ಸಾಮೂಹಿಕ ಅತ್ಯಾಚಾರ: ನಮ್ಮಲ್ಲಿಯ ಕಳ್ಳರು ಪೊಲೀಸರಿಗಿಂತ ಬುದ್ಧಿವಂತರಿದ್ದಾರೆ- ವಿನಯ್​ ಗುರೂಜಿ

ಸಾಮೂಹಿಕ ಅತ್ಯಾಚಾರ: ನಮ್ಮಲ್ಲಿಯ ಕಳ್ಳರು ಪೊಲೀಸರಿಗಿಂತ ಬುದ್ಧಿವಂತರಿದ್ದಾರೆ- ವಿನಯ್​ ಗುರೂಜಿ

ರಾಯಚೂರು: ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತು ಅವಧೂತ ವಿನಯ್​ ಗುರೂಜಿ ಪ್ರತಿಕ್ರಿಯೆ ನೀಡಿದ್ದು, ನಮ್ಮಲ್ಲಿಯ ಕಳ್ಳರು ಪೊಲೀಸರಿಗಿಂತ ಬುದ್ಧಿವಂತರಿದ್ದಾರೆ, ಕಾನೂನನ್ನು ಬಿಗಿಪಡಿಸುವದರ ಮೂಲಕ ಹೆಣ್ಣುಮಕ್ಕಳನ್ನು ಕಾಪಾಡಬೇಕು ಎಂದಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ರೀತಿಯ ಪ್ರಕರಣಕ್ಕೆ ಬೇರೆ ದೇಶಗಳಲ್ಲಿ ಬೇಲ್ ಸಿಗಲ್ಲ, ಆದ್ರೆ ನಮ್ಮ ಭಾರತ ಕಾನೂನಲ್ಲಿ ಕೃತ್ಯ ಮಾಡಿದವರು ಬಚಾವ್ ಆಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳು ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯ ವಿಪರೀತ ಆಚರಣೆಗಳೇ ಈ ಘಟನೆಗಳ ಮೇಲೆ ಪರಿಣಾಮ ಬೀರಿವೆ.

ರಾಷ್ಟ್ರದ ಪ್ರಧಾನಿಗೆ ಇರುವಷ್ಟೇ ಜವಾಬ್ದಾರಿ ಭಾರತದ ಪ್ರತಿಯೊಬ್ಬ ಪ್ರಜೆಗೂ ಇರುತ್ತದೆ. ಸರ್ಕಾರ ಏಕಸ್ವರಕ್ಕೆ ಬಂದು ಬಿಗಿಯಾದ ಕಾನೂನನ್ನು ಜಾರಿಗೊಳಿಸಬೇಕು. ಬೇರೆ ದೇಶಗಳಲ್ಲಿರುವಂತಹ ಕಠಿಣ ಕಾನೂನುಗಳನ್ನು ದೇಶದಲ್ಲಿ ಜಾರಿಗೆ ತರುವದು ಈ ಸಂದರ್ಭದಲ್ಲಿ ಅನಿವಾರ್ಯ. ನಾನು ಅಹಿಂಸಾವಾದಿ, ಇನ್ನೊಬ್ಬರನ್ನು ಕೊಲ್ಲಿ ಎಂದು ಹೇಳಬಾರದು ಆದ್ರೆ ಲಿಮಿಟ್ ಕ್ರಾಸ್ ಆದವರನ್ನ ಆಪರೇಟ್ ಮಾಡ್ಲೆಬೇಕು ಎಂದಿದ್ದಾರೆ.

ಇದನ್ನೂ ಓದಿ: ಮಂತ್ರಾಲಯದಲ್ಲಿ ಆರಾಧನಾ ಮಹೋತ್ಸವ: ರಾಯರ ದರ್ಶನ ಪಡೆದು ಪುನೀತರಾದ ವಿನಯ್​ ಗುರೂಜಿ

Source: newsfirstlive.com Source link