‘ಪ್ರತಿನಿತ್ಯ ಲೈಂಗಿಕ ಕ್ರಿಯೆ ನಡೆಸಿ, ವೈದ್ಯರನ್ನು ದೂರಯಿಡಿ’ ಹೀಗಂತಿದೆ ಹೊಸ ಅಧ್ಯಯನ

‘ಪ್ರತಿನಿತ್ಯ ಲೈಂಗಿಕ ಕ್ರಿಯೆ ನಡೆಸಿ, ವೈದ್ಯರನ್ನು ದೂರಯಿಡಿ’ ಹೀಗಂತಿದೆ ಹೊಸ ಅಧ್ಯಯನ

ಆ್ಯಪಲ್​​ ಡೇ ಕೀಪ್​​ ಡಾಕ್ಟರ್ಸ್​ ಅವೇ ಎಂಬ ಗಾತೆ ಮಾತು ಕೇಳ್ತಿದ್ವಿ, ಈಗ ಪ್ರತಿದಿನ ಲೈಂಗಿಕ ಕ್ರಿಯೆ ನಡೆಸಿ, ವೈದ್ಯರನ್ನು ದೂರಯಿಡಿ ಎಂಬ ಅಚ್ಚರಿ ವಿಚಾರವೊಂದು ಇತ್ತೀಚೆಗೆ ನಡೆದ ಅಧ್ಯಯನದಿಂದ ಹೊರಬಿದ್ದಿದೆ. ಲೈಂಗಿಕ ಕ್ರಿಯೆ ವ್ಯಾಯಾಮದ ಒಂದು ಒಳ್ಳೆ ವಿಧಾನ, ಇದೊಂದು ಶಾರೀರಿಕ ಕ್ರಿಯೆ. ಯಾರು ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೋ ಅವರ ಶರೀರದಲ್ಲಿ ಆಗುವಂತಹಾ ಬದಲಾವಣೆಗಳು ವರ್ಕ್ಔಟ್ ಮಾಡುವಾಗಲೂ ಆಗುತ್ತದೆ. ಇದರಿಂದ ನಿಮ್ಮ ಆರೋಗ್ಯವೂ ಉತ್ತಮವಾಗಿರಲಿದೆ ಎನ್ನಲಾಗಿದೆ.

ಅನೇಕ ರೋಗಗಳು ಹತ್ತಿರ ಸುಳಿಯುವುದಿಲ್ಲ

ಲೈಂಗಿಕ ಕ್ರಿಯೆ ಕೇವಲ ದೇಹದ ಸುಖಕ್ಕೆ ಮಾತ್ರವಲ್ಲ, ಇದರಿಂದ ಅನೇಕ ರೋಗಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ. ಪ್ರತಿನಿತ್ಯ ಲೈಂಗಿಕ ಕ್ರಿಯೆ ನಡೆಸುವುದರಿಂದ ಅನೇಕ ಉಪಯೋಗಗಳು ಇವೆ. ಮನುಷ್ಯ ಶಾರೀರಿಕವಾಗಿ ಆರೋಗ್ಯವಾಗಿರುತ್ತಾನೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಗಾಢನಿದ್ರೆ ಮಾಡಬಹುದು

ಲೈಂಗಿಕ ಕ್ರಿಯೆ ಎಲ್ಲಾ ವಯಸ್ಕರಿಗೂ ಉತ್ತಮ. ನಿತ್ಯದ ಲೈಂಗಿಕ ಕ್ರಿಯೆ ನಡೆಸುವುದರಿಂದ ಗಾಢನಿದ್ರೆಗೆ ಜಾರಬಹುದು. ಒತ್ತಡದಿಂದ ಮುಕ್ತಿ ಹೊಂದುವ ಮೂಲ ಕ್ಯಾಲೋರಿಗಳನ್ನು ಹೆಚ್ಚಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದಂತೆ.

ರೋಗ ನಿರೋಧಕ ಶಕ್ತಿ ಹೆಚ್ಚಳ

ಲೈಂಗಿಕ ಕ್ರಿಯೆ ನಿಯಮಿತವಾಗಿದ್ದಷ್ಟೂ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ಜ್ವರ, ಶೀತ ನೆಗಡಿಯಂತಹ ವೈರಸ್ ಆಧಾರಿತ ಸಾಮಾನ್ಯ ರೋಗಗಳಿಂದ ದೇಹ ಇನ್ನಷ್ಟು ಸಬಲವಾಗುತ್ತದೆ.

ಮೂಳೆ ಮತ್ತು ಮಾಂಸಗಳ ಗಟ್ಟಿಯಾಗುತ್ತವೆ

ಸೆಕ್ಸ್ ವ್ಯಾಯಾಮದ ಒಂದು ಒಳ್ಳೆ ವಿಧಾನ. ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಮೂಳೆ ಹಾಗೂ ಮಾಂಸ ಖಂಡಗಳ ಬಲಗೊಳುತ್ತವೆ.

ಹೃದಯಸ್ತಂಭನದ ಸಮಸ್ಯೆ ಕಡಿಮೆಯಾಗಲಿದೆ

ಅಧ್ಯಯನದ ಪ್ರಕಾರ ಕನಿಷ್ಟ ವಾರಕ್ಕೆ ಎರಡು ಸಲ ಲೈಂಗಿಕ ಕ್ರಿಯೆ ನಡೆಸಿದರೆ ಪುರುಷರಿಗೆ ಎದುರಾಗುವ ಹೃದಯಸ್ತಂಭನದ ಸಮಸ್ಯೆ ಕಡಿಮೆಯಾಗಲಿದೆ.

ತಲೆನೋವು ಕಡಿಮೆಯಾಗಲಿದೆ

ಒಂದು ವೇಳೆ ನಿಮಗೆ ಸತತವಾಗಿ ತಲೆನೋವು ಕಾಡುತ್ತಿದ್ದರೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಿ. ಇದರಿಂದ ದೇಹದಲ್ಲಿ ಆಕ್ಸಿಟೋಸಿನ್ ಎಂಬ ರಸದೂತ ಸ್ರವಿಸುವ ಪ್ರಮಾಣ ಹೆಚ್ಚುತ್ತದೆ. ಬಳಿಕ ನರಗಳ ಸಡಿಲಿಸಿ ಹೆಚ್ಚಿನ ರಕ್ತಸಂಚಾರ ಹರಿಸುವ ಮೂಲಕ ತಲೆನೋವು ಕಡಿಮೆಯಾಗಲಿದೆ.

ಹೊಸ ರಕ್ತ ಉತ್ಪಾದನೆ

ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಹೃದಯದ ಬಡಿತ ಹೆಚ್ಚುತ್ತದೆ. ಜನನಾಂಗಗಳಿಗೆ ತಲುಪುವ ರಕ್ತದ ಪ್ರಮಾಣ ಕೂಡ ಹೆಚ್ಚುತ್ತದೆ. ಇದರಿಂದ ಹೊಸ ರಕ್ತ ದೇಹದ ಎಲ್ಲಾ ಜೀವಕೋಶಗಳಿಗೆ ತಲುಪುತ್ತದೆ.

Source: newsfirstlive.com Source link