4ನೇ ಟೆಸ್ಟ್​​ಗೆ ಸರ್ಜರಿಗೆ ಮುಂದಾದ ಮ್ಯಾನೇಜ್​ಮೆಂಟ್; ಬೆಂಚ್​ ಕಾದ ಆಟಗಾರರಿಗೆ ಸಿಗಲಿದೆಯಾ ಚಾನ್ಸ್..?

4ನೇ ಟೆಸ್ಟ್​​ಗೆ ಸರ್ಜರಿಗೆ ಮುಂದಾದ ಮ್ಯಾನೇಜ್​ಮೆಂಟ್; ಬೆಂಚ್​ ಕಾದ ಆಟಗಾರರಿಗೆ ಸಿಗಲಿದೆಯಾ ಚಾನ್ಸ್..?

ಮೂರನೇ ಟೆಸ್ಟ್​​ ಇನ್ನೂ ಮುಕ್ತಾಯದ ಹಂತವನ್ನೇ ತಲುಪಿಲ್ಲ. ಅದಾಗಲೇ ಕೆನ್ನಿಂಗ್​ಟನ್​ ಓವಲ್​ನಲ್ಲಿ ನಡೆಯೊ 4ನೇ ಟೆಸ್ಟ್​ ಆಡೋಕೆ ಈ ಮೂವರು ತಯಾರಿ ನಡೆಸ್ತಿದ್ದಾರೆ. ಹಾಗಾದ್ರೆ, 4ನೇ ಟೆಸ್ಟ್​​ ಪಂದ್ಯ ಬದಲಾವಣೆಗೆ ಸಾಕ್ಷಿಯಾಗುತ್ತಾ.?

blank

ಭಾರತ- ಇಂಗ್ಲೆಂಡ್​ ನಡುವಿನ​ ಮೂರನೇ ಟೆಸ್ಟ್​ ಪಂದ್ಯ ಇನ್ನೂ ಮುಕ್ತಾಯಗೊಂಡಿಲ್ಲ. ಅದಾಗಲೇ 4ನೇ ಟೆಸ್ಟ್​​​ ಪಂದ್ಯಕ್ಕೆ ಟೀಮ್ ​ಮ್ಯಾನೇಜ್​ಮೆಂಟ್​ ರೂಪುರೇಷೆ ಸಿದ್ಧಪಡಿಸ್ತಾ ಇದೆ. ಕೆನ್ನಿಂಗ್​ಟಲ್​ ಓವಲ್​ನಲ್ಲಿ ನಡೆಯೋ ಪಂದ್ಯಕ್ಕೆ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲು ಮ್ಯಾನೇಜ್​ಮೆಂಟ್​ ಮುಂದಾಗಿದೆ.

ಇದನ್ನೂ ಓದಿ: ಐಪಿಎಲ್​​ಗಾಗಿ ಆಟಗಾರರಿಗೆ ಹೆಚ್ಚಿದ ಬೇಡಿಕೆ.. ಜೋರಾಗಿದೆ ರಿಪ್ಲೇಸ್​ಮೆಂಟ್​​ ಸರ್ಕಸ್​​.!

ಕಳೆದ ಕೆಲ ಪಂದ್ಯಗಳಿಂದ ಟೀಮ್​ ಇಂಡಿಯಾದ ಮಿಡಲ್​ ಆರ್ಡರ್​​ ವಿಭಾಗ ಅಸ್ಥಿರ ನಿರ್ವಹಣೆ ತೋರುತ್ತಿದೆ. ತಂಡದ ಬ್ಯುಸಿ ಶೆಡ್ಯೂಲ್​ ಆಟಗಾರರ ಮೇಲೆ ಒತ್ತಡ ಹೆಚ್ಚಿಸಿದೆ. ಹೀಗಾಗಿ ತಂಡದ ದಿಢೀರ್​ ಕುಸಿತಕ್ಕೆ ಇದೇ ಕಾರಣ ಎಂಬ ಎಂದು ವಿಶ್ಲೇಷಣೆ ಮಾಡಲಾಗ್ತಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಟೀಮ್​ ಮ್ಯಾನೇಜ್​ಮೆಂಟ್​​ ಮುಂದಿನ ಪಂದ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾಗಿದೆ.

ಅವಕಾಶಕ್ಕಾಗಿ ಕಾದಿದ್ದಾರೆ ಸೂರ್ಯ, ವಿಹಾರಿ, ಮಯಾಂಕ್​.!

ಯೆಸ್​​​..! ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ ಆರಂಭಿಕ ಎಂದೇ ಬಿಂಬಿತವಾಗಿದ್ದ ಮಯಾಂಕ್​ ಇಂಜುರಿಗೆ ತುತ್ತಾಗಿ ಅವಕಾಶ ವಂಚಿತರಾದ್ರು. ಬದಲಿ ಅವಕಾಶ ಪಡೆದು ರಾಹುಲ್​ ಮಿಂಚಿದ ಪರಿಣಾಮ ಮಯಾಂಕ್ ಅನಿವಾರ್ಯವಾಗಿ ಬೆಂಚ್​​ ಬಿಸಿ ಮಾಡ್ತಿದ್ದಾರೆ. ಅಗರ್​ವಾಲ್​ ಜೊತೆಗೆ ಟೆಸ್ಟ್​​ ಸ್ಪೆಷಲಿಸ್ಟ್​​ ಹನುಮ ವಿಹಾರಿ ಮತ್ತು ಸೂರ್ಯಕುಮಾರ್​ ಯಾದವ್ ಕೂಡ ಬೆಂಚ್​​ಗೆ ಸೀಮಿತವಾಗಿದ್ದಾರೆ.

ಸೂರ್ಯಕುಮಾರ್​​ ಪ್ರಥಮದರ್ಜೆ ಕ್ರಿಕೆಟ್​​​ನಲ್ಲಿ ಅಸಾಧಾರಣ ಪ್ರದರ್ಶನ ತೋರಿದ್ದಾರೆ. ನಿರ್ಭೀತಿಯಿಂದ ಬ್ಯಾಟ್​ ಬೀಸುವ ಸೂರ್ಯಗೆ ಯಾವುದೇ ಕ್ರಮಾಂಕದಲ್ಲಿಯಾದ್ರೂ ರನ್​ ಹೊಳೆ ಹರಿಸುವ ಸಾಮರ್ಥ್ಯ ಇದೆ. ಇನ್ನು ವಿಹಾರಿ ಬ್ಯಾಟಿಂಗ್​ ಎಂತದ್ದು ಅನ್ನೋದನ್ನ ವಿವರಿಸಿ ಹೇಳಬೇಕಿಲ್ಲ. ಸಂಕಷ್ಟದಲ್ಲಿ ನೆರವಾಗುವ ವಿಹಾರಿ ಕೂಡ, ಕಮ್​​​ಬ್ಯಾಕ್​ಗಾಗಿ​ ಮಾಡೋದಕ್ಕೆ ಕಾಯ್ತಿದ್ದಾರೆ.

blank

ಈ ಮೂವರಿಗೂ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬುವ ಸಾಮರ್ಥ್ಯವಿರೋ ಕಾರಣ ಸರ್ಜರಿಗೆ ಮ್ಯಾನೇಜ್​ಮೆಂಟ್​ ನಿರ್ಧರಿಸಿದೆ. ಸರ್ಜರಿ ಮಾಡಿ ಮಿಡಲ್​ ಆರ್ಡರ್​ಗೆ ಬಲ ತುಂಬೋದ್ರೊಂದಿಗೆ ಒತ್ತಡಕ್ಕೆ ಒಳಗಾಗಿರೋ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡುವ ಉದ್ದೇಶ ಮ್ಯಾನೇಜ್​ಮೆಂಟ್​​ನದ್ದಾಗಿದೆ.

Source: newsfirstlive.com Source link