ಬಿಕಿನಿ ಫೋಟೋ ಶೇರ್​​ ಮಾಡಿ ಅಭಿಮಾನಿ ಆಸೆ ಈಡೇರಿಸಿದ ಬಾಲಿವುಡ್​​ ನಟಿ ಸೋನಾಕ್ಷಿ

ಬಿಕಿನಿ ಫೋಟೋ ಶೇರ್​​ ಮಾಡಿ ಅಭಿಮಾನಿ ಆಸೆ ಈಡೇರಿಸಿದ ಬಾಲಿವುಡ್​​ ನಟಿ ಸೋನಾಕ್ಷಿ

‘ದಬಾಂಗ್’ ಸುಂದರಿ ಸೋನಾಕ್ಷಿ ಸಿನ್ಹಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ತನಗೆ ಅನಿಸಿದ್ದನ್ನು ಟ್ವೀಟ್​​ ಮಾಡಿ ಪದೇ ಪದೇ ಟ್ರಾಲ್​​ಗೆ ಒಳಗಾಗುತ್ತಿದ್ದ ಸೋನಾಕ್ಷಿ ಟ್ವಿಟರ್​​ನಿಂದ ದೂರ ಉಳಿದರು. ಈಗ ಇನ್​ಸ್ಟಾಗ್ರಾಮ್​​ನಲ್ಲಿ ಆ್ಯಕ್ಟಿವ್​ ಇರುವ ಸೋನಾಕ್ಷಿ ಏನೋ ಒಂದು ಪೋಸ್ಟ್​ ಮಾಡುತ್ತಲೇ ಇರುತ್ತಾರೆ.

ಇತ್ತೀಚೆಗೆ ಸೋನಾಕ್ಷಿ ಸಿನ್ಹಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಆಸ್ಕ್ ಮೀ ಎನಿಥಿಂಗ್​​​​ ಎಂಬ ಹೆಸರಿನಲ್ಲಿ ಅಭಿಮಾನಿಗಳ ಜತೆ ಸಂವಾದ ಮಾಡಿದ್ದರು. ಈ ವೇಳೆ ಅಭಿಮಾನಿಯೊಬ್ಬ ನಿಮ್ಮ ಬಿಕಿನಿ ಫೋಟೋ ಹಾಕಿ ಎಂದು ಕೇಳಿದ್ದಾನೆ. ಈಗ ನಟಿ ಚಿರತೆ ಶೈಲಿಯ ಬಿಕಿನಿಯ(ಟು ಪೀಸ್) ಚಿತ್ರ ಹಂಚಿಕೊಂಡು ಸಖತ್ ಆಗಿ ಉತ್ತರ ಕೊಟ್ಟಿದ್ದಾರೆ.

blank

ನಿಮ್ಮ ಪಾದಗಳ ಫೋಟೋ ಹಾಕಿ ಎಂದ ಅಭಿಮಾನಿಗೆ ಆಗೋದೆ ಇಲ್ಲ ಎಂದು ಸೋನಾಕ್ಷಿ ತಮ್ಮದೇ ದಾಟಿಯಲ್ಲಿ ಉತ್ತರ ನೀಡಿದ್ದಾರೆ. ದೇಹದ ತೂಕ ಕಡಿಮೆಗೆ ಏನು ಮಾಡಬೇಕು ಎಂದ ಮತ್ತೋರ್ವ ಫ್ಯಾನ್​ಗೆ ಗಾಳಿ ಸೇವನೆ ಮಾಡಿ ಎಂದಿದ್ದಾರೆ.

ಇದನ್ನೂ ಓದಿ: ಅದೇನು ಓದುತ್ತಿರಬಹುದು ಕೆಜಿಎಫ್​ ಬೆಡಗಿ? ಮೌನವಾಗಿ ಗಲಿ ಗಲಿಮೇ ಹುಡುಗಿ ಹೇಳೋದೇನು?

Source: newsfirstlive.com Source link