ನಟಿ ಅಪರ್ಣಾ ಎಂಟ್ರಿಗೆ ಇಡಿ ಮನೆ ಶಾಕ್​..! ಇಲ್ಲಿದೇ ನೋಡಿ ಕಂಪ್ಲೀಟ್​ ಡಿಟೈಲ್ಸ್​..

ನಟಿ ಅಪರ್ಣಾ ಎಂಟ್ರಿಗೆ ಇಡಿ ಮನೆ ಶಾಕ್​..! ಇಲ್ಲಿದೇ ನೋಡಿ ಕಂಪ್ಲೀಟ್​ ಡಿಟೈಲ್ಸ್​..

ನನ್ನರಸಿ ರಾಧೆಗೆ ದೊಡ್ಡ ಅಭಿಮಾನಿ ಬಳಗ ಇದ್ದು, ಮುದ್ದಾದ ಜೋಡಿ ಅಗಸ್ತ್ಯ ಹಾಗೂ ಇಂಚಾರಳ ಹುಸಿ ಮುನಿಸು, ಕೋಳಿ ಜಗಳ ನೋಡೊದೇ ಚಂದ.

ಅಪ್ಪನನ್ನ ಕಂಡರೇ ಉರಿದು ಬೀಳುವ ಅಗಸ್ತ್ಯನಿಗೆ ಒಂದ್​ ಸಾರಿ ಅಮ್ಮನನ್ನ ನೋಡ್ಬೇಕು ಅನ್ನೋ ಹಂಬಲ. ಕಾರಣಾಂತರಗಳಿಂದ ಅಗಸ್ತ್ಯನ ಅಪ್ಪ ಸಂತೋಷ್ ರಾಥೋಡ್‌ ಹಾಗೂ ಅಮ್ಮ ವೈದೇಹಿ ದೂರವಾಗಿದ್ದು, ಅವರ ಬದುಕಿನ ಒಂದೊಂದೇ ಕಹಿ ಘಟನೆಗಳು ಕಥೆಯಲ್ಲಿ ತೆರೆದುಕೊಳ್ಳುತ್ತಿವೆ.

blank

ಸಂತೋಷ್ ರಾಥೋಡ್‌ ತನ್ನ ಹೆಂಡತಿ ವೈದೇಹಿ ಬಗ್ಗೆ ಸತ್ಯ ಮುಚ್ಚಿಡಲು ಹಲವು ಕಾರಣಗಳಿದ್ದು, ಇದೆಲ್ಲವನ್ನು ಅಗಸ್ತ್ಯನಿಗೆ ಅರ್ಥ ಮಾಡಿಸಲು ಸಾಧ್ಯವಾಗದೇ ಒದ್ದಾಡುತ್ತಿದ್ದಾನೆ. ಇತ್ತ ಇಂಚರಾ ಪ್ರೀತಿಯ ಗಂಡನ ಒದ್ದಾಟ ನೋಡಲಾಗದೇ ಅವಳಿಗೆ ಗೊತ್ತಿರುವ ಸತ್ಯವನ್ನ ಅಗಸ್ತ್ಯನಿಗೆ ಹೇಳಲು ಹಾತೊರೆಯುತ್ತಿರುವಾಗಲೇ ಕಥೆಗೆ ಟ್ವಿಸ್ಟ್ ಸಿಕ್ಕಿದೆ. ಆ ಟ್ವಿಸ್ಟೇ ನಟಿ ಅಪರ್ಣಾ ಎಂಟ್ರಿ.

ಹೌದು, ಅಮ್ಮನ ಹುಡುಕಾಟದಲ್ಲಿರುವ ಅಗಸ್ತ್ಯನ ಮನೆಗೆ ತಾನೇ ವೈದೇಹಿ ಎಂದು ಹೇಳಿಕೊಂಡು ಮಹಿಳೆ ಬಂದಿದ್ದು, ಮನೆಯವರೆಲ್ಲ ಖುಷಿಯಲ್ಲಿ ತೆಲುತ್ತಿದ್ದರೇ ಇತ್ತ ಇಂಚರಾಳನ್ನು ಹತ್ತು ಹಲವು ಪ್ರಶ್ನೆಗಳು ಕಾಡುತ್ತಿವೆ.. ಇಷ್ಟು ಇಲ್ಲಿಯವರಗಿನ ನನ್ನರಸಿ ರಾಧೆಯ ಅಪ್​ಡೇಟ್ಸ್​.

ಇನ್ನೂ ಬಹಳ ದಿನಗಳ ನಂತರ ನಟಿ ಅಪರ್ಣಾ ಅವರು ಕಿರುತೆರೆಗೆ ಕಮ್​ಬ್ಯಾಕ್​ ಮಾಡಿದ್ದಾರೆ. ಮಜಾ ಟಾಕೀಸ್​ನಲ್ಲಿ ಬ್ಯೂಸಿಯಾಗಿದ್ದ ಅಪರ್ಣಾ ಅವರು ಮಜಾ ಟಾಕೀಸ್ ಮುಗಿದ ನಂತರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಅಪ್ಪಟ ಕನ್ನಡತಿ ಅಪರ್ಣಾ ಅವರ ಎಂಟ್ರಿಯಿಂದ ನನ್ನರಸಿ ರಾಧೆ ತಂಡಕ್ಕೆ ಹೊಸ ಕಳೆ ಬಂದಿದ್ದು, ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ.

blank

ಈ ಹಿಂದೆ ಇವಳು ಸುಜಾತಾ ಸೀರಿಯಲ್‌ನಲ್ಲಿ ನಟಿ ಅಪರ್ಣಾ ನಟಿಸಿದ್ದರು. ಆದಾದ ಬಳಿಕ ನನ್ನರಸಿ ರಾಧೆ ಧಾರವಾಹಿಗೆ ಅವರ ಮರಳಿದ್ದಾರೆ. ಒಟ್ನಲ್ಲಿ, ನಟಿ ಅಪರ್ಣಾ ಅವರ ಸ್ವಚ್ಛ ಕನ್ನಡ ಡೈಲಾಗ್​ಗಳ ಜೊತೆಗೆ ಅವರ ಅದ್ಭುತ ಅಭಿನಯವನ್ನ ಕಣ್ತುಂಬಿಕೊಳ್ಳು ಭಾಗ್ಯ ಅವರ ಅಭಿಮಾನಿಗಳಿಗೆ ಸಿಕ್ಕಿದ್ದು, ನನ್ನರಸಿ ರಾಧೆಯ ಮೂಲಕ ಮತ್ತೆ ಧಾರಾವಾಹಿ ಪ್ರವೇಶ ಮಾಡಿರುವ ನಟಿ ಅಪರ್ಣಾ ಅವರಿಗೆ ಆಲ್​ ದಿ ಬೆಸ್ಟ್​.

Source: newsfirstlive.com Source link