ಸಾಮೂಹಿಕ ಅತ್ಯಾಚಾರ: ದಯವಿಟ್ಟು ಹೆಣ್ಣುಮಕ್ಕಳನ್ನ ರಕ್ಷಣೆ ಮಾಡಿ- ಹರ್ಷಿಕಾ ಪೂಣಚ್ಚ

ಸಾಮೂಹಿಕ ಅತ್ಯಾಚಾರ: ದಯವಿಟ್ಟು ಹೆಣ್ಣುಮಕ್ಕಳನ್ನ ರಕ್ಷಣೆ ಮಾಡಿ- ಹರ್ಷಿಕಾ ಪೂಣಚ್ಚ

ಕೊಡಗು: ಮೈಸೂರು ಸಾಮೂಹಿಕ ಅತ್ಯಾಚಾರ ಕುರಿತು ನಟಿ ಹರ್ಷಿಕಾ ಪೂಣಚ್ಚ ಪ್ರತಿಕ್ರಿಯಿಸಿದ್ದು, ಮೈಸೂರಿನ‌ ಗ್ಯಾಂಗ್ ರೇಪ್ ಆಗಿದ್ದನ್ನ ಕೇಳಿ ಭಯ ಆಗ್ತಿದ್ದು, ನಾವು ಯಾವ ಕಾಲದಲ್ಲಿದ್ದೀವಿ ಅಂತ ಅರ್ಥ ಆಗ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೈಸೂರು ಬೆನ್ನಲ್ಲೇ ಬೆಳಗಾವಿಯಲ್ಲಿ ಮತ್ತೊಂದು ಕೇಸ್​​; ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ

2021 ರ ಸಮಯದಲ್ಲಿದ್ರೂ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಇಲ್ಲ ಅಂದ್ರೆ ಏನ್ ಯೋಚಿಸಬೇಕು ಅಂತ ಭಯ ಆಗ್ತಿದೆ. ದಯವಿಟ್ಟು ಹೆಣ್ಣುಮಕ್ಕಳನ್ನ ರಕ್ಷಣೆ ಮಾಡಿ. ಈ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಸುತ್ತಮುತ್ತ ಯಾವುದಾದ್ರೂ ಹೆಣ್ಣು ಮಕ್ಕಳಿಗೆ ಶೋಷಣೆಯಾದ್ರೆ ಸುಮ್ಮನೆ ಇರಬಾರದು. ಹೆಣ್ಣನ್ನು ತಾಯಿ ಸ್ಥಾನದಲ್ಲಿ ನೋಡುವ ನಮ್ಮ ದೇಶದಲ್ಲಿ ಇಂತಹ ಕೃತ್ಯಗಳು ಭಯ ಬೀಳಿಸ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Source: newsfirstlive.com Source link