ಹೊಸ ದಾಖಲೆ! ದೇಶದಲ್ಲಿ ಇಂದು ಒಂದೇ ದಿನ 90 ಲಕ್ಷ ಮಂದಿಗೆ ವ್ಯಾಕ್ಸಿನೇಷನ್

ಹೊಸ ದಾಖಲೆ! ದೇಶದಲ್ಲಿ ಇಂದು ಒಂದೇ ದಿನ 90 ಲಕ್ಷ ಮಂದಿಗೆ ವ್ಯಾಕ್ಸಿನೇಷನ್

ನವದೆಹಲಿ: ವ್ಯಾಕ್ಸಿನೇಷನ್​ನಲ್ಲಿ ಭಾರತ ಹೊಸ ದಾಖಲೆ ಬರೆದಿದ್ದು, ಇಂದು ಒಂದೇ ದಿನ ಬರೋಬ್ಬರಿ 90 ಲಕ್ಷ ಮಂದಿಗೆ ಕೊರೊನಾ ಲಸಿಕೆ ನೀಡಿಲಾಗಿದೆ ಅಂತಾ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಮೂಲಕ ದೇಶದಲ್ಲಿ ಇದುವರೆಗೆ 62 ಕೋಟಿ ಮಂದಿಗೆ ಕೊರೊನಾ ವ್ಯಾಕ್ಸಿನೇಷನ್ ಆಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಷುಕ್ ಮಂಡವಿಯಾ.. ಇಂದು 90 ಲಕ್ಷ ಮಂದಿಗೆ ಕೊರೊನಾ ವ್ಯಾಕ್ಸಿನ್ ನೀಡಿಲಾಗಿದೆ. ವ್ಯಾಕ್ಸಿನ್ ಹಾಕಿಸಿಕೊಂಡ ನಿಮ್ಮೆಲ್ಲರಿಗೂ ಧನ್ಯವಾದಗಳು. ವ್ಯಾಕ್ಸಿನೇಷನ್ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ದಾಖಲೆಯ ಪ್ರಮಾಣದಲ್ಲಿ ವ್ಯಾಕ್ಸಿನೇಷನ್ ಆಗಿದೆ ಅಂತಾ ತಿಳಿಸಿದ್ದಾರೆ. 18-44 ವಯಸ್ಸಿನೊಳಗಿನವರು 23,72,15,353 ಮಂದಿ ಫಸ್ಟ್​ ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡರೆ, 2,45,60,807 ಮಂದಿ ಎರಡನೇ ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ.

Source: newsfirstlive.com Source link