ಪಬ್​ಜಿಗಾಗಿ ತಂದೆಯ ಅಕೌಂಟ್​​ನಿಂದ 10 ಲಕ್ಷ ಡ್ರಾ ಮಾಡಿ, ಮನೆ ಬಿಟ್ಟ 16 ವರ್ಷದ ಬಾಲಕ

ಪಬ್​ಜಿಗಾಗಿ ತಂದೆಯ ಅಕೌಂಟ್​​ನಿಂದ 10 ಲಕ್ಷ ಡ್ರಾ ಮಾಡಿ, ಮನೆ ಬಿಟ್ಟ 16 ವರ್ಷದ ಬಾಲಕ

ಮುಂಬೈನ 16 ವರ್ಷದ ಬಾಲಕನೋರ್ವ ಪಬ್​ಜಿಗಾಗಿ ತನ್ನ ತಂದೆಯ ಅಕೌಂಟ್​​ನಿಂದ 10 ಲಕ್ಷ ಹಣ ಡ್ರಾ ಮಾಡಿ ಕಳೆದಿರುವ ಘಟನೆ ನಡೆದಿದೆ. ಪಬ್​ಜಿ ಗೇಮ್ ಆಟದ ಹುಚ್ಚು ಹತ್ತಿಸಿಕೊಂಡಿದ್ದ ಬಾಲಕ ಗೇಮ್​​ನಲ್ಲಿ ವರ್ಚುವಲ್ ಕ್ಯಾಷ್ ಖರೀದಿಸಲು ತನ್ನ ತಂದೆಯ ಅಕೌಂಟ್​ನಿಂದ ಬರೋಬ್ಬರಿ 10 ಲಕ್ಷ ಹಣ ಡ್ರಾ ಮಾಡಿ ಗೇಮ್​ನಲ್ಲಿ ಇನ್ವೆಸ್ಟ್ ಮಾಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: ‘ಪಬ್ ಜಿ’ ಮಾದರಿಯ ಹಿಂಸಾತ್ಮಕ ಆನ್​ಲೈನ್ ಗೇಮ್​ಗಳನ್ನು ನಿಷೇಧಿಸಿ- ಸರ್ಕಾರಕ್ಕೆ ಖಾದರ್ ಒತ್ತಾಯ

ಇನ್ನು ತಮ್ಮ ಪುತ್ರ ಬ್ಯಾಂಕ್​ನಿಂದ 10 ಲಕ್ಷ ಹಣ ಡ್ರಾ ಮಾಡಿದ್ದಾನೆಂಬ ವಿಷಯ ಪೋಷಕರಿಗೆ ತಿಳಿಯುತ್ತಲೇ ಬಾಲಕ ಮನೆ ಬಿಟ್ಟು ಓಡಿಹೋಗಿದ್ದಾನೆ.. ಓಡಿ ಹೋಗುವ ಮುನ್ನ ಮನೆಯಲ್ಲಿ ಚೀಟಿಯೊಂದರಲ್ಲಿ ತಾನು ಮನೆ ಬಿಟ್ಟು ಹೋಗ್ತಿರೋ ವಿಚಾರವನ್ನ ಬರೆದಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಪಬ್​ಜಿ ರೀತಿ ಆಟದಲ್ಲಿ ನಿರಂತರ ಸೋಲಿಸುತ್ತಿದ್ದ ಸ್ನೇಹಿತನನ್ನೇ ಹತ್ಯೆ ಗೈದ ಬಾಲಕ

ಇನ್ನು ಬಾಲಕನ ಪೋಷಕರು ಎಂಐಡಿಸಿ ಪೊಲೀಸರಿಗೆ ತಮ್ಮ ಮಗ ಕಾಣೆಯಾಗಿದ್ದಾನೆಂದು ದೂರು ನೀಡಿದ್ದಾರೆ. ನಂತರ ಪೊಲೀಸರು ಬಾಲಕನನ್ನ ಮನೆಯ ಸುತ್ತಮುತ್ತಲ ಏರಿಯಾದಲ್ಲೇ ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

Source: newsfirstlive.com Source link