ಅಮೆರಿಕ ಪಾಲಿಗೆ ಕೆಲವು ದಿನಗಳು ‘ಮೋಸ್ಟ್ ಡೇಂಜರಸ್’, ಮತ್ತೊಂದು ಕಾಬೂಲ್ ದಾಳಿ ಸಾಧ್ಯತೆ

ಅಮೆರಿಕ ಪಾಲಿಗೆ ಕೆಲವು ದಿನಗಳು ‘ಮೋಸ್ಟ್ ಡೇಂಜರಸ್’, ಮತ್ತೊಂದು ಕಾಬೂಲ್ ದಾಳಿ ಸಾಧ್ಯತೆ

ಮೊನ್ನೆಯಷ್ಟೇ ಕಾಬೂಲ್ ಏರ್​ಪೋರ್ಟ್​ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಿಂದ 169 ಆಫ್ಘನ್ ಪ್ರಜೆಗಳು ಹಾಗೂ 13 ಅಮೆರಿಕನ್ ಸೈನಿಕರ ಸಾವನ್ನಪ್ಪಿದ್ದಾರೆ. ಈ ದಾಳಿಯ ವಿಚಾರ ಇನ್ನೂ ಚರ್ಚೆಯಲ್ಲಿರುವಾಗಲೇ ಕೆಲವೇ ದಿನಗಳಲ್ಲಿ ಮತ್ತೊಂದು ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್​ಗೆ ಸಂಭಾವ್ಯ ಉಗ್ರರ ದಾಳಿಯ ಕುರಿತು ಮಾಹಿತಿ ಸಿಕ್ಕಿದೆ ಎನ್ನಲಾಗಿದೆ. ಅಮೆರಿಕದ ರಾಷ್ಟ್ರೀಯ ಭದ್ರತಾ ತಂಡ ಜೋ ಬೈಡನ್​ಗೆ ಈ ಕುರಿತು ಮಾಹಿತಿ ನೀಡಿದ್ದು ಮುಂದಿನ ಕೆಲವು ದಿನಗಳು ಮೋಸ್ಟ್ ಡೇಂಜರಸ್ ಎಂದು ಹೇಳಿದ್ದಾರಂತೆ.

ಕಾಬೂಲ್ ಏರ್​ಪೋರ್ಟ್ ಘಟನೆಗೆ ಸಂಬಂಧಿಸಿದಂತೆ ಜೋಬೈಡನ್ ಸಿಚುವೇಷನ್ ರೂಂನಲ್ಲಿ ರಾಷ್ಟ್ರೀಯ ಭದ್ರತಾ ಟೀಂ, ಮತ್ತು ಉನ್ನತ ಕಮಾಂಡರ್​ಗಳನ್ನ ಭೇಟಿಯಾದಾಗ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರಂತೆ. ಇನ್ನು ಈ ಸಭೆಗೆ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಕೂಡ ವಿಡಿಯೋ ಟೆಲಿಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದರು ಎನ್ನಲಾಗಿದೆ.

Source: newsfirstlive.com Source link