12 ವರ್ಷಗಳ ಬಳಿಕ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್​​​ ಕ್ಲಬ್​ಗೆ ಮರಳಿದ ರೊನಾಲ್ಡೊ

12 ವರ್ಷಗಳ ಬಳಿಕ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್​​​ ಕ್ಲಬ್​ಗೆ ಮರಳಿದ ರೊನಾಲ್ಡೊ

ಪೋರ್ಚ್​ಗಲ್ ಸ್ಟಾರ್​ ಫುಟ್ಬಾಲರ್ ಕ್ರಿಸ್ಟಿಯಾನೊ ರೊನಾಲ್ಡೋ, 12 ವರ್ಷಗಳ ಬಳಿಕ ಮತ್ತೆ ಮ್ಯಾಂಚೆಸ್ಟರ್ ಯುನೈಟೆಡ್​ ಫುಟ್ಬಾಲ್ ಕ್ಲಬ್​ಗೆ ಮರಳಲಿದ್ದಾರೆ . 2 ವರ್ಷದ ಅವಧಿಗೆ ​ಮ್ಯಾಂಚೆಸ್ಟರ್ ಯುನೈಟೆಡ್​ ಪರ ಆಡಲು 25 ಮಿಲಿಯನ್ ಯೂರೋಸ್​ಗೆ ( ಸುಮಾರು 216 ಕೋಟಿ ರೂ.) ಒಪ್ಪಂದ ಮಾಡಿಕೊಂಡಿದ್ದಾರೆ. 2018ರಿಂದ ಜುವೆಂಟಸ್ ಫುಟ್ಬಾಲ್ ಕ್ಲಬ್ ಪ್ರತಿನಿಧಿಸುತ್ತಿದ್ದ ರೊನಾಲ್ಡೊ, ಮ್ಯಾಂಚೆಸ್ಟರ್ ಸಿಟಿಗೆ ಸೇರಬಹುದೆಂದು ಊಹಾಪೋಹಗಳು ಕೇಳಿ ಬಂದಿದ್ದವು. ಆದ್ರೆ ಕ್ರಿಸ್ಟಿಯನ್ ರೊನಾಲ್ಡೊ ಮತ್ತೆ ಯುನೈಟೆಡ್ ಸೇರಿಕೊಳ್ಳೋದು ಬಹುತೇಕ ಖಚಿತವಾಗಿದೆ.

2003ರಲ್ಲಿ ಮ್ಯಾಚೆಂಸ್ಟರ್ ಯುನೆಟೆಡ್​​ ಕ್ಲಬ್​ನ ಮೊದಲ ಬಾರಿಗೆ ಪ್ರತಿನಿಧಿಸಿದ್ದ 18 ವರ್ಷದ ರೊನಾಲ್ಡೊ, 2009ರ ತನಕ ಇದೇ ಕ್ಲಬ್ ಪರ ಆಡಿದರು. ನಂತರ 2009ರಿಂದ 2018ವರೆಗೆ ರಿಯಲ್​ ಮ್ಯಾಡ್ರಿಡ್ ಫುಟ್ಬಾಲ್ ಕ್ಲಬ್​ ಪರ ಕಣಕ್ಕಿಳಿದ ರೊನಾಲ್ಡೊ, 2018ರಿಂದ ಜುವೆಂಟಸ್ ಪರವಾಗಿ ಆಡುತ್ತಿದ್ದರು. ಆದ್ರೀಗ ಜುವೆಂಟಸ್ ತೊರೆದು ಮ್ಯಾಂಚೆಸ್ಟರ್​ ಯುನೈಟೆಡ್​​ಗೆ ಸೇರಿಕೊಂಡಿದ್ದಾರೆ.

Source: newsfirstlive.com Source link