‘ಪುಷ್ಪ’ ಸಿನಿಮಾದಲ್ಲಿ ಫಹಾದ್ ಫಾಸಿಲ್ ಅಬ್ಬರ; ಡೆಡ್ಲಿ ಖಳನಟನ ಲುಕ್ ರಿವೀಲ್

‘ಪುಷ್ಪ’ ಸಿನಿಮಾದಲ್ಲಿ ಫಹಾದ್ ಫಾಸಿಲ್ ಅಬ್ಬರ; ಡೆಡ್ಲಿ ಖಳನಟನ ಲುಕ್ ರಿವೀಲ್

‘ಪುಷ್ಪ’.. ಟಾಲಿವುಡ್ ಸಿನಿ ಲೋಕದ ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯನ್ ಮೂವಿ.. ಆರ್ಯ ಸಿನಿಮಾಗಳ ಬಳಿಕ ಮತ್ತೊಮ್ಮೆ ಸುಕುಮಾರ್, ಅಲ್ಲು ಅರ್ಜುನ್ ಒಂದಾಗಿ ಪುಷ್ಪ ಸಿನಿಮಾವನ್ನ ಎರಡೆರಡು ಭಾಗಗಳಲ್ಲಿ ಐದೈದು ಭಾಷೆಗಳಲ್ಲಿ ಮೂಡಿ ಬರಲಿದೆ. ಮೊನ್ನೆ ಡಾಲಿ ಧನಂಜಯ ಬರ್ತ್​ಡೇ ಪ್ರಯುಕ್ತ ಡಾಲಿಯ ಫಸ್ಟ್​ ಲುಕ್​ ಪೋಸ್ಟರ್​ ರಿಲೀಸ್​ ಮಾಡಿದ ‘ಪುಷ್ಪ’ ಚಿತ್ರತಂಡ ಇದೀಗ ಚಿತ್ರದ ಪ್ರಮುಖ ಖಳನಟನ ಪಾತ್ರ ನಿರ್ವಹಿಸುತ್ತಿರುವ ಫಹಾದ್ ಫಾಸಿಲ್ ಫಸ್ಟ್​ ಲುಕ್​ ಪೋಸ್ಟರ್ ರಿಲೀಸ್ ಮಾಡಿದೆ.

 

ಹೌದು ನಟ ಫಹಾದ್ ಫಾಸಿಲ್ ‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್​ ಎದುರು ವಿಲನ್ ಅಗಿ ಕಾಣಿಸಿಕೊಳ್ಳುವ ಫಹಾದ್ ಫಾಸಿಲ್, ಚಿತ್ರದಲ್ಲಿ ಭನ್ವರ್ ಸಿಂಗ್ ಶೇಖಾವತ್ ಎಂಬ ಪೊಲೀಸ್​ IPS ಅವತಾರದಲ್ಲಿ ಕಾಣಿಸಿಕೊಳುತ್ತಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಫಹಾದ್ ಫಾಸಿಲ್ ಡಿಫೆರೆಂಟ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಸದ್ಯ ಸಿನಿಮಾ ಕಾರ್ಯಗಳನೆಲ್ಲ ಮುಗಿಸಿರೋ ಪುಷ್ಪ ಫಿಲ್ಮ್ ಟೀಮ್ ಡಿಸೆಂಬರ್ ಕಡೆಯ ಶುಕ್ರವಾರ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಿಶ್ವಾದ್ಯಂತ ಪ್ರದರ್ಶನ ಕಾಣಲಿದೆ..

Source: newsfirstlive.com Source link