ಕಾಶ್ಮೀರದಲ್ಲಿ ರಕ್ತಪಾತಕ್ಕೆ ಪ್ಲಾನ್? ತಾಲಿಬಾನ್ ನೆರವು ಕೇಳಿದ ಜೈಶ್-ಏ-ಮಹಮ್ಮದ್

ಕಾಶ್ಮೀರದಲ್ಲಿ ರಕ್ತಪಾತಕ್ಕೆ ಪ್ಲಾನ್? ತಾಲಿಬಾನ್ ನೆರವು ಕೇಳಿದ ಜೈಶ್-ಏ-ಮಹಮ್ಮದ್

ಕಾಬೂಲ್​​: ಅಫ್ಘಾನಿಸ್ತಾನವನ್ನು ತಾಲಿಬಾನ್​​​ ವಶಪಡಿಸಿಕೊಂಡ ಬಳಿಕ ಉಗ್ರರ ಕಣ್ಣು ಜಮ್ಮು-ಕಾಶ್ಮೀರದ ಮೇಲೆ ಬಿದ್ದಿದೆ. ತಾಲಿಬಾನ್ ಆಕ್ರಮಣಕ್ಕೆ ಯಶಸ್ಸು ಸಿಕ್ಕ ಬೆನ್ನಲ್ಲೇ ಈಗ ಪಾಕಿಸ್ತಾನ ಮತ್ತು ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಜಮ್ಮು-ಕಾಶ್ಮೀರ ಸಂಪೂರ್ಣ ಕೈವಶ ಮಾಡಲು ಸಜ್ಜಾಗಿವೆ ಎನ್ನಲಾಗಿದೆ. ಈ ವಿಚಾರ ಚರ್ಚಿಸುವ ಸಲುವಾಗಿಯೇ ಪಾಕ್​​ ಬೆಂಬಲಿತ ಜೈಶ್-ಏ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲೌನಾ ಮಸೂದ್ ಅಜರ್ ಕಾಬೂಲ್‌ನಲ್ಲಿ ತಾಲಿಬಾನ್ ನಾಯಕರನ್ನು ಭೇಟಿಯಾಗಿದ್ದಾನೆ.

ಇನ್ನು, ತಾಲಿಬಾನ್​ ನಾಯಕರನ್ನು ಭೇಟಿ ಮಾಡಿದ ಮೌಲೌನಾ ಮಸೂದ್ ಅಜರ್, ಕಾಶ್ಮೀರ ಕಣಿವೆಯ ವಶಕ್ಕೆ ನೆರವು ನೀಡಿ ಎಂದು ಮನವಿ ಮಾಡಿದ್ದಾನೆ. ಅಫ್ಘಾನಿಸ್ತಾನ ಸರ್ಕಾರವನ್ನು ಕಿತ್ತೊಗೆದಿದ್ದಕ್ಕೆ ನನಗೆ ಸಂತೋಷವಾಗಿದೆ. ಇದೇ ಮಾದರಿ ಕಾಶ್ಮೀರದಲ್ಲೂ ಹೋರಾಟ ಮಾಡಬೇಕಿದೆ. ಇದಕ್ಕೆ ನಿಮ್ಮ ನೆರವು ಅಗತ್ಯ ಎಂದು ಅಜರ್​​​​​ ಕೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ.

ತಾಲಿಬಾನ್ ಹಾಗೂ ಜೈಶ್-ಏ-ಮೊಹಮ್ಮದ್ ಉಗ್ರ ಸಂಘಟನೆಯ ಉದ್ದೇಶ ಒಂದೇ. ಎರಡು ಸಂಘಟನೆಗಳು ಶರಿಯಾ ಕಾನೂನು ಪಾಲನೆ ಮಾಡುತ್ತವೆ. 1999ರಲ್ಲಿ ಜೈಶ್-ಏ-ಮೊಹಮ್ಮದ್ ಉಗ್ರ ಸಂಘಟನೆ ಸ್ಥಾಪಿಸಿದ ಅಜರ್, ಜಮ್ಮು ಕಾಶ್ಮೀರದ ಮೇಲೆ ದಾಳಿ ನಡೆಸುತ್ತಲೇ ಇದ್ದಾನೆ.

ಇದನ್ನೂ ಓದಿ: ಕಾಶ್ಮೀರ ಕುರಿತು ವಿವಾದಾತ್ಮಕ ಪೋಸ್ಟ್​; ನವಜೋತ್ ಸಿಂಗ್ ಸಿಧು ಸಲಹೆಗಾರ ಹುದ್ದೆ ತೊರೆದ ಮಾಲಿ

Source: newsfirstlive.com Source link