ಲೀಡ್ಸ್​ನಲ್ಲಿ ತಪ್ಪಿದ ಲೆಕ್ಕಚಾರ: ಕೋಚ್, ಕ್ಯಾಪ್ಟನ್ ಮತ್ತು ಬೌಲರ್​​ಗಳ ಲೆಕ್ಕಾಚಾರ ಉಲ್ಟಾ ಆಗಿದ್ದೆಲ್ಲಿ..?

ಲೀಡ್ಸ್​ನಲ್ಲಿ ತಪ್ಪಿದ ಲೆಕ್ಕಚಾರ: ಕೋಚ್, ಕ್ಯಾಪ್ಟನ್ ಮತ್ತು ಬೌಲರ್​​ಗಳ ಲೆಕ್ಕಾಚಾರ ಉಲ್ಟಾ ಆಗಿದ್ದೆಲ್ಲಿ..?

ಲಾರ್ಡ್ಸ್​ ಟೆಸ್ಟ್​ ಗೆದ್ದ ಟೀಮ್ ಇಂಡಿಯಾ, ಲೀಡ್ಸ್​ನಲ್ಲಿ ಮುಳುಗಿದ್ಯಾಕೆ..? ಗೆಲುವಿನ ಆತ್ಮವಿಶ್ವಾಸದಲ್ಲಿದ್ದ ಟೀಮ್ ಇಂಡಿಯಾ, ಆ ತಪ್ಪುಗಳನ್ನ ಮಾಡದಿದ್ದರೆ, ಈಗ ಸೇಫ್ ಜೋನ್​ನಲ್ಲಿ ಇರ್ತಿತ್ತಾ..? ಹಾಗಾದ್ರೆ..! ಲೀಡ್ಸ್​ನಲ್ಲಿ ಟೀಮ್ ಇಂಡಿಯಾ ಮಿಸ್ಟೇಕ್ಸ್​ ಏನು.

ಲಾರ್ಡ್ಸ್​ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ಧ ಟೀಮ್ ಇಂಡಿಯಾ, ಲೀಡ್ಸ್​ ಟೆಸ್ಟ್​ನಲ್ಲಿ ಗೆಲ್ಲುವ ಭರವಸೆ ಮೂಡಿಸಿತ್ತು. ಆದ್ರೆ ಹಿಂದಿನ ಪಂದ್ಯಗಳಲ್ಲಿ ಸಂಘಟಿತ ಹೋರಾಟವನ್ನೇ ನಡೆಸಿದ್ದ ಟೀಮ್ ಇಂಡಿಯಾ, ಲೀಡ್ಸ್​ನಲ್ಲಿ ಭಾರೀ ಹಿನ್ನಡೆಯನ್ನೇ ಅನುಭವಿಸಿತು. ಇದಕ್ಕೆ ಕಾರಣ ಟೀಮ್ ಮ್ಯಾನೇಜ್​ಮೆಂಟ್ ಆ್ಯಂಡ್ ಕ್ಯಾಪ್ಟನ್ ವಿರಾಟ್ ಕೊಹ್ಲಿಯ ನಿರ್ಣಯಗಳು..!

blank

ಚೇತೇಶ್ವರ್ ಪೂಜಾರಗೆ ರೆಸ್ಟ್​ ನೀಡಬೇಕಿದೆ ಕೊಹ್ಲಿ..?

ಬರೀ ಇಂಗ್ಲೆಂಡ್ ಸರಣಿಯಲ್ಲಿ ಮಾತ್ರವಲ್ಲ.! ಕಳೆದ ಎರಡೂವರೆ ವರ್ಷಗಳಲ್ಲಿ ಆಡಿದ 35 ಇನ್ನಿಂಗ್ಸ್​​​ಗಳಿಂದ, ಪೂಜಾರ ಪ್ರದರ್ಶನ ಅಷ್ಟಕಷ್ಟೇ.! ಹೀಗಿದ್ದರೂ ವಿರಾಟ್, ಪೂಜಾರಗೆ ರೆಸ್ಟ್​ ನೀಡದೆ, ಉತ್ತಮ ಲಯದಲ್ಲಿದ್ದ ಆಟಗಾರರಿಗೆ ಬೆಂಚ್​​ಗೆ ಸೀಮಿತಗೊಳಿಸಿದ್ದೇಕೆ.? ಎಂಬ ಪ್ರಶ್ನೆ ಹುಟ್ಟದೆ ಇರಲಾರದು.ಇನ್ನು ಫಿಟ್​ ಇಲ್ಲದ ಇಶಾಂತ್ ಶರ್ಮಾರನ್ನೂ, ಲೀಡ್ಸ್​ನಲ್ಲಿ ಮುಂದುವರಿಸಿ ದೊಡ್ಡ ತಪ್ಪನ್ನೇ ಮಾಡಿದರು. ಇದು ಕೂಡ ತಂಡಕ್ಕೆ ಹಿನ್ನಡೆಯಾಗೇ ಪರಿಣಮಿಸಿತು.

blank

ಇದನ್ನೂ ಓದಿ: ಭಾರತದ ಪರ ಆಡಲು ಮತ್ತೆ ಮೈದಾನಕ್ಕೆ ನುಗ್ಗಿದ ಜಾರ್ವೋ.. ಗ್ರೌಂಡ್​​ನಲ್ಲಿ ಬಿಗ್​ ಹೈಡ್ರಾಮಾ..!

ಕ್ಯಾಪ್ಟನ್​ ಎಂಬ ಭಾವನೆ ಮರೆಯಬೇಕಿದೆ ಕೊಹ್ಲಿ..!

ಕ್ಯಾಪ್ಟನ್ ವಿರಾಟ್​ ಬ್ಯಾಟಿಂಗ್ ವೈಫಲ್ಯಕ್ಕೆ ಪ್ರಮುಖ ಕಾರಣವೇ, ವಿರಾಟ್ ಕೊಹ್ಲಿಯ ಆಲೋಚನೆ. ಹೌದು..! ಬ್ಯಾಟಿಂಗ್​ ವೇಳೆ ಉತ್ತಮ ಪ್ರದರ್ಶನ ಹಂಬಲ ಒಳ್ಳೇದೆ​.. ಆದ್ರೆ, ಈ ಭಾವನೆಯಲ್ಲಿ ಒತ್ತಡಕ್ಕೆ ಸಿಲುಕ್ತಿರೋ ಕೊಹ್ಲಿ, ವಿಕೆಟ್ ಕೈಚೆಲ್ಲುತ್ತಿದ್ದಾರೆ. ಹೀಗಾಗಿ ಮೊದಲು ತಾನು ಕ್ಯಾಪ್ಟನ್ ಅನ್ನೋದು ಮರೆತು ಬ್ಯಾಟ್ ಬೀಸಬೇಕಿದೆ..

blank

ಕ್ಯಾಪ್ಟನ್, ಕೋಚ್​ ಸೇರಿ ಮಾಡಿದರು ಬಿಗ್ ಮಿಸ್ಟೇಕ್..!

ಲೀಡ್ಸ್​ನಲ್ಲಿ ಟೀಮ್ ಇಂಡಿಯಾ ಹಳಿ ತಪ್ಪಲು ಮೇಜರ್ ರೀಸನ್, ಪ್ರತಿಯೊಂದು ಹಂತದಲ್ಲಿ ಕೋಚ್ ಶಾಸ್ರ್ತಿ, ಕ್ಯಾಪ್ಟನ್ ಕೊಹ್ಲಿ ಎಡವಿದ್ದು. ಹೌದು..! ಪ್ಲೇಯಿಂಗ್ ಇಲೆವೆನ್ ಆಯ್ಕೆ ತಪ್ಪು ಮಾಡಿದ್ದ ಈ ಜೋಡಿ, ಟಾಸ್ ವಿಚಾರದಲ್ಲಿ ತಾವು ತೆಗೆದುಕೊಂಡ ನಿಲುವು ಭಾರೀ ಹೊಡೆತವನ್ನೇ ನೀಡಿತು. ಇದಕ್ಕೆ ಪ್ರತಿಫಲವೇ 78 ರನ್​ಗಳಿಗಳಿಗೆ ತಂಡ ಪತನ.!

ಇದರ ಜೊತೆಗೆ ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳ ರನ್​ ಓಟಕ್ಕೆ ಬ್ರೇಕ್ ಹಾಕುವ ತಂತ್ರದಲ್ಲಿ ಕೊಹ್ಲಿ & ಬೌಲರ್ಸ್ ಲೆಕ್ಕಚಾರ ಸಂಪೂರ್ಣ ಉಲ್ಟಾ ಆಯ್ತು.. ಇದೆಲ್ಲಾದರ ಪರಿಣಾಮವೇ ಟೀಮ್ ಇಂಡಿಯಾ ಸೋಲಿನ ಸುಳಿಯಲ್ಲಿ ನಲುಗಲು ಕಾರಣ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ..!

Source: newsfirstlive.com Source link