#BIGBREAKING: ISIS-K ಉಗ್ರರ ಮೇಲೆ ಅಮೆರಿಕ ಏರ್​​ಸ್ಟ್ರೈಕ್

#BIGBREAKING: ISIS-K ಉಗ್ರರ ಮೇಲೆ ಅಮೆರಿಕ ಏರ್​​ಸ್ಟ್ರೈಕ್

ಕಾಬೂಲ್​ ಏರ್​ಪೋರ್ಟ್ ಮೇಲೆ ಐಎಸ್​ಐಎಸ್​-ಕೆ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿ 169 ಕ್ಕೂ ಹೆಚ್ಚು ಆಫ್ಘನ್ನರು 13 ಮಂದಿ ಅಮೆರಿಕನ್ ಸೈನಿಕರನ್ನು ಕೊಂದ 48 ಗಂಟೆಗಳಲ್ಲೇ ಅಮೆರಿಕ ಐಎಸ್​ಐಎಸ್​-ಕೆ ಉಗ್ರರ ಮೇಲೆ ಏರ್​ಸ್ಟ್ರೈಕ್ ನಡೆಸಿದೆ.

ಇದನ್ನೂ ಓದಿ: ‘ನೀವು ಎಲ್ಲಿದ್ದರೂ ಹುಡುಕಿ ಹೊಡೆಯುತ್ತೇವೆ.. ಬೆಲೆ ತೆತ್ತುವಂತೆ ಮಾಡ್ತೇವೆ’- ಉಗ್ರರಿಗೆ ಅಮೆರಿಕ ವಾರ್ನಿಂಗ್

ಈ ಕುರಿತು ಯುಎಸ್​ ಸೆಂಟ್ರಲ್ ಕಮಾಂಡ್ ಮಾಹಿತಿ ನೀಡಿದ್ದು ಇಸ್ಲಾಮಿಕ್ ಸ್ಟೇಟ್ ಸದಸ್ಯ, ಕಾಬೂಲ್​ ಆತ್ಮಾಹುತಿ ದಾಳಿಗೆ ಕಾರಣನಾಗಿದ್ದ ಎಂದು ಹೇಳಲಾದ ಓರ್ವನನ್ನ ಹತ್ಯೆ ಮಾಡಲಾಗಿದೆ. ದಾಳಿಯಲ್ಲಿ ಸಾರ್ವಜನಿಕರು ಸಾವನ್ನಪ್ಪಿಲ್ಲ ಎಂದು ನೌಕಾ ಸೇನೆಯ ವಕ್ತಾರ ವಿಲ್ಲಿಯಮ್ ಅರ್ಬನ್ ಹೇಳಿದ್ದಾರೆ. ಅಫ್ಘಾನಿಸ್ತಾನದ ನಂಗಹಾರ್​ನಲ್ಲಿ ಈ ಏರ್​ಸ್ಟ್ರೈಕ್ ನಡೆದಿದೆ. ಡ್ರೋನ್ ಮೂಲಕ ಈ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಇದೆ. ದಾಳಿಯಲ್ಲಿ ಸಾವನ್ನಪ್ಪಿದ ಉಗ್ರ ಸಂಘಟನೆಯ ಸದಸ್ಯ ಕಾಬೂಲ್ ದಾಳಿಯ ಪ್ಲಾನರ್ ಎಂದು ಹೇಳಲಾಗಿದೆ.

ಇದನ್ನೂ ಓದಿ: ಕಾಬೂಲ್ ಬ್ಲಾಸ್ಟ್​ನಲ್ಲಿ ಅಮೆರಿಕನ್ನರ ಸಾವು; ಈಗ್ಲಾದರೂ ಎಚ್ಚರಗೊಳ್ಳುತ್ತಾರಾ ಅಮೆರಿಕ ಅಧ್ಯಕ್ಷ..?

ಕಾಬೂಲ್ ಏರ್​ಪೋರ್ಟ್​ ಮೇಲೆ ದಾಳಿ ನಡೆದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರತೀಕಾರದ ಮಾತನಾಡಿದ್ದರು. ಆತ್ಮಾಹುತಿ ದಾಳಿಗೆ ಕಾರಣರಾದವರನ್ನ ಬಿಡುವುದಿಲ್ಲ.. ಅವರನ್ನ ಹುಡುಕಿ ಹೊಡೆಯುತ್ತೇವೆ.. ಈ ಘಟನೆಯನ್ನ ನಾವು ಮರೆಯುವುದಿಲ್ಲ ಎಂದು ಹೇಳಿಕೆ ನೀಡಿದ್ದರು.

Source: newsfirstlive.com Source link