ನೀಡಲ್ ಐ ಮಳಿಗೆ ಉದ್ಘಾಟಿಸಿದ ಪಾಯಲ್ ರಜಪೂತ್

ಬೆಂಗಳೂರು: ಕೊರೊನಾ ಕಾಟದ ಮಧ್ಯೆಯೂ ಬೆಂಗಳೂರಿನಲ್ಲಿ ಫ್ಯಾಷನ್ ಸೆನ್ಸ್ ಆ್ಯಕ್ಟಿವ್ ಆಗಿದ್ದು, ಬಾಣಸವಾಡಿಯ ನೀಡಲ್ ಐ ಇದಕ್ಕೆ ಸಾಕ್ಷಿಯಾಗಿದೆ.

ವೇದಿಕ್ ವೇವ್ಸ್ ಬ್ರಾಂಡಿಂಗ್ ಜೊತೆ ಕೈ ಜೋಡಿಸಿರುವ ನೀಡಲ್ ಐ, ಇದೀಗ ಹೊಸ ಶೈಲಿಯ ಉಡುಪುಗಳನ್ನು ಪರಿಚಯಿಸುತ್ತಿದೆ. ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕನಸಿನಲ್ಲೇ ನೀಡಲ್ ಐ ತನ್ನ ಮಳಿಗೆಯನ್ನು ಓಪನ್ ಮಾಡಿದೆ. ವಿಶೇಷವೆಂದರೆ ಹೆಡ್ ಬುಷ್ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡುತ್ತಿರುವ ಖ್ಯಾತ ನಟಿ ಪಾಯಲ್ ರಜಪೂತ್ ಈ ಮಳಿಗೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ, ಆಲ್ ದಿ ಬೆಸ್ಟ್ ಹೇಳಿದರು. ಇದನ್ನೂ ಓದಿ: ಜಪ್ತಿಯಾಗಿದ್ದ ಅಮಿತಾಭ್ ಬಚ್ಚನ್ ಕಾರು ರಿಲೀಸ್

ಬೆಂಗಳೂರಿನ ವಾತಾವರಣ ಯಾವಾಗಲೂ ಖುಷಿ ಕೊಡುತ್ತೆ. ಈ ರೀತಿಯ ಸಾಂಪ್ರದಾಯಿಕ ಉಡುಪುಗಳು ನನಗೂ ತುಂಬಾ ಇಷ್ಟ. ನಾನು ಇನ್ನು ಮುಂದೆ ಸಿನಿಮಾಗಳಲ್ಲೂ ಇಂತಹ ಡಿಸೈನ್ ಸೀರೆಗಳನ್ನು ಉಡುತ್ತೇನೆ ಎಂದು ಫ್ಯಾಷನ್ ಜಗತ್ತಿನ ಹೊಸ ದೃಷ್ಟಿಕೋನಕ್ಕೆ ಸೈ ಎಂದರು.

Source: publictv.in Source link