ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಕೇಸ್: ತಮಿಳುನಾಡಿನಲ್ಲಿ 4 ಶಂಕಿತರು ಪೊಲೀಸರ ವಶಕ್ಕೆ

ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಕೇಸ್: ತಮಿಳುನಾಡಿನಲ್ಲಿ 4 ಶಂಕಿತರು ಪೊಲೀಸರ ವಶಕ್ಕೆ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ನಾಲ್ವರು ಶಂಕಿತರನ್ನ ಪೊಲೀಸರ ವಿಶೇಷ ತಂಡ ವಶಕ್ಕೆ ಪಡೆದಿದೆ. ತಮಿಳುನಾಡಿಗೆ ತೆರಳಿದ್ದ ಪೊಲೀಸ್ ವಿಶೇಷ ಟೀಂ ನಾಲ್ವರನ್ನ ವಶಕ್ಕೆ ಪಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ: ದಯವಿಟ್ಟು ಹೆಣ್ಣುಮಕ್ಕಳನ್ನ ರಕ್ಷಣೆ ಮಾಡಿ- ಹರ್ಷಿಕಾ ಪೂಣಚ್ಚ

ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಲ್ಲೇ ರಾಜ್ಯದಾದ್ಯಂತ ಆರೋಪಿಗಳನ್ನ ಬಂಧಿಸುವಂತೆ ಒತ್ತಾಯ ಕೇಳಿಬಂದಿತ್ತು. ಪ್ರಕರಣದ ತನಿಖೆ ಚುರುಕುಗೊಳಿಸಿದ್ದ ಪೊಲೀಸರು ವಿಶೇಷ ಟೀಂಗಳಾಗಿ ಕೇರಳ ಮತ್ತು ತಮಿಳುನಾಡಿಗೆ ತೆರಳಿದ್ದರು ಎನ್ನಲಾಗಿತ್ತು. ಇದೀಗ ತಮಿಳುನಾಡಿಗೆ ತೆರಳಿದ್ದ ಪೊಲೀಸರ ವಿಶೇಷ ಟೀಂ ನಾಲ್ವರನ್ನು ವಶಕ್ಕೆ ಪಡೆದಿದೆ ಎನ್ನಲಾಗಿದೆ. ಯಾವುದೇ ಸಮಯದಲ್ಲಿ ಪೊಲೀಸರು ಶಂಕಿತರನ್ನು ರಾಜ್ಯಕ್ಕೆ ಕರೆತರುವ ಸಾಧ್ಯತೆಗಳಿವೆ.

ನೆನ್ನೆ ಸಂಜೆ ಟವರ್ ಲೊಕೇಷನ್ ಆಧರಿಸಿ ಪೊಲೀಸರು ಶಂಕಿತರನ್ನು ವಶಕ್ಕೆ ಪಡೆದಿರೋ ಬಗ್ಗೆ ಮಾಹಿತಿ‌ ಇದೆ. ನೆನ್ನೆಯಷ್ಟೇ ಎರಡು ವಿಶೇಷ ತಂಡ ತಮಿಳುನಾಡು ಮತ್ತು ಕೇರಳಕ್ಕೆ ಹೊರಟಿತ್ತು.. ಅನುಮಾನಾಸ್ಪದ ನಾಲ್ವರ ಮೊಬೈಲ್ ಲೊಕೇಷನ್ ಒಂದೇ ಕಡೆ ಪೊಲೀಸ್ರಿಗೆ ಸಿಕ್ಕಿತ್ತು.. ಶಂಕಿತ ನಾಲ್ವರೂ ಸಹ ವಿದ್ಯಾರ್ಥಿಗಳು ಎನ್ನಲಾಗಿದೆ. ಸದ್ಯ ಅಜ್ಞಾತ ಸ್ಥಳದಲ್ಲಿ ನಾಲ್ವರ ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಇದೆ.

Source: newsfirstlive.com Source link