ಚಿಕ್ಕಮಗಳೂರಲ್ಲಿ ಗಾಂಜಾ ಘಾಟು: ಹೊರ ರಾಜ್ಯದಿಂದ ಗಾಂಜಾ ತರ್ತಿದ್ದ ಐವರ ಬಂಧನ

ಚಿಕ್ಕಮಗಳೂರಲ್ಲಿ ಗಾಂಜಾ ಘಾಟು: ಹೊರ ರಾಜ್ಯದಿಂದ ಗಾಂಜಾ ತರ್ತಿದ್ದ ಐವರ ಬಂಧನ

‌ಚಿಕ್ಕಮಗಳೂರು: ಸದಾ ಕಾಫಿ ಸುವಾಸನೆ ಬೀರುತ್ತಿದ್ದ ಚಿಕ್ಕಮಗಳೂರಲ್ಲೂ ಕೂಡ ಇದೀಗ ಗಾಂಜಾ ಘಾಟು ಎದ್ದಿದೆ.  ವಿಶಾಖಪಟ್ಟಣಂದಿಂದ ರಾಜ್ಯಕ್ಕೆ ಗಾಂಜಾ ತರುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸತತ 11 ತಿಂಗಳಿನಿಂದ ಆರೋಪಿಗಳ ಲೋಕೇಶನ್ ಟ್ರ್ಯಾಕ್ ಮಾಡ್ತಿದ್ದ ಸಿಇಎನ್ ಪೊಲೀಸ್ರು, ವಿಶಾಖಪಟ್ಟಣಂ ನಿಂದ ಕಾಫಿ ನಾಡಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ವಿಷಯ ತಿಳಿದ ತಕ್ಷಣವೇ ಕಾಯಾರ್ಚರಣೆಗಿಳಿದಿದ್ದಾರೆ.

blank

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ: ನಮ್ಮಲ್ಲಿಯ ಕಳ್ಳರು ಪೊಲೀಸರಿಗಿಂತ ಬುದ್ಧಿವಂತರಿದ್ದಾರೆ- ವಿನಯ್​ ಗುರೂಜಿ

ಕಾರ್ಯಾಚರಣೆಯಲ್ಲಿ ಒಟ್ಟು ಐವರನ್ನು ಬಂಧಿಸಿದ್ದು ಇದರಲ್ಲಿ ಚಿಕ್ಕಮಗಳೂರಿನ ಇಬ್ಬರು, ಮಂಡ್ಯ ಮೂಲದ ಓರ್ವ ವ್ಯಕ್ತಿಯನ್ನು ಸಿಇಎನ್ ಪೊಲೀಸರು ಬಂಧಿಸಿ, 120 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಇನ್ನು ಆರೋಪಿಗಳು 2020 ಸೆಪ್ಟೆಂಬರ್​ನಲ್ಲಿ ಗಾಂಜಾ ಕೇಸ್ ನಲ್ಲಿ ಅರೆಸ್ಟ್ ಆಗಿದ್ರು ಎನ್ನಲಾಗಿದೆ. ಪೊಲೀಸರ ಮಿಂಚಿನ ಕಾರ್ಯಾಚರಣೆಗೆ ಎಸ್​ಪಿ ಅಕ್ಷಯ ಶ್ಲಾಘಿಸಿದ್ದಾರೆ.

Source: newsfirstlive.com Source link