ಜಮ್ಮು-ಕಾಶ್ಮೀರ ಸಮಸ್ಯೆಯನ್ನ ಪಾಕ್​​, ಭಾರತ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಿ; ತಾಲಿಬಾನ್​​

ಜಮ್ಮು-ಕಾಶ್ಮೀರ ಸಮಸ್ಯೆಯನ್ನ ಪಾಕ್​​, ಭಾರತ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಿ; ತಾಲಿಬಾನ್​​

ನವದೆಹಲಿ: ಭಾರತದ ಜಮ್ಮು-ಕಾಶ್ಮೀರ ವಶಕ್ಕೆ ಪಡೆಯಲು ನಮಗೆ ತಾಲಿಬಾನ್​​ ಸಹಾಯ ಮಾಡಲಿದೆ ಎಂದು ಪಾಕಿಸ್ತಾನ ಹೇಳಿತ್ತು. ಈ ಬೆನ್ನಲ್ಲೇ ಜಮ್ಮು-ಕಾಶ್ಮೀರದ ಕುರಿತು ಭಾರತ-ಪಾಕಿಸ್ತಾನ ಪರಸ್ಪರ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ತಾಲಿಬಾನ್​​ ಹೇಳಿದೆ.

ಪಾಕ್‌ ಜೊತೆ ನಾವು ಉತ್ತಮ ಸಂಬಂಧ ಹೊಂದಿದ್ದೇವೆ. ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳ ಜೊತೆ ಉತ್ತಮ ಸಂಬಂಧ ಬೆಳೆಸುವ ಅಗತ್ಯವಿದೆ. ಎಲ್ಲಾ ರಾಷ್ಟ್ರಗಳೊಂದಿಗೆ ನಮ್ಮ ಸಂಬಂಧ ಇನ್ನಷ್ಟು ಬಲಗೊಳಿಸಲು ಯತ್ನಿಸುತ್ತೇವೆ ಎಂದರು.

ಭಾರತ-ಪಾಕಿಸ್ತಾನ ಪರಸ್ಪರ ಮಾತುಕತೆಯ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಅಫ್ಘಾನಿಸ್ತಾನ ವಶಪಡಿಸಿಕೊಳ್ಳಲು ನಮಗೆ ಪಾಕಿಸ್ತಾನ ಸಹಾಯ ಮಾಡಿಲ್ಲ. ಇದರಲ್ಲಿ ಪಾಕಿಸ್ತಾನದ ಯಾವುದೇ ಪಾತ್ರವಿಲ್ಲ ಎಂದಿದೆ.

ಇದನ್ನೂ ಓದಿ: ‘ಶವಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸ್ತಾರೆ ತಾಲಿಬಾನಿಗಳು’ ಉಗ್ರರ ವಿಕೃತಿ ಬಿಚ್ಚಿಟ್ಟ ಅಫ್ಘಾನ್​​ ಮಹಿಳೆ

ಈ ಹಿಂದೆ ಪಾಕಿಸ್ತಾನ ನಮಗೆ ಎರಡನೇ ಮನೆ. ಧಾರ್ಮಿಕವಾಗಿ ನಾವು ಪಾಕ್‌ ಜೊತೆ ಬಾಂಧವ್ಯ ಹೊಂದಿದ್ದೇವೆ ಎಂದು ತಾಲಿಬಾನ್‌ ವಕ್ತಾರ ಝಬಿಹುಲ್ಲಾ ಮುಜಾಹಿದ್‌ ತಿಳಿಸಿದ್ದರು.

Source: newsfirstlive.com Source link