ಸಾಮೂಹಿಕ ಅತ್ಯಾಚಾರದ ಪ್ರಕರಣದಲ್ಲಿ ಏನೇನಾಗ್ತಿದೆ..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಸಾಮೂಹಿಕ ಅತ್ಯಾಚಾರದ ಪ್ರಕರಣದಲ್ಲಿ ಏನೇನಾಗ್ತಿದೆ..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಬೆಳವಣಿಗೆಗಳಾಗ್ತಿವೆ. ಈ ಮಧ್ಯೆ ಯುವಕ ಮತ್ತು ಸಂತ್ರಸ್ತೆಯ ಹೇಳಿಕೆ ಪೊಲೀಸರಿಗೆ ದೊಡ್ಡ ತಲೆನೋವಾಗಿದೆಯಂತೆ.

ಯುವಕ ಮತ್ತು ಸಂತ್ರಸ್ತೆ ವಾಟ್ಸ್​ಆ್ಯಪ್ ಮೂಲಕವೇ ಆರೋಪಿಗಳನ್ನು ಗುರುತಿಸುತ್ತಿದ್ದಾರೆ ಎನ್ನಲಾಗಿದೆ. ಪೊಲೀಸರು ಆರೋಪಿಗಳ ಭಾವಚಿತ್ರ ಕಳುಹಿಸಿ ಕನ್‌ಫರ್ಮ್ ಮಾಡಿಕೊಳ್ಳುತ್ತಿದ್ದಾರೆ. ಅಜ್ಞಾತ ಸ್ಥಳದಿಂದಲೇ ವರ್ಚುವಲ್ ವಿಚಾರಣೆ ನಡೆಯುತ್ತಿದ್ದು ಸಂತ್ರಸ್ಥೆ, ಗೆಳೆಯ ಪೊಲೀಸರಿಗೆ ಹೇಳಿಕೆ ಕೊಡಲು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಕೇಸ್: ತಮಿಳುನಾಡಿನಲ್ಲಿ 4 ಶಂಕಿತರು ಪೊಲೀಸರ ವಶಕ್ಕೆ

ಇನ್ನು ಬೆಂಗಳೂರಿನಿಂದ ಪೊಲೀಸ್ ಮಹಾನಿರ್ದೇಶಕರು ಮೈಸೂರಿನತ್ತ ಹೊರಟಿದ್ದಾರೆ. ಮೈಸೂರಿನ ಐಜಿ ಕಚೇರಿಗೆ ಡಿಜಿ, ಐಜಿಪಿ ಪ್ರವೀಣ್ ಸೂದ್ ಬರಲಿದ್ದಾರಂತೆ. ಈಗಾಗಲೇ ಐವರು ಶಂಕಿತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ.

ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಯುತ್ತಿದ್ದು. ಮಧ್ಯಾಹ್ನದ ವೇಳೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮಹತ್ವದ ಮಾಹಿತಿ ಕೊಡ್ತಾರಾ ಎಂಬ ಕುತೂಹಲ ಸೃಷ್ಟಿಯಾಗಿದೆ.

ಇನ್ನು ಪ್ರಕರಣದ ಆರೋಪಿಗಳ ಪ್ರಾಥಮಿಕ ವಿಚಾರಣೆಯಲ್ಲಿ ನಡೆದ ಘಟನೆಯ ಬಗ್ಗೆ ಪೊಲೀಸರು ಪ್ರಶ್ನೆಗಳನ್ನ ಕೇಳುತ್ತಿದ್ದರೆ ಎಂದು ಹೇಳಲಾಗಿದೆ. ಶಂಕಿತರು ಒಪ್ಪಿಕೊಂಡರೂ ಸಾಕ್ಷಿಗಳ ಸಂಗ್ರಹ ಮುಖ್ಯವಾಗುತ್ತದೆ ಎನ್ನಲಾಗಿದೆ.

ಈ ಕೇಸ್ ನ ಪ್ರಮುಖ ಸಾಕ್ಷಿಗಳು ಏನು..?

1. ಸಂತ್ರಸ್ತೆ ಹೇಳಿಕೆ
2. ಸಂತ್ರಸ್ತೆ ಸ್ನೇಹಿತನ ಹೇಳಿಕೆ
3. ಆರೋಪಿಗಳ ಸ್ವ ಇಚ್ಚಾ ಹೇಳಿಕೆ
4. ಟೆಕ್ನಿಕಲ್ ಸಾಕ್ಷಿಗಳು (ಮೊಬೈಲ್ ಟವರ್ ಡಂಪ್)
5. ಫಿಸಿಕಲ್ ಸಾಕ್ಷಿಗಳು( ಯುವತಿಯ ದೆಹದ ಮೇಲೆ ಗಾಯ, ಯುವತಿ ಉಗುರಿನ ಆರೋಪಿಗಳ ಕಣಗಳು, ಸ್ಪರ್ಮ್ಸ್, ಬೆವರಿನ ಗುರುತು, ಫಿಂಗರ್ ಪ್ರಿಂಟ್ಸ್
6. ಸಾಂದರ್ಭಿಕ ಸಾಕ್ಷಿಗಳು (ಸ್ಥಳೀಯರ ಹೇಳಿಕೆ, ಇತರ ಆರೋಪಿಗಳ ಹೇಳಿಕೆಯ ಸಾಕ್ಷಿಗಳಾಗಿ ಪರಿಗಣನೆ)
7. ತನಿಖಾಧಿಕಾರಿಯ ಹೇಳಿಕೆ (ತನಿಖಾ ತಂಡದ ಪೊಲೀಸರ ಹೇಳಿಕೆ)
8. ಪಂಚನಾಮೆ ಸಾಕ್ಷಿಗಳ ಹೇಳಿಕೆ
9. ವೈದ್ಯರು ನೀಡುವ ಅಧಿಕೃತ ಹೇಳಿಕೆ
10. ಯುವತಿಯ ಮೆಡಿಕಲ್ ರಿಪೋರ್ಟ್
11. ಆರೋಪಿಗಳ ಮೆಡಿಕಲ್ ರಿಪೋರ್ಟ್
12. ಟೆಕ್ನಿಕಲ್ ಮ್ಯಾಚಿಂಗ್ ರಿಪೋರ್ಟ್​ಗಳು
13. ಡಿಜಿಟಲ್ ಎವಿಡೆನ್ಸ್ ಬಗ್ಗೆ ಎಫ್ಎಸ್ಎಲ್ ವರದಿಗಳು
14. ಆರೋಪಿಗಳು ಈ ಹಿಂದಿನ ಕೃತ್ಯದ ಮಾಹಿತಿಗಳು

Source: newsfirstlive.com Source link