‘ಹೆಣ್ಮಕ್ಕಳು ಮನೆಯಿಂದ ಹೊರ ಹೋಗೋದು ತಪ್ಪಲ್ಲ, ಜನರ ಮನಸ್ಥಿತಿ ಬದಲಾಗಬೇಕಿದೆ’

‘ಹೆಣ್ಮಕ್ಕಳು ಮನೆಯಿಂದ ಹೊರ ಹೋಗೋದು ತಪ್ಪಲ್ಲ, ಜನರ ಮನಸ್ಥಿತಿ ಬದಲಾಗಬೇಕಿದೆ’

ಬೆಂಗಳೂರು: ನಿಜಕ್ಕೂ ಮನಸ್ಸಿಗೆ ತುಂಬಾ ನೋವಾಗುತ್ತಿದೆ. ಎಷ್ಟೇ ಕಾನೂನು ಬಂದರೂ ತಡೆಯೋದಕ್ಕೆ ಆಗುತ್ತಿಲ್ಲ ಅಂತಾ ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಆಗಬೇಕು. ಇಂಥ ಘಟನೆ ಬಗ್ಗೆ ಎಷ್ಟು ಸ್ಟ್ರಾಂಗ್ ಇದ್ದರೂ ಸಾಲಲ್ಲ. ಹೆಣ್ಮಕ್ಕಳನ್ನ ಬ್ಲೇಮ್ ಮಾಡುವುದು ತಪ್ಪು ಎಂದರು. ನಂತರ ಗೃಹ ಸಚಿವರು ರಾತ್ರಿ ಆ ಯುವತಿ ಮನೆಯಿಂದ ಹೋಗಿದ್ದು ತಪ್ಪು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ಯಾವ ಉದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ ಎಂದರು.

ಅಲ್ಲದೇ ನಾನು ಅವರ ಹೇಳಿಕೆಯನ್ನ ಗಮನಿಸಿಲ್ಲ..‌ ಆದರೆ ಹೆಣ್ಮಕ್ಕಳು ಮನೆಯಿಂದ ಆ ಹೊತ್ತಲ್ಲಿ ಮನೆಯಿಂದ ಹೋಗಬಾರದು ಅಂತಾ ಬುದ್ಧಿ ಹೇಳ್ತಾರೆ. ಅದರ ಪ್ರಕಾರ ಹೇಳಿರಬಹುದು. ಹೆಣ್ಮಕ್ಕಳು ಮನೆಯಿಂದ ಹೋಗೋದು ತಪ್ಪಲ್ಲ. ಇನ್ನು ಉಡುಗೆ -ತೊಡುಗೆ ಬಗ್ಗೆ ಹೇಳ್ತಾರೆ, ಆದರೆ ಆ ಥರದ ಮನಸ್ಥಿತಿ ಬದಲಾಗಬೇಕಿದೆ ಎಂದು ಆಗ್ರಹಿಸಿದರು.

Source: newsfirstlive.com Source link