ಕೇರಳದಲ್ಲಿ ಕೊರೊನಾ ಆರ್ಭಟ- ಸತತ ಮೂರನೇ ದಿನ 30 ಸಾವಿರ ಪ್ಲಸ್ ಕೇಸ್

ತಿರುವನಂತಪುರ: ಕೇರಳದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಭಾರತದಲ್ಲಿರುವ ಮೂಕ್ಕಾಲು ಕೇಸ್ ಕೇರಳ ಒಂದರಲ್ಲೇ ಕಾಣಿಸುತ್ತಿದೆ. ರಾಜ್ಯದಲ್ಲಿ ಕಳೆದ ಮೂರುದಿನಗಳಿಂದ 30 ಸಾವಿರಕ್ಕೂ ಅಧಿಕ ಕೇಸ್ ದಾಖಲಾಗುವ ಮೂಲಕ ಆತಂಕ ಮೂಡಿಸಿದೆ.

ನಿನ್ನೆ ಇಡೀ ಭಾರತದಲ್ಲಿ 46,798 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿತ್ತು. ಇದರಲ್ಲಿ ಕೇರಳ ರಾಜ್ಯ ಒಂದರಲ್ಲೇ 32,801 ಕೇಸ್ ದಾಖಲಾಗುವ ಮೂಲಕ ದೇಶದ ಮೂಕ್ಕಾಲು ಕೇಸ್ ಒಂದೇ ರಾಜ್ಯದಲ್ಲಿ ಕಂಡು ಬಂದಿದ್ದು, ಓಣಂ ಹಬ್ಬದ ಬಳಿಕ ಸತತವಾಗಿ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದೆ. ಈ ಮೂಲಕ ನಾಲ್ಕು ತಿಂಗಳ ಬಳಿಕ ಮತ್ತೆ ಕೇರಳದಲ್ಲಿ ಗರಿಷ್ಠ ಕೇಸ್ ಗಳು ವರದಿಯಾಗುತ್ತಿದೆ. ಇದನ್ನೂ ಓದಿ: ಒಂದೇ ದಿನ 1 ಕೋಟಿ ಲಸಿಕೆ – ದಾಖಲೆ ಬರೆದ ಭಾರತ

ಆಗಸ್ಟ್ 24 ರಿಂದ ಕೇರಳದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯತ್ತ ಮುಖ ಮಾಡಿದ್ದು, ಸತತ ಮೂರನೇ ದಿನ 30 ಸಾವಿರ ಪ್ಲಸ್ ಕೇಸ್ ವರದಿಯಾಗಿದೆ. ಅಗಸ್ಟ್ 24ರಂದು 24,296 ಕೇಸ್, 25ರಂದು 31,445 ಕೇಸ್, 26ರಂದು 30,077 ಕೇಸ್ ಮತ್ತು ನಿನ್ನೆ 32,801 ಕೇಸ್ ಕಂಡುಬಂದಿದೆ. ಈ ಮೂಲಕ ಕಳೆದ ಒಂದು ವಾರದಲ್ಲಿ ಶೇ.18 ಕ್ಕಿಂತ ಹೆಚ್ಚು ಪಾಸಿಟಿವ್ ರೇಟ್ ರಾಜ್ಯದಲ್ಲಿ ದಾಖಲಾಗಿದೆ. ಹಾಗಾಗಿ ಕೊರೊನಾ ಮೂರನೇ ಅಲೆಯ ಆರಂಭ ಕೇರಳದಿಂದ ಶುರುವಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ. ಇದನ್ನೂ ಓದಿ: ರಾಜ್ಯದಲ್ಲಿಂದು 1,301 ಕೊರೊನಾ ಕೇಸ್, 17 ಸಾವು, 1,614 ಡಿಸ್ಚಾರ್ಜ್

Source: publictv.in Source link