ಭಾರತದ ಪರ ಆಡಲು ಮತ್ತೆ ಮೈದಾನಕ್ಕೆ ನುಗ್ಗಿದ ಜಾರ್ವೋ.. ಗ್ರೌಂಡ್​​ನಲ್ಲಿ ಬಿಗ್​ ಹೈಡ್ರಾಮಾ..!

ಭಾರತದ ಪರ ಆಡಲು ಮತ್ತೆ ಮೈದಾನಕ್ಕೆ ನುಗ್ಗಿದ ಜಾರ್ವೋ.. ಗ್ರೌಂಡ್​​ನಲ್ಲಿ ಬಿಗ್​ ಹೈಡ್ರಾಮಾ..!

ಲಾರ್ಡ್ಸ್​ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಜೆರ್ಸಿ ತೊಟ್ಟು ಫೀಲ್ಡಿಂಗ್​​ ಮಾಡೋದಕ್ಕೆ ಬಂದಿದ್ದ ಜಾರ್ವೋ ಇದೀಗ ಮತ್ತೆ ಮೈದಾನಕ್ಕೆ ಬಂದು ಭದ್ರತಾ ಸಿಬ್ಬಂದಿಗೆ ಮತ್ತೆ ಗೊಂದಲ ಹುಟ್ಟಿಸಿದ್ದಾನೆ. ಲೀಡ್ಸ್​​​​ ಟೆಸ್ಟ್​​ನಲ್ಲಿ ಆನ್​ ಫೀಲ್ಡ್​​​ಗೆ ನುಗಿದ್ದಲ್ಲದೆ ಕೆಲಕಾಲ ನಾನೂ ಬ್ಯಾಟಿಂಗ್​​​ ಮಾಡಬೇಕು ಎಂದು ಪಟ್ಟುಹಿಡಿದಿದ್ದಾನೆ.

ಇದನ್ನೂ ಓದಿ: ಐಪಿಎಲ್​​ಗಾಗಿ ಆಟಗಾರರಿಗೆ ಹೆಚ್ಚಿದ ಬೇಡಿಕೆ.. ಜೋರಾಗಿದೆ ರಿಪ್ಲೇಸ್​ಮೆಂಟ್​​ ಸರ್ಕಸ್​​.!

ಘಟನೆಯ ಚಿತ್ರಣ: ಪ್ರಸ್ತುತ ಲೀಡ್ಸ್​​​​​​ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್​​ನಲ್ಲಿ ಟೀಮ್​ ಇಂಡಿಯಾ ಮೂರನೇ ಸೆಷನ್​ ಆರಂಭದಲ್ಲಿ ರೋಹಿತ್​ ಶರ್ಮಾ ವಿಕೆಟ್​ ಒಪ್ಪಿಸಿದ್ರು. ಆಗ ವಿರಾಟ್​ ಕೊಹ್ಲಿ ಕ್ರಿಸ್​ಗೆ ಬರಬೇಕಿತ್ತು. ಆದರೆ ಜಾರ್ವೋ ಮೈದಾನಕ್ಕೆ ನುಗ್ಗಿದ್ದಾನೆ.

ತಲೆಗೆ ಹೆಲ್ಮೆಟ್​ ಧರಿಸಿ, ಬ್ಯಾಟ್​ ಹಿಡಿದು, ಪ್ಯಾಡ್​​​ ಕಟ್ಟಿಕೊಂಡು ನಾನು ಬ್ಯಾಟಿಂಗ್​ ಮಾಡ್ತೇನೆ ಎಂದು ಬಂದು ಅಚ್ಚರಿ ಮೂಡಿಸಿದ್ದಾನೆ. ಮೊದಲ ಬಾರಿಗೆ ನುಗ್ಗಿದ್ದಾಗ ಧರಿಸಿದ್ದ ಜೆರ್ಸಿಯೇ ಇಂದು ಕೂಡ ತೊಟ್ಟಿದ್ರು. ಆ ಬಳಿಕ ಭದ್ರತಾ ಸಿಬ್ಬಂದಿ ಜಾರ್ವೋನನ್ನು ಮೈದಾನದಿಂದ ಹೊರಗೆ ಹಾಕಿದ್ದಾರೆ. ಆದರೆ ಆತನನ್ನ ಹೊರ ಹಾಕುವಲ್ಲಿ ಸಿಬ್ಬಂದಿ ಹರಸಾಹಸಪಟ್ರು.

ಇದನ್ನೂ ಓದಿ: ಆಂಗ್ಲರ ರಣವ್ಯೂಹ ಭೇದಿಸಲು ವಿಫಲವಾಗ್ತಿರೋ ಕೊಹ್ಲಿಗೆ ಕಾಡ್ತಿದೆಯಾ ‘ಆ’ ತಪ್ಪಿನ ನೆನಪು?

ಲಾರ್ಡ್ಸ್​​ನಲ್ಲೂ ಇದೇ ಆಗಿತ್ತು: ಮೈದಾನಕ್ಕೆ ಪ್ರವೇಶಿಸಿದ ಜಾರ್ವೋ ಬಿಸಿಸಿಐ ಲೋಗೋವಿದ್ದ ಭಾರತ ತಂಡದ ಜರ್ಸಿಯಂತಹ ಜರ್ಸಿ ಧರಿಸಿದ್ರು. ಈ ಕಾರಣಕ್ಕಾಗಿ ಈ ಜಾರ್ವೋ ಮೈದಾನಕ್ಕೆ ಪ್ರವೇಶಿಸಲು ಸುಲಭವಾಗಿತ್ತು. ಆತ ಮಧ್ಯ ಮೈದಾನಕ್ಕೆ ಬಂದ ನಂತರ, ಭದ್ರತಾ ಸಿಬ್ಬಂದಿಗೆ ಆತನ ಬಗ್ಗೆ ನಿಜಾಂಶ ಗೊತ್ತಾಗಿತ್ತು. ಬಳಿಕ ಆತನನ್ನು ಮೈದಾನದಿಂದ ಹೊರ ಹೋಗುವಂತೆ ಭದ್ರತಾ ಸಿಬ್ಬಂದಿ ಕೇಳಿ ಕೊಂಡಿದ್ದಾರೆ. ಆದರೆ ಆತ ತನ್ನ ಟೀ ಶರ್ಟ್ ಮೇಲಿರುವ ಬಿಸಿಸಿಐ ಲೋಗೋವನ್ನು ತೋರಿಸುತ್ತಾ ಅವರಿಗೆ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ರು.

ಇದನ್ನೂ ಓದಿ: ಐಪಿಎಲ್​​ಗೂ ಮುನ್ನ ವೈಷ್ಣೋ ದೇವಿ ದರ್ಶನ ಪಡೆದ ಶಿಖರ್ ಧವನ್

 

Source: newsfirstlive.com Source link