10 ಲಕ್ಷ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಕೇಜ್ರಿವಾಲ್​ಗೆ​ ಜೊತೆಯಾದ ಸೋನುಸೂದ್

10 ಲಕ್ಷ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಕೇಜ್ರಿವಾಲ್​ಗೆ​ ಜೊತೆಯಾದ ಸೋನುಸೂದ್

ನವದೆಹಲಿ: ಬಾಲಿವುಡ್ ನಟ, ಕೊಡುಗೈ ದಾನಿ ಎಂದೇ ಜನಪ್ರಿಯತೆ ಗಳಿಸಿರೋ ಸೋನು ಸೂದ್ ಇದೀಗ ದೆಹಲಿ ಸರ್ಕಾರದ ದೇಶ್​ ಕಿ ಮೆಂಟರ್ ಹೆಸರಿನ ಕಾರ್ಯಕ್ರಮಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಆಪ್ ಸರ್ಕಾರ ಈ ಕಾರ್ಯಕ್ರಮವನ್ನು ದೇಶದಲ್ಲೇ ಅತೀದೊಡ್ಡ ಕಾರ್ಯಕ್ರಮವೆಂದು ಘೋಷಿಸಿಕೊಂಡಿದೆ. ಈ ಸ್ಕೀಮ್​ನ ಅಡಿಯಲ್ಲಿ 3 ಲಕ್ಷ ವೃತ್ತಿಪರ ಯುವಕರು ದೆಹಲಿಯ ಸರ್ಕಾರಿ ಶಾಲೆಗಳ 10 ಲಕ್ಷ ಮಕ್ಕಳ ಭವಿಷ್ಯವನ್ನ ಉಜ್ವಲಗೊಳಿಸಲು ಮಾರ್ಗದರ್ಶನ ನೀಡಲಿದ್ದಾರೆ.

ಇದನ್ನೂ ಓದಿ: ಆಫ್ರಿಕಾ ಖಂಡದ ಅತಿ ಎತ್ತರದ ಪರ್ವತವನ್ನ ಸೈಕಲ್​ನಲ್ಲಿ ಏರಿದ ಸೋನು ಸೂದ್​ ಅಭಿಮಾನಿ

ಸದ್ಯ ಕಾರ್ಯಕ್ರಮವನ್ನು ಔಪಚಾರಿಕವಾಗಿ ಪ್ರಾರಂಭಿಸಲಾಗಿದ್ದು ಸದ್ಯದಲ್ಲೇ ಲಾಂಚ್ ಆಗಲಿದೆ. ಪ್ರಾರಂಭಿಕ ಹಂತದಲ್ಲಿ ಕಾರ್ಯಕ್ರಮ ಯಶಸ್ಸು ಕಂಡ ಹಿನ್ನೆಲೆ ರಾಷ್ಟ್ರ ಮಟ್ಟದಲ್ಲಿ ಈ ಕಾರ್ಯಕ್ರಮ ಪ್ರಾರಂಭಿಸಲಾಗುತ್ತಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಈ ಕಾರ್ಯಕ್ರಮ ಸೆಪ್ಟೆಂಬರ್ ಮಧ್ಯಂತರದಲ್ಲಿ ಅಧಿಕೃತವಾಗಿ ಲಾಂಚ್ ಆಗಲಿದೆ.

ಇದನ್ನೂ ಓದಿ: ನನ್ನ ಕೈಗೆ ರಾಖಿ ಕಟ್ಟಿ, ಆದ್ರೆ ಕಾಲಿಗೆ ಬೀಳಬೇಡಿ; ನಟ ಸೋನು ಸೂದ್​ ಹೀಗಂದಿದ್ಯಾರಿಗೆ?

ಈ ಕಾರ್ಯಕ್ರಮದ ಮೂಲ ಉದ್ದೇಶ ಕೆಳವರ್ಗದಿಂದ ಬಂದ ಮಕ್ಕಳಿಗೆ ಭವಿಷ್ಯದಲ್ಲಿ ವೃತ್ತಿಪರರಾಗಲು ಬೇಕಾದ ಮಾರ್ಗದರ್ಶನಗಳನ್ನು ನೀಡುವುದು, ಕೌನ್ಸೆಲಿಂಗ್ ಮಾಡುವುದಾಗಿದೆ. ಈ ಮಕ್ಕಳ ಸಂಪರ್ಕಕ್ಕೆ ಉತ್ತಮ ವಿದ್ಯಾಭ್ಯಾಸ ಹೊಂದಿದ ಯುವಕರನ್ನು ತರಲಾಗುತ್ತದೆ. ಮೆಂಟರ್​ಗಳು ತಲಾ 4-5 ಮಕ್ಕಳನ್ನ ವೃತ್ತಿಪರರಾಗಿ ರೂಪಿಸುವುದರ ಜೊತೆಗೆ ಅವರ ಸಮಸ್ಯೆಗಳನ್ನು ಬಗೆಹರಿಸಲೂ ಸಹಾಯ ಮಾಡಲಿದ್ದಾರೆ ಎನ್ನಲಾಗಿದೆ.

ಸೋನು ಸೂದ್ ಸಹ ಕೆಲವು ಮಕ್ಕಳನ್ನು ಟ್ರೈನ್​ ಮಾಡಲಿದ್ದು ಅವರ ಭವಿಷ್ಯ ಉತ್ತಮವಾಗುವಂತೆ ಕಾಳಜಿ ತೆಗೆದುಕೊಳ್ಳಲಿದ್ದಾರಂತೆ. ಅಲ್ಲದೇ ಶಿಕ್ಷಿತ ಯುವಕರನ್ನು ಮಕ್ಕಳಿಗೆ ಟ್ರೈನ್ ಮಾಡುವಂತೆ ಮನವಿ ಮಾಡಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದ ಮೂಲಕ ಒಟ್ಟು 10 ಲಕ್ಷ ಮಕ್ಕಳನ್ನ ತಲುಪುವ ಗುರಿ ಇಟ್ಟುಕೊಳ್ಳಲಾಗಿದೆಯಂತೆ.

Source: newsfirstlive.com Source link