ಕಾಶ್ಮೀರ ಕುರಿತು ವಿವಾದಾತ್ಮಕ ಪೋಸ್ಟ್​; ನವಜೋತ್ ಸಿಂಗ್ ಸಿಧು ಸಲಹೆಗಾರ ಹುದ್ದೆ ತೊರೆದ ಮಾಲಿ

ಕಾಶ್ಮೀರ ಕುರಿತು ವಿವಾದಾತ್ಮಕ ಪೋಸ್ಟ್​; ನವಜೋತ್ ಸಿಂಗ್ ಸಿಧು ಸಲಹೆಗಾರ ಹುದ್ದೆ ತೊರೆದ ಮಾಲಿ

ಶ್ರೀನಗರ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಜಮ್ಮು-ಕಾಶ್ಮೀರದ ಕುರಿತು ವಿವಾದಾತ್ಮಕ ಪೋಸ್ಟ್​ ಹಾಕಿದ್ದ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸಲಹೆಗಾರ ಮಾಲ್ವಿಂದರ್ ಸಿಂಗ್ ತಮ್ಮ ಸ್ಥಾನವನ್ನು ತೊರೆದಿದ್ದಾರೆ. ಯಾವುದೇ ಹುದ್ದೆಗೆ ರಾಜೀನಾಮೆ ನೀಡುವುದಾಗಲೀ, ಇನ್ನೊಂದು ಹುದ್ದೆ ಜವಾಬ್ದಾರಿ ತೆಗೆದುಕೊಳ್ಳುವ ಮಾತೇ ಇಲ್ಲ. ನನ್ನ ಸ್ಥಾನವನ್ನು ತೊರೆಯುತ್ತಿದ್ದೇನೆ ಎಂದು ಮಾಲ್ವಿ ತಮ್ಮ ಫೇಸ್ಬುಕ್​​ನಲ್ಲಿ ಬರೆದುಕೊಂಡಿದ್ದಾರೆ.

ಜಮ್ಮು-ಕಾಶ್ಮೀರ ವಿಚಾರದಲ್ಲಿ ಇತ್ತೀಚೆಗೆ ತೀರ ಕೆಟ್ಟದಾಗಿ ಹೇಳಿಕೆ ನೀಡಿದ್ದ ಕಾರಣ ತಮ್ಮ ಇಬ್ಬರು ಸಲಹೆಗಾರರನ್ನು ತೆಗೆದು ಹಾಕಿ ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧುಗೆ ಹೈಕಮಾಂಡ್​ ಎಚ್ಚರಿಕೆ ನೀಡಿತ್ತು. ಒಂದು ಹದ್ದುಬಸ್ತಿನಲ್ಲಿ ಇಡಿ, ಇಲ್ಲದೆ ಹೋದರೆ ಸಲಹೆಗಾರರ ಸ್ಥಾನದಿಂದ ತೆಗೆದು ಹಾಕಿ ಎಂದು ಪಂಜಾಬ್​ ಸಿಎಂ ಅಮರೀಂದರ್​​ ಸಿಂಗ್​​ ಮತ್ತು ರಾಜ್ಯ ಉಸ್ತುವಾರಿ ಹರೀಶ್ ರಾವತ್ ಕೂಡಾ ಒತ್ತಾಯಿಸಿದ್ದರು.

ಆಗಸ್ಟ್​ 11ನೇ ತಾರೀಕಿನಂದು ಸಿಧು ರಾಜಕೀಯ ವಿಶ್ಲೇಷಕರಾದ ಮಾಲಿ ಮತ್ತು ಬಾಬಾ ಪರೀದ್, ಪ್ಯಾರೆ ಲಾಲ್ ಗಾರ್ಗ್ ಎಂಬುವರನ್ನು ತಮ್ಮ ಸಲಹೆಗಾರರಾಗಿ ನೇಮಿಸಿದ್ದರು. ಇತ್ತೀಚೆಗೆ ಮಾಲಿ ಕಾಶ್ಮೀರ ಭಾರತದ ಭಾಗವಾದರೆ ವಿಶೇಷ ಸ್ಥಾನಮಾನ ರದ್ದು ಮಾಡಿದ ಅವಶ್ಯಕತೆ ಏನಿತ್ತು? ಎಂದು ಪ್ರಶ್ನಿಸಿದ್ದರು. ಜತೆಗೆ ಇಂದಿರಾ ಗಾಂಧಿ ಕುರಿತು ವಿವಾದಾತ್ಮಕ ಪೋಸ್ಟ್​ ಒಂದು ಹಾಕಿ ಹೈಕಮಾಂಡ್​​ಗೆ ಕೆಂಗಣ್ಣಿಗೆ ಗುರಿಯಾಗಿದ್ದರು.

ಇದನ್ನೂ ಓದಿ: ನವಜೋತ್​ ಸಿಂಗ್ ಸಿಧು ಅಡ್ವೈಸರ್ ಯಡವಟ್ಟು; ಮೊನ್ನೆ ದೇಶ ವಿರೋಧಿ, ಇಂದು ಇಂದಿರಾ ವಿರೋಧಿ ಟ್ವೀಟ್

Source: newsfirstlive.com Source link