ಸಿಲ್ವರ್​ ಸ್ಕ್ರೀನ್​ಗೆ ಎಂಟ್ರಿಯಾಗ್ತಿದ್ದಾರೆ ಜ್ಯೂ. ಗೋಲ್ಡನ್​ ಸ್ಟಾರ್; ಗಣೇಶ್​ ಮಗ ಬಣ್ಣ ಹಚ್ತಿರೋ ಸಿನಿಮಾ ಯಾವ್ದು?

ಸಿಲ್ವರ್​ ಸ್ಕ್ರೀನ್​ಗೆ ಎಂಟ್ರಿಯಾಗ್ತಿದ್ದಾರೆ ಜ್ಯೂ. ಗೋಲ್ಡನ್​ ಸ್ಟಾರ್; ಗಣೇಶ್​ ಮಗ ಬಣ್ಣ ಹಚ್ತಿರೋ ಸಿನಿಮಾ ಯಾವ್ದು?

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸುಪುತ್ರ ವಿಹಾನ್ ಈಗ ತನ್ನ ಅಪ್ಪನ ಸಿನಿಮಾದಲ್ಲಿ ಮಿಂಚಲು ಸಜ್ಜಾಗಿದ್ದಾರೆ.. ಗಾಳಿಪಟ 2 ಸಿನಿಮಾದಲ್ಲಿ ವಿಹಾನ್ ನಟಿಸಿದ್ದಾರೆ ಅನ್ನೋ ವಿಷಯ ಕೆಲ ದಿನಗಳ ಹಿಂದೆ ಹೊರ ಬಂದಿತ್ತು.. ಈಗ ತನ್ನ ಅಪ್ಪನ ಮತ್ತೊಂದು ಸಿನಿಮಾದಲ್ಲಿ ಗಣೇಶ್ ಬಣ್ಣ ಹಚ್ಚುತ್ತಿದ್ದಾರೆ.

ಕಲೆ ಅನ್ನೋದು ಬ್ಲಡ್​​ನಲ್ಲೇ ಬಂದಿರುತ್ತೆ ಅಂತಾರೆ.. ಅದು ನಿಜ ಅನ್ಸುತ್ತೆ.. ಹುಟ್ಟು ಪ್ರತಿಭಾವಂತ ಗೋಲ್ಡನ್ ಸ್ಟಾರ್ ಗಣೇಶ್​.. ಕಾಮಿಡಿ ಟೈಮ್ ಗಣೇಶ್ ಆಗಿ ಕನ್ನಡಿಗರ ಮನೆ ಮಾತಾದ ಗಣೇಶ್ ಮುಂಗಾರು ಮಳೆ ನಂತರ ಗೋಲ್ಡನ್ ಸ್ಟಾರ್ ಆಗಿದ್ದನ್ನ ಕನ್ನಡಿಗರು ಕಂಡಿದ್ದಾರೆ.. ಈ ವರ್ಷ ಸಾಲು ಸಾಲು ನಿರೀಕ್ಷಿತ ಸಿನಿಮಾಗಳಲ್ಲಿ ನಿಂತಿರೋ ಬಂಗಾರದ ತಾರೆ ಗಣಪ ತನ್ನ ಮಗನಿಗೆ ಆಗಾಗ ಬಣ್ಣ ಹಚ್ಚಿಸಿ ಖುಷಿ ಪಡುತ್ತಿದ್ದಾರೆ..

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ಗಣೇಶ್ ದಂಪತಿಗೆ ಆರತಿಗೊಬ್ಬಳು ಕೀರ್ತಿಗೊಬ್ಬ ಅನ್ನುವಂತೆ ಇಬ್ಬರು ಮುದ್ದಾದ ಮಕ್ಕಳು.. ಅಪ್ಪ ಅಮ್ಮನಂತೆ ಇಬ್ಬರೂ ಕಲಾವಿದರು.. ಗಣೇಶ್ ಅವರ ಮಗಳು ಈಗಾಲೇ ತನ್ನ ಅಪ್ಪನ ಸಿನಿಮಾದಲ್ಲೇ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ.. ಈಗ ಮಗನ ಸರದಿ..

blank

ವಿಹಾನ್ ಗಣೇಶ್.. ಗೋಲ್ಡನ್​ ಗಣಿಯ ಮುದ್ದಿನ ಮಗ.. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ತನ್ನ ಅಪ್ಪನ ಜೊತೆಗೆ ಗೋಲ್ಡನ್ ಫೋಸ್ ಕೊಡ್ತಾನೇ ಇರ್ತಾನೆ.. ಈಗ ಅಪ್ಪನ ಜೊತೆ ಗಾಳಿಪಟ ಹಾರಿಸಿ ಸುದ್ದಿಯಾಗಿದ್ದರು.. ಈಗ ಗಣೇಶ್ ಅವರ ಮತ್ತೊಂದು ಸಿನಿಮಾದಲ್ಲಿ ವಿಹಾನ್ ಗಣೇಶ್ ಅಭಿನಯ ಮಾಡಿದ್ದಾರೆ.. ಆ ಸಿನಿಮಾ ಯಾವುದು ಅನ್ನೋ ಪ್ರಶ್ನೆಗೆ ಉತ್ತರ ಸಖತ್..

ಸಖತ್.. ಸಿಂಪಲ್ ಸುನಿ ನಿರ್ದೇಶನದ ನಿರೀಕ್ಷಿತ ಸಿನಿಮಾ.. ಈ ಸಖತ್ ಸಿನಿಮಾದಲ್ಲಿ ಫಸ್ಟ್ ಟೈಮ್ ವಿಶೇಷ ಚೇತನನ ಪಾತ್ರದಲ್ಲಿ ಗಣೇಶ್ ಕಾಣಿಸಿಕೊಂಡಿದ್ದಾರೆ.. ಈಗ ಇದೇ ಸಖತ್ ಸಿನಿಮಾದಲ್ಲಿ ಜೂನಿಯರ್ ಗೋಲ್ಡನ್ ಸ್ಟಾರ್ ಅಭಿನಯ ಮಾಡಿದ್ದಾನೆ.. ಇವತ್ತು ವಿಹಾನ್ ಬರ್ತ್​​ಡೇಯಾಗಿರೋ ಕಾರಣ ಸಖತ್ ಸಿನಿಮಾ ತಂಡ ವಿಹಾನ್ ಪೋಸ್ಟರ್ ಒಂದನ್ನ ಹೊರ ಬಿಟ್ಟು ಗುಟ್ಟಾಗಿದ್ದ ವಿಚಾರವನ್ನ ರಟ್ಟು ಮಾಡಿದೆ.. ವಿಹಾನ್ ಬರ್ತ್​ಡೇ ಪೋಸ್ಟರ್ ಸೋಶಿಯಲ್ ಸಮುದ್ರದಲ್ಲಿ ಭಾರಿ ಮೆಚ್ಚುಗೆಯ ಸಂದೇಶ ತೇಲಾಡುತ್ತಿವೆ..​​​​

Source: newsfirstlive.com Source link