ಇಂದಿನಿಂದ ಸಿಇಟಿ ಪರೀಕ್ಷೆ; ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್ ರೌಂಡ್​ಅಪ್

ಇಂದಿನಿಂದ ಸಿಇಟಿ ಪರೀಕ್ಷೆ; ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್ ರೌಂಡ್​ಅಪ್

01. ಇಂದಿನಿಂದ ಸಿಇಟಿ ಪರೀಕ್ಷೆ

2021ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ಅಂದ್ರೆ ಸಿಇಟಿ ಎಕ್ಸಾಂ ಇಂದಿನಿಂದ ಆರಂಭವಾಗಲಿದೆ. ಇಂದು ಹಾಗೂ ನಾಳೆ ರಾಜ್ಯಾದ್ಯಂತ ಒಟ್ಟು 530 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಯಲಿದೆ. ಒಟ್ಟು 2 ಲಕ್ಷದ 1 ಸಾವಿರದ 816 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲಿದ್ದಾರೆ. ಇವತ್ತು ಜೀವಶಾಸ್ತ್ರ ಮತ್ತು ಗಣಿತ ವಿಷಯದ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಕೊರೊನಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮಕೈಗೊಳ್ಳಲಾಗಿದೆ. ಸಿಇಟಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್​ ಧರಿಸಿ ಪರೀಕ್ಷೆಗೆ ಹಾಜರಾಗಬೇಕು ಅಂತಾ ಸೂಚಿಸಲಾಗಿದೆ.

02. ವಿಟಿಯು ಪರೀಕ್ಷೆ ಮುಂದೂಡಿಕೆ
ಸೆಪ್ಟೆಂಬರ್ 3ರಂದು ಮೂರು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಯಲಿರೋ ಹಿನ್ನೆಲೆ ವಿಟಿಯು ಪರೀಕ್ಷೆ ಮುಂದೂಡಲಾಗಿದೆ. ಸೆಪ್ಟೆಂಬರ್.3ರಂದು ನಿಗದಿಯಾಗಿದ್ದ ಪರೀಕ್ಷೆಯನ್ನ ಸೆಪ್ಟೆಂಬರ್ 18ಕ್ಕೆ ಮುಂದೂಡಿಕೆ ಮಾಡಲಾಗಿದೆ. ಪರೀಕ್ಷೆಯ ಮರು ದಿನಾಂಕ ಪ್ರಕಟಿಸಿದ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಿಂದ ಸುತ್ತೋಲೆ ಹೊರಡಿಸಿದೆ

03. ಇಂದು ಹಾವೇರಿಗೆ ಸಿಎಂ ಬೊಮ್ಮಾಯಿ ಭೇಟಿ
ಇವತ್ತು ಸಿಎಂ ಬಸವರಾಜ್‌ ಬೊಮ್ಮಾಯಿ ಹಾವೇರಿ ಜಿಲ್ಲೆಗೆ ಆಗಮಿಸಲಿದ್ದಾರೆ. ಜಿಲ್ಲೆಗೆ ಭೇಟಿ ನೀಡಲಿರುವ ಸಿಎಂ. ವಿವಿಧ ಕಾಮಗಾರಿಗಳ ಉದ್ಘಾಟನೆ, ಸರ್ಕಾರದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಸಿಎಂ ಆಗಮನದ ಹಿನ್ನಲೆ ಹಾವೇರಿಯಲ್ಲಿ ಭರ್ಜರಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಜೊತೆಗೆ ಬೊಮ್ಮಾಯಿ ಭಾಗಿಯಾಗಲಿರುವ ಕಾರ್ಯಕ್ರಮಗಳ ಸ್ಥಳಗಳನ್ನ ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣ ಸ್ಥಳ ಪರಿಶೀಲಿಸಿದ್ದಾರೆ. ಕಾರ್ಯಕ್ರಮಗಳಲ್ಲಿ ಕೋವಿಡ್‌ ನಿಯಮವನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

04. ಗೃಹ ಸಚಿವರ ಪರ ಬೆಲ್ಲದ್‌ ಬ್ಯಾಟಿಂಗ್‌
ಗೃಹ ಸಚಿವರು ನೀಡಿದ್ದ ಚರ್ಚಾಸ್ಪದ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿರೋ ನಡುವೆ, ಆರಗ ಜ್ಞಾನೇಂದ್ರ ಪರ ಅರವಿಂದ್‌ ಬೆಲ್ಲದ್ ಬ್ಯಾಟ್ ಬೀಸಿದ್ದಾರೆ. ಇಂತಹ ಸಣ್ಣ-ಪುಟ್ಟ ಹೇಳಿಕೆಯನ್ನ ಅನಗತ್ಯವಾಗಿ ಬೆಳೆಸುವ ಅವಶ್ಯಕತೆ ಇಲ್ಲ. ಎಲ್ಲೇ ತಪ್ಪಾದ್ರೂ, ಗೃಹಸಚಿವರಿಗೆ ಕಟ್ಟುವುದು ತಪ್ಪು. ಹೊಸ ವಿಷ್ಯ ತಿಳಿದುಕೊಂಡು ಕೆಲಸ ಮಾಡಲು ಸ್ವಲ್ಪ ಸಮಯ ಹಿಡಿಯುತ್ತೆ ಅಂತ ಶಾಸಕ ಅರವಿಂದ್‌ ಬೆಲ್ಲದ್‌ ಗೃಹ ಸಚಿವರ ಪರ ಮಾತನಾಡಿದ್ದಾರೆ.

05. ವ್ಯಾಕ್ಸಿನೇಷನ್​ನ ‘ಕೋಟಿ’ ದಾಖಲೆ
ವ್ಯಾಕ್ಸಿನೇಷನ್​ನಲ್ಲಿ ಭಾರತ ಹೊಸ ದಾಖಲೆ ಬರೆದಿದ್ದು, ನಿನ್ನೆ ಒಂದೇ ದಿನ ದೇಶದಲ್ಲಿ ಬರೋಬ್ಬರಿ 1 ಕೋಟಿ 63 ಸಾವಿರದ 931 ಮಂದಿಗೆ ಕೊರೊನಾ ಲಸಿಕೆ ನೀಡಿಲಾಗಿದೆ ಅಂತಾ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಮೂಲಕ ದೇಶದಲ್ಲಿ ಇದುವರೆಗೆ 62 ಕೋಟಿಗೂ ಹೆಚ್ಚು ಮಂದಿ ಕೊರೊನಾ ಲಸಿಕೆ ತೆಗೆದುಕೊಂಡಂತಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದಾರೆ ವ್ಯಾಕ್ಸಿನೇಷನ್ ಸಂಖ್ಯೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಒಂದು ಕೋಟಿ ಮಂದಿಗೆ ಒಂದೇ ದಿನ ವ್ಯಾಕ್ಸಿನ್ ಹಾಕಿರೋದು ಮಹತ್ವದ ಸಾಧನೆ. ಲಸಿಕೆ ಹಾಕಿಸಿಕೊಂಡವರಿಗೆ ಮತ್ತು ಲಸಿಕೆ ಹಾಕುವಲ್ಲಿ ಯಶಸ್ವಿಯಾದವರಿಗೆ ಅಭಿನಂದನೆಗಳು ಅಂತಾ ಮೋದಿ ಟ್ವೀಟ್ ಮಾಡಿದ್ದಾರೆ.

06. ‘ಕಾಬೂಲ್​ನಲ್ಲಿ ಮತ್ತೆ ಸ್ಫೋಟವಾಗಬಹುದು’
ಕಾಬೂಲ್​ನಲ್ಲಿ ನಡೆದಿರೋ ಸ್ಫೋಟದ ತೀವ್ರತೆ ಜೀವಂತವಾಗಿರೋ ನಡುವೆ ಇಂತಹ ಮತ್ತೊಂದು ದಾಳಿ ಆಗಬಹುದು ಅಂತಾ ಅಮೆರಿಕಾ ಎಚ್ಚರಿಸಿದೆ. ಅಫ್ಘಾನಿಸ್ತಾನದಲ್ಲಿ ದಾಳಿ ಬಳಿಕವೂ ನಮ್ಮ ರಕ್ಷಣಾ ಕಾರ್ಯ ಮುಂದುವರಿದಿದೆ. ಹೀಗಾಗಿ ನಮ್ಮ ರಕ್ಷಣಾ ಕಾರ್ಯಕ್ಕೆ ಮತ್ತಷ್ಟು ಬೆದರಿಕೆ ಕರೆಗಳು ಬರ್ತಿವೆ. ಆ ಎಲ್ಲಾ ಬೆದರಿಕೆ ಕರೆಗಳನ್ನು ತನಿಖೆ ಮಾಡಲಾಗ್ತಿದೆ. ಸದ್ಯ ಕಾಬುಲ್​ನಲ್ಲಿ ಮತ್ತಷ್ಟು ದಾಳಿಯಾಗುವ ಸಾಧ್ಯತೆಗಳಿದ್ದು, ಎಲ್ಲಾ ದಾಳಿಗೂ ನಾವು ಸಿದ್ದರಾಗಿದ್ದೇವೆ. ಅಂತಾ ಪೆಂಟಾಗನ್​ನ ಮಾಧ್ಯಮ ಮುಖ್ಯಸ್ಥ ಜಾನ್​ ಕೆರ್ಬಿ ತಿಳಿಸಿದ್ದಾರೆ.

07. ತಾಲಿಬಾನ್ ಕಂಟ್ರೋಲ್​ಗೆ ಏರ್​ಪೋರ್ಟ್?
ಸದ್ಯ, ಕಾಬೂಲ್ ​ ಏರ್​ಪೋರ್ಟ್​ ಬಳಿ ಅಮೆರಿಕಾ ಸೇನೆ ಬೀಡು ಬಿಟ್ಟಿದ್ದು ರಕ್ಷಣಾ ಕಾರ್ಯವನ್ನ ಮುಂದುವರೆಸಿದೆ. ಈ ನಡುವೆ ಕಾಬುಲ್​ ಏರ್​ಪೋರ್ಟ್​ನ ಮೂರು ಪ್ರಮುಖ ಭಾಗಗಳನ್ನ ವಶಪಡಿಸಿಕೊಂಡಿರೋದಾಗಿ ತಾಲಿಬಾನ್​ ಘೋಷಿಸಿದೆ. ಅಮೆರಿಕಾ ರಕ್ಷಣಾ ಕಾರ್ಯ ಕೈಗೊಂಡಿದ್ದ ಏರ್​ಪೋರ್ಟ್​ನ ಮೂರು ಪ್ರಮುಖ ಭಾಗಗಳು ನಾವು ವಶಪಡಿಸಿಕೊಂಡಿದ್ದೇವೆ. ಅಂತ ತಾಲಿಬಾನ್​ ವಕ್ತಾರ ಬಿಲಾಲ್​ ಕರಿಮಿ ಹೇಳಿದ್ದಾನೆ. ಆದ್ರೆ ಅಮೆರಿಕಾ ಇದನ್ನ ಅಲ್ಲೆಗಳೆದಿದ್ದು, ರಕ್ಷಣಾ ಕಾರ್ಯ ನಡೆಯುತ್ತಿರೋ ಯಾವುದೇ ಜಾಗವನ್ನೂ ತಾಲಿಬಾನ್​ ವಶಪಡೆಸಿಕೊಂಡಿಲ್ಲ ಅಂತಾ ಹೇಳಿದೆ.

08. ವಧು-ವರರ ಪ್ರೀತಿಯ ಫಿಟ್ನೆಸ್!
ಮದುವೆ ಸಂದರ್ಭದಲ್ಲಿ ತಮ್ಮ-ತಮ್ಮ ಆಸೆ ಆಕಾಂಕ್ಷೆಗಳನ್ನ ನವ ಜೋಡಿಗಳು ವೇದಿಕೆ ಮೇಲೆ ವ್ಯಕ್ತ ಪಡಿಸೋದು ಸಾಮಾನ್ಯ. ಆದ್ರೆ ಇಲ್ಲಿ ವಧು ವರರಿಬ್ಬರು ಪುಶ್ ಅಪ್ ಮಾಡಿ ತಮ್ಮ ಪ್ರೀತಿಯ ಫಿಟ್ನೆಸ್ ತೋರಿಸಿದ್ದಾರೆ. ವಧು ಅಕ್ಷಿತಾ ಅರೋರಾ ಮಹಾಜನ್ ಮತ್ತು ವರ ಆದಿತ್ಯ ಮಹಾಜನ್ ಜೋಡಿ ಸ್ಟೇಜ್​ನಲ್ಲೆ ಪುಶ್​ಅಪ್​ ಮಾಡಿದ್ದಾರೆ. ವಿಶೇಷವೇನಂದ್ರೆ ಇವರಿಬ್ಬರು ಫಿಟ್ನೆಸ್ ತರಬೇತುದಾರರಾಗಿದ್ದಾರೆ. ಹೀಗಾಗಿ, ತಮ್ಮ ವಿವಾಹದ ದಿನ ಮದುವೆ ಧಿರಿಸಿನಲ್ಲಿಯೇ ಪುಶ್ ಅಪ್ ಮಾಡಿ ಈ ಜೋಡಿ ಅತಿಥಿಗಳಿಗೆ ಖುಷಿ ನೀಡಿದ್ದಾರೆ.

09.ತಪ್ಪು ಮಾಡಿದ್ದೆ ಎಂದಿದ್ದೇಕೆ ಶಿಲ್ಪಾ ಶೆಟ್ಟಿ?
ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿರುವ ಪತಿ ರಾಜ್​​ ಕುಂದ್ರಾರನ್ನು ಬಿಡಿಸಲು ಬಾಲಿವುಡ್​​​ ನಟಿ ಶಿಲ್ಪಾ ಶೆಟ್ಟಿ ಪ್ರಯತ್ನ ಮಾಡುತ್ತಲೇ ಇದ್ದಾರೆ. ಈ ಮಧ್ಯೆ ತನ್ನ ಇನ್​ಸ್ಟಾಗ್ರಾಂನಲ್ಲಿ ಒಂದು ನೋಟ್​​ ಹಂಚಿಕೊಂಡಿದ್ದು, ತಾವು ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಒಂದು ಪುಸ್ತಕದ ಸಾಲುಗಳನ್ನು ಪೋಸ್ಟ್​ ಮಾಡಿರುವ ಶಿಲ್ಪಾ ಶೆಟ್ಟಿ, ಮನುಷ್ಯ ಜೀವನಪೂರ್ತಿ ತಪ್ಪು ಮಾಡುತ್ತಲೇ ಇರುತ್ತಾನೆ, ಕಲಿಯುತ್ತಲೇ ಹೋಗುತ್ತಾನೆ. ನಾನು ಕೆಲವು ತಪ್ಪುಗಳನ್ನು ಮಾಡಿದ್ದೇನೆ. ತಪ್ಪು ಮಾಡದೆ ನಮ್ಮ ಜೀವನ ಆಸಕ್ತಿದಾಯಕವಾಗಿ ಇರಲು ಸಾಧ್ಯವೇ ಇಲ್ಲ. ನಮ್ಮ ತಪ್ಪುಗಳು ಯಾರನ್ನು ನೋವಿಸಬಾರದು ಅಷ್ಟೇ ಎಂದು ತಮ್ಮ ಭಾವನೆ ಹೊರಹಾಕಿದ್ದಾರೆ.

10. ಸವಾಲಿನ ಸಮುದ್ರದಲ್ಲಿ ಕೊಹ್ಲಿ ಪಡೆ ಕಸರತ್ತು
ಹೆಡ್ಡಿಂಗ್ಲಿನಲ್ಲಿ ನಡೆಯುತ್ತಿರುವ ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್​ ನಡುವಿನ ಮೂರನೇ ಟೆಸ್ಟ್​ ಪಂದ್ಯದ ಮೂರನೇ ದಿನದಾಟದಲ್ಲಿ ಕೊಹ್ಲಿ ಪಡೆ ಫೈಟ್ ಬ್ಯಾಕ್ ಮಾಡಿದೆ. 432 ರನ್​ಗಳಿಗೆ ಮೊದಲ ಇನ್ನಿಂಗ್ಸ್​ನ ಆಟ ಮುಗಿಸಿದ ಆಂಗ್ಲರು, ಟೀಮ್ ಇಂಡಿಯಾಕ್ಕೆ 354 ರನ್​ಗಳ ಲೀಡ್​ ನೀಡಿದ್ದರು. ಆದ್ರೆ ಶುರುವಿನಲ್ಲೇ ಕೆ.ಎಲ್ ರಾಹುಲ್ 8 ರನ್​ಗೆ ಔಟಾದ್ರು. ಬಳಿಕ ಅರ್ಧ ಶತಕ ಗಳಿಸಿ ಭರವಸೆ ಮೂಡಿಸಿದ್ದ ಹಿಟ್​ಮ್ಯಾನ್​ ಆರ್ಭಟ 59 ರನ್​ಗೆ ಅಂತ್ಯವಾಯ್ತು. ಈ ವೇಳೆ ಕ್ಯಾಪ್ಟನ್ ಕೊಹ್ಲಿ ಜೊತೆಗೆ ಇನ್ನಿಂಗ್ಸ್​ ಕಟ್ಟಿದ್ದ ಪೂಜಾರಾ ತಂಡದ ಸ್ಕೋರ್​​ನ್ನ 200ರ ಗಡಿದಾಟಿಸಿದ್ರು. ಮೂರನೇ ದಿನದಾಟಕ್ಕೆ ಟೀಮ್ ಇಂಡಿಯಾ 2 ವಿಕೆಟ್​ ನಷ್ಟಕ್ಕೆ 215 ರನ್​ಗಳಿಸಿದ್ದು, 139 ರನ್​ಗಳ ಲೀಡ್​​ ದಾಟಬೇಕಿದೆ.

Source: newsfirstlive.com Source link