ಉಗ್ರರ ಆತ್ಮಾಹುತಿ ದಾಳಿಗೆ ಅಮೆರಿಕ ಪ್ರತೀಕಾರ; ಏರ್​​ಸ್ಟ್ರೈಕ್ ಮೂಲಕ ಸೇಡು ತೀರಿಸಿಕೊಂಡ ದೊಡ್ಡಣ್ಣ

ಉಗ್ರರ ಆತ್ಮಾಹುತಿ ದಾಳಿಗೆ ಅಮೆರಿಕ ಪ್ರತೀಕಾರ; ಏರ್​​ಸ್ಟ್ರೈಕ್ ಮೂಲಕ ಸೇಡು ತೀರಿಸಿಕೊಂಡ ದೊಡ್ಡಣ್ಣ

ಕಾಬೂಲ್​ ಏರ್​ಪೋರ್ಟ್​ನಲ್ಲಿ ಐಎಸ್​ಐಎಸ್-ಕೆ ನಡೆಸಿದ್ದ ಆತ್ಮಾಹುತಿ ದಾಳಿ ಅಮೆರಿಕದ ನಿದ್ದೆಗೆಡಿಸಿತ್ತು. ಕಾರಣ ಆತ್ಮಾಹುತಿ ದಾಳಿಯಲ್ಲಿ 169 ಮಂದಿ ಆಫ್ಘನ್ನರು ಸಾವನ್ನಪ್ಪಿದ್ದಲ್ಲದೆ ಅಮೆರಿಕ ಸೇನೆಯ 13 ಸೈನಿಕರು ಪ್ರಾಣ ಕಳೆದುಕೊಂಡಿತ್ತು. ಈ ಘಟನೆಯಿಂದ ಸಿಟ್ಟಿಗೆದ್ದಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಪ್ರತೀಕಾರದ ಮಾತುಗಳನ್ನಾಡಿದ್ದರು. ಇದೀಗ ಡ್ರೋನ್ ಮೂಲಕ ಏರ್​​ಸ್ಟ್ರೈಕ್ ನಡೆಸಿ 48 ಗಂಟೆಗಳಲ್ಲೇ ಅಮೆರಿಕ ಸೇಡು ತೀರಿಸಿಕೊಂಡಿದೆ.

ಇದನ್ನೂ ಓದಿ: ‘ನೀವು ಎಲ್ಲಿದ್ದರೂ ಹುಡುಕಿ ಹೊಡೆಯುತ್ತೇವೆ.. ಬೆಲೆ ತೆತ್ತುವಂತೆ ಮಾಡ್ತೇವೆ’- ಉಗ್ರರಿಗೆ ಅಮೆರಿಕ ವಾರ್ನಿಂಗ್

ಅಫ್ಘಾನಿಸ್ತಾನದ ಕಂದರ್​ಹಾರ್ ಪ್ರಾಂತ್ಯದಲ್ಲಿ ಅಮೆರಿಕ ಸೇನೆ ಡ್ರೋನ್ ಮೂಲಕ ಏರ್​ಸ್ಟ್ರೈಕ್ ನಡೆಸಿದೆ. ಈ ಏರ್​ಸ್ಟ್ರೈಕ್​ನ್ನು ಆತ್ಮಾಹುತಿ ದಾಳಿಗೆ ಪ್ಲಾನ್ ಮಾಡಿದ ಉಗ್ರನನ್ನ ಗುರಿಯಾಗಿಸಿ ಮಾಡಲಾಗಿದೆ. ಏರ್​ಸ್ಟ್ರೈಕ್​ನಲ್ಲಿ ಪ್ಲಾನರ್ ಹತ್ಯೆಯಾಗಿದ್ದಾನೆ ಎಂದು ಅಮೆರಿಕ ಸೇನೆ ಹೇಳಿದೆ. ಇನ್ನು ದಾಳಿಯಲ್ಲಿ ಯಾವುದೇ ನಾಗರೀಕರಿಗೆ ತೊಂದರೆಯಾಗಿಲ್ಲ ಎಂದು ಅಮೆರಿಕ ಸೇನೆ ಸ್ಪಷ್ಟನೆ ನೀಡಿದೆ.

ಕಾಬೂಲ್ ದುರಂತದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸುದ್ದಿಗೋಷ್ಠಿ ನಡೆಸಿದ್ದರು. ಸುದ್ದಿಗೋಷ್ಠಿಯಲ್ಲಿ ಈ ಘಟನೆಯನ್ನು ನಾವು ಮರೆಯುವುದಿಲ್ಲ.. ಘಟನೆಗೆ ಕಾರಣರಾದವರನ್ನ ಸುಮ್ಮನೆ ಬಿಡುವುದಿಲ್ಲ.. ಅವರನ್ನ ಹುಡುಕಿ ಹುಡುಕಿ ಹೊಡೆಯುತ್ತೇವೆ. ಬೆಲೆ ತೆತ್ತುವಂತೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದರು. ಇದೀಗ ಏರ್​ಸ್ಟ್ರೈಕ್ ಮೂಲಕ ಅಮೆರಿಕ ಪ್ರತೀಕಾರ ತೀರಿಸಿಕೊಂಡಿದೆ.

Source: newsfirstlive.com Source link