ಮತಾಂತರ ನಿಷೇಧ ಕಾಯ್ದೆ ಸೆಕ್ಷನ್‍ಗಳಿಗೆ ತಡೆ – ಸುಪ್ರೀಂ ಮೆಟ್ಟಿಲೇರಿದ ಗುಜರಾತ್ ಸರ್ಕಾರ

ಅಹಮದಾಬಾದ್: ಮತಾಂತರ ನಿಷೇಧ ಕಾಯ್ದೆಯ ಅಂತರ್ಧಮೀಯ ವಿವಾಹಗಳಿಗಿದ್ದ ಸೆಕ್ಷನ್‍ಗಳಿಗೆ ಗುಜರಾತ್ ಹೈಕೋರ್ಟ್ ತಡೆ ನೀಡಿದ್ದ ತೀರ್ಪಿನ ವಿರುದ್ಧ ಗುಜರಾತ್ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

ಅಂತರ್ಧರ್ಮೀಯ ಒತ್ತಾಯದ ವಿವಾಹದ ಮೂಲಕ ನಡೆಯುವ ಮತಾಂತರವನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿ ಗುಜರಾತ್ ನ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಕಾಯ್ದೆ, 2021 ಜೂ.15 ರಂದು ಜಾರಿಗೆ ಬಂದಿತ್ತು. ಇದೀಗ ಕಾಯ್ದೆಯ ಕೆಲವು ಪ್ರಮುಖ ಸೆಕ್ಷನ್‍ಗಳಿಗೆ ಹೈಕೋರ್ಟ್ ತಡೆನೀಡಿದೆ. ಇದನ್ನೂ ಓದಿ: ಪ್ರಧಾನಿ ಮೋಧಿ ಭಾವಚಿತ್ರಕ್ಕೆ ಅಪಮಾನ – ದೂರು ದಾಖಲು

ಸರ್ಕಾರದ ಈ ನಡೆಯ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಗುಜರಾತ್‍ನ ಡಿಸಿಎಂ ನಿತಿನ್ ಪಟೇಲ್, ಹೈಕೋರ್ಟ್ ತಡೆ ನೀಡಿರುವ ಸೆಕ್ಷನ್‍ಗಳು ಮತಾಂತರ ನಿಷೇಧ ಕಾಯ್ದೆಯ ಪ್ರಮುಖ ಅಂಶಗಳು. ಈ ಸೆಕ್ಷನ್ ಗಳನ್ನು ರದ್ದುಗೊಳಿಸಿದರೆ ಸರ್ಕಾರ ಜಾರಿಗೆ ತಂದಿರುವ ಕಾನೂನಿಗೆ ಯಾವುದೇ ಬೆಲೆ ಇಲ್ಲದಂತಾಗುತ್ತದೆ ಎಂದರು.

ಗುಜರಾತ್ ಸರ್ಕಾರ ಲವ್ ಜಿಹಾದ್ ನ್ನು ತಡೆಗಟ್ಟಲು ಈ ಕಾಯ್ದೆಯನ್ನು ಜಾರಿಗೊಳಿಸುವುದರೊಂದಿಗೆ ರಾಜ್ಯದಲ್ಲಿ ಅಂತರ್ಧರ್ಮೀಯ ವಿವಾಹದ ಮೂಲಕ ಮತಾಂತರ ಮಾಡುವುದು ಅಪರಾಧ ಎಂದು ಕಾನೂನು ರೂಪಿಸಿ ಅಪರಾಧಗಳ ತಡೆಗೆ ಮುಂದಾಗಿತ್ತು. ಆದರೆ ಹೈಕೋರ್ಟ್ ಸೆಕ್ಷನ್‍ಗಳನ್ನು ತಡೆನೀಡಿರುವುದು ಪ್ರಶ್ನೆ ಎತ್ತುವಂತೆ ಮಾಡಿದೆ. ಹೈಕೋರ್ಟ್ ಹೇಳಿರುವಂತೆ “ಯಾವುದೇ ಒತ್ತಾಯ ಪೂರ್ವಕವಲ್ಲದೆ ಅಥವಾ ಮೋಸಗಳಿಲ್ಲದೇ ಅಂತರ್ಧರ್ಮೀಯ ವಿವಾಹ ನಡೆದರೆ ಅದನ್ನು ಮತಾಂತರಕ್ಕಾಗಿಯೇ ಮಾಡಲಾದ ವಿವಾಹ ಎನ್ನುವುದಕ್ಕೆ ಸಾಧ್ಯವಿಲ್ಲ ಆದ್ದರಿಂದ ಈ ಕಾಯ್ದೆಯ ಕಠಿಣ ಸೆಕ್ಷನ್ ಗಳಾದ 3,4,4ಎ ಮತ್ತು 4ಸಿ, 5, 6, 6ಚಿ ಗಳು ಕಾರ್ಯನಿರ್ವಹಿಸುವುದಕ್ಕೆ ತಡೆ ನೀಡಲಾಗುತ್ತಿದೆ” ಎಂದು ಆದೇಶ ಹೊರಡಿಸಿತ್ತು. ಇದನ್ನೂ ಓದಿ: ಒಂದೇ ದಿನ 1 ಕೋಟಿ ಲಸಿಕೆ – ದಾಖಲೆ ಬರೆದ ಭಾರತ

ಹೈಕೋರ್ಟ್‍ನ ಈ ನಡೆಯನ್ನು ಪ್ರಶ್ನಿಸಿ ಗುಜರಾತ್ ಸರ್ಕಾರ ಇದೀಗ ಸುಪ್ರೀಂಕೋರ್ಟ್‍ನಲ್ಲಿ ಮನವಿ ಸಲ್ಲಿಸಿ ಹೈಕೋರ್ಟ್ ನೀಡಿರುವ ತಡೆಯನ್ನು ತೆರವುಗೊಳಿಸುವ ಪ್ರಯತ್ನಕ್ಕೆ ಮುಂದಾಗಿದೆ.

Source: publictv.in Source link