ಭಾರತದ ಹೆಡ್​ ಕೋಚ್​​ ಹುದ್ದೆಗೆ ಟ್ರಯಾಂಗಲ್​ ಫೈಟ್; ​​​ವಿಕ್ರಮ್​, ವೀರೂಗೆ ಟಕ್ಕರ್​ ಕೊಡ್ತಾರಾ ಲಾಲ್​ಚಂದ್​​.?

ಭಾರತದ ಹೆಡ್​ ಕೋಚ್​​ ಹುದ್ದೆಗೆ ಟ್ರಯಾಂಗಲ್​ ಫೈಟ್; ​​​ವಿಕ್ರಮ್​, ವೀರೂಗೆ ಟಕ್ಕರ್​ ಕೊಡ್ತಾರಾ ಲಾಲ್​ಚಂದ್​​.?

ಹೆಡ್​ ಕೋಚ್​​ ರವಿ ಶಾಸ್ತ್ರಿ ಅಧಿಕಾರಾವಧಿ ಮುಕ್ತಾಯಕ್ಕೆ, ಇನ್ನೂ 2 ತಿಂಗಳುಗಳು ಬಾಕಿ ಉಳಿದಿವೆ. ಆದ್ರೆ ಕೋಚ್​​ ಹುದ್ದೆಗೇರುವ ಸರ್ಕಸ್​ ಮಾತ್ರ, ಈಗಲೇ ಆರಂಭವಾಗಿದೆ. ಅದರಲ್ಲೂ ಈ ಮೂವರ ನಡುವೆ ಸ್ಥಾನಕ್ಕಾಗಿ ಟಫ್​ಫೈಟ್​​ ನಡೆಯುತ್ತೆ ಎಂದೇ ಹೇಳಲಾಗ್ತಿದೆ. ಶಾಸ್ತ್ರಿ ಉತ್ತರಾಧಿಕಾರಿ ರೇಸ್​​ನಲ್ಲಿರೋ ಪ್ರಭಲ ಸ್ಪರ್ಧಿಗಳ್ಯಾರು ಅನ್ನೋ ರಿಪೋರ್ಟ್​ ಇಲ್ಲಿದೆ.!

blank

ಟೀಮ್​ ಇಂಡಿಯಾ ಹೆಡ್​​ ಕೋಚ್​​ ರವಿ ಶಾಸ್ತ್ರಿ ಅಧಿಕಾರಾವಧಿ ಅಂತ್ಯಕ್ಕೆ, ಇನ್ನು 2 ತಿಂಗಳು ಬಾಕಿ ಉಳಿದಿವೆ. ಈಗಾಗಲೇ ಕೋಚ್​ ಹುದ್ದೆಯಿಂದ ಕೆಳಗಿಳಿಯೋ ಇಂಗಿತವನ್ನ, ಸ್ವತಃ ಶಾಸ್ತ್ರಿಯೇ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಟೀಮ್​ ಇಂಡಿಯಾದ ಮುಂದಿನ ಕೋಚ್​ ಯಾರಾಗಲಿದ್ದಾರೆ ಅನ್ನೋ ವಿಚಾರ, ಇದೀಗ ಕ್ರಿಕೆಟ್​​ ಲೋಕದಲ್ಲಿ ತೀವ್ರ ಚರ್ಚೆಯಲ್ಲಿದೆ. ಅದರಲ್ಲೂ ಈ ಮೂವರ ನಡುವೆ ಕೋಚ್​ಗಾದಿಗೇರಲು ಟಫ್​ ಫೈಟ್​​ ನಡೆಯಲಿದೆ ಎಂದೇ ಹೇಳಲಾಗ್ತಿದೆ. ವಿಶೇಷ ಅಂದ್ರೆ, ಈ ಮೂವರು ಭಾರತೀಯ ಕ್ರಿಕೆಟಿಗರೇ ಆಗಿದ್ದಾರೆ.

ರೇಸ್​ನಲ್ಲಿದ್ದಾರೆ ಹಾಲಿ ಬ್ಯಾಟಿಂಗ್​ ಕೋಚ್​​ ವಿಕ್ರಮ್ ರಾಥೋರ್​​​..!

ವಿಕ್ರಮ್​ ರಾಥೋರ್​.. ಟೀಮ್​ ಇಂಡಿಯಾದ ಹಾಲಿ ಬ್ಯಾಟಿಂಗ್​ ಕೋಚ್. ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಲವೇ ಪಂದ್ಯಗಳನ್ನಾಡಿದ್ರೂ, ದೇಶಿ ಕ್ರಿಕೆಟ್​​ನಲ್ಲಿ ತನ್ನದೇ ಆದ ಛಾಪು ಮೂಡಿಸಿದ ಆಟಗಾರ. ದ್ರಾವಿಡ್​​ ಜೊತೆಗೊಡಿ ಭಾರತದ ಕಿರಿಯರ ತಂಡಕ್ಕೂ ಕೋಚ್​​ ಆಗಿದ್ದ ರಾಥೋರ್,​ ಇದೀಗ ಹಿರಿಯರ ತಂಡದ ಬ್ಯಾಟಿಂಗ್​ ಕೋಚ್​ ಆಗಿ ಉತ್ತಮ ಸಾಧನೆ ಮಾಡಿದ್ದಾರೆ. ಇದಲ್ಲದೇ ಮ್ಯಾನೇಜ್​ಮೆಂಟ್​ ಹಾಗೂ ಆಟಗಾರರಲ್ಲಿ ರಾಥೋರ್​ ಬಗ್ಗೆ ಉತ್ತಮ ಅಭಿಪ್ರಾಯಗಳೂ ಇವೆ. ಹೀಗಾಗಿ ವಿಕ್ರಮ್​ ಹೆಡ್​ ಕೋಚ್​ ಆಗೋ ಸಾಧ್ಯತೆಯಿದೆ ಎನ್ನಲಾಗ್ತಿದೆ.

ಮುಂಚೂಣಿಯಲ್ಲಿದೆ ವಿರೇಂದ್ರ ಸೆಹ್ವಾಗ್​ ಹೆಸರು..!

ಯೆಸ್​​.. ಟೀಮ್​ ಇಂಡಿಯಾ ಕಂಡ ಸ್ಪೋಟಕ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್​ ಕೂಡ, ಕೋಚ್​ ಹುದ್ದೆಯ ಪ್ರಬಲ ಆಕಾಂಕ್ಷಿ. ಮೂರೂ ಫಾರ್ಮೆಟ್​ಗಳಲ್ಲಿ​ ಅಮೋಘ ಸಾಧನೆ ಮಾಡಿರುವ ಸೆಹ್ವಾಗ್​, ಐಪಿಎಲ್​ನಲ್ಲಿ ಪಂಜಾಬ್​ ತಂಡದ ಮೆಂಟರ್​ ಆಗಿ ಕೆಲಸ ಮಾಡಿದ ಅನುಭವವನ್ನೂ ಹೊಂದಿದ್ದಾರೆ. ಈ ಹಿಂದೆಯೂ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದರೂ ಅವಕಾಶ ಸಿಕ್ಕಿರಲಿಲ್ಲ. ಆದ್ರೆ ಈ ಬಾರಿ ಕೋಚ್​ಗಾದಿಯ ರೇಸ್​​ನಲ್ಲಿ ಸೆಹ್ವಾಗ್​ ಪ್ರಬಲ ಸ್ಪರ್ಧಿ ಎಂದೇ ಹೇಳಲಾಗ್ತಿದೆ.

ವಿಕ್ರಮ್​, ವೀರೂಗೆ ಟಕ್ಕರ್​ ಕೊಡ್ತಾರಾ ಲಾಲ್​ಚಂದ್​​.?

ಕ್ರಿಕೆಟಿಗನಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅಷ್ಟೇನು ಪರಿಚಿತರಲ್ಲದ ಲಾಲ್​ಚಂದ್​ ರಜಪೂತ್​​, ಕೋಚ್​ ಹಾಗೂ ಮೆಂಟರ್​ ಆಗಿ ಉತ್ತಮ ಸಾಧನೆ ಮಾಡಿದ್ದಾರೆ. ಅಫ್ಘಾನಿಸ್ತಾನ ತಂಡಕ್ಕೆ ಐಸಿಸಿಯಲ್ಲಿ ಖಾಯಂ ಸದಸ್ಯತ್ವ ಸಿಕ್ಕಿದ್ದು, ಲಾಲ್​ಚಂದ್​ ಕೋಚಿಂಗ್​ನಲ್ಲಿ ತಂಡ ವೆಸ್ಟ್ ​ಇಂಡೀಸ್​ ಅನ್ನ ಮಣಿಸಿದಾಗಲೇ.! 2018ರ ಬಳಿಕ ಜಿಂಬಾಬ್ವೆ ಕೋಚ್​ ಆಗಿ ಕಾರ್ಯ ನಿರ್ವಹಿಸ್ತಾ ಇರೋ ಲಾಲ್​ಚಂದ್,​ ಉತ್ತಮ ಕೋಚಿಂಗ್​ ಟ್ರ್ಯಾಕ್​ ರೆಕಾರ್ಡ್​ ಹೊಂದಿದ್ದಾರೆ. ಈ ಹಿಂದೆಯೂ ಕೋಚ್​​ ಹುದ್ದೆಯ ರೇಸ್​​ನಲ್ಲಿದ್ದ ಲಾಲ್​ಚಂದ್​​, ಈ ಬಾರಿಯೂ ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗ್ತಿದೆ.

ಈ ಮೂವರು ಭಾರತೀಯರ ಟಫ್​ ಫೈಟ್​​ ನಡುವೆಯೇ ಹಲ ವಿದೇಶಿ ಕೋಚ್​​ಗಳು ಕೂಡ ರೇಸ್​​ನಲ್ಲಿದ್ದಾರೆ. ರವಿಶಾಸ್ತ್ರಿ ಅವಧಿ ಅಂತ್ಯಕ್ಕೆ ಇರುವ 2 ತಿಂಗಳ ಅವಧಿಯಲ್ಲಿ ಈ ಪಟ್ಟಿ ಇನ್ನಷ್ಟು ಉದ್ದ ಬೆಳೆಯೋದ್ರಲ್ಲಿ ಅನುಮಾನವೇ ಇಲ್ಲ.

Source: newsfirstlive.com Source link