್ಲರ್​ ಕಲ್ಯಾಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದ್ದು, ಶೌರ್ಯ ಅವರಿಗೆ ಆಲ್​ ದಿ ಬೆಸ್ಟ್​.

Source: newsfirstlive.com Source link