ಸತತ 7 ವರ್ಷಗಳಿಂದ ಹೊರ ಪ್ರಪಂಚವನ್ನೇ ಕಾಣದ ತಾಯಿ, ಮಗಳು; ಸಮಾಜ ಸೇವಕನಿಂದ ರಕ್ಷಣೆ

ಸತತ 7 ವರ್ಷಗಳಿಂದ ಹೊರ ಪ್ರಪಂಚವನ್ನೇ ಕಾಣದ ತಾಯಿ, ಮಗಳು; ಸಮಾಜ ಸೇವಕನಿಂದ ರಕ್ಷಣೆ

ಉಡುಪಿ: ಏಳು ವರ್ಷಗಳಿಂದ ಹೊರ ಪ್ರಪಂಚ ಕಾಣದೇ ಗೃಹ ಬಂಧನದಲ್ಲಿದ್ದ ಮೂವರನ್ನು ಸಮಾಜ ಸೇವಕರೊಬ್ಬರು ರಕ್ಷಿಸಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ.

ಚಾಂತಾರು ಎಂಬಲ್ಲಿ ಮಾನಸಿಕ ಅಸ್ವಸ್ಥ ಮಗನ ಉಪಟಳ, ಹಾಗೂ ಉಗ್ರ ವರ್ತನೆಯ ಭೀತಿಯಿಂದ, ಮಗ ಸೇರಿದಂತೆ ತಾಯಿ ಗುಲಾಬಿ ಶೆಟ್ಟಿ(80)ಹಾಗೂ ಮಗಳು ವಾರಿಜ ಶೆಟ್ಟಿ (50ವರ್ಷ) ಕಳೆದ ಏಳು ವರ್ಷಗಳಿಂದ ಯಾವುದೇ ಕನಿಷ್ಟ ಸೌಲಭ್ಯಗಳಿಲ್ಲದೆ ಹೀನಾಯ ಬದುಕನ್ನು ನಡೆಸುತ್ತಿದ್ದರು ಎನ್ನಲಾಗಿದೆ.

ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದೆ ಮನೆಯಲ್ಲಿ ವಾಸಿಸುತ್ತಿದ್ದರು. ಪರ ಊರಿನಲ್ಲಿರುವ ಸಂಬಂಧಿಯೋರ್ವರು ಇವರಿಗೆ ದಿನಸಿ ಸಾಮಾಗ್ರಿಗಳನ್ನು ಒದಗಿಸುತ್ತಿದ್ದರು, ಆದರೆ ಅದನ್ನು ಕೂಡಾ ಸರಿಯಾಗಿ ಬಳಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಅಮೆರಿಕ ಅವಳಿ ಕಟ್ಟಡಗಳ ಮೇಲೆ ದಾಳಿ ಮಾಡಿದ್ದು ‘ಬಿನ್ ಲಾಡೆನ್ ಅಲ್ವೇ ಅಲ್ಲ’ ಎಂದ ತಾಲಿಬಾನ್

ಕಳೆದ ಏಳು ವರ್ಷಗಳಿಂದ ಮನೆ ಬಿಟ್ಟು ಹೊರಗಿನ ಸಂಪರ್ಕವೇ ಇವರಿಗೆ ಇರಲಿಲ್ಲ ಎನ್ನಲಾಗಿದ್ದು, ವಿಷಯ ತಿಳಿದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಸ್ಥಳೀಯರ ಸಹಕಾರದಿಂದ ಮೂವರ ರಕ್ಷಣೆ ಮಾಡಿದ್ದಾರೆ. ಸದ್ಯ ಮಾನಸಿಕ ಅಸ್ವಸ್ಥನನ್ನು ಆಸ್ಪತ್ರೆಗೆ ದಾಖಲು ಪಡಿಸಿದ್ದು, ತಾಯಿ ಮತ್ತು ಮಗಳಿಗೆ ನಿಟ್ಟೂರಿನಲ್ಲಿರುವ ಸಖಿ ಒನ್ ಸ್ಟಾಪ್ ಸೆಂಟರಿನಲ್ಲಿ ತಾತ್ಕಾಲಿಕ ಆಶ್ರಯ ಒದಗಿಸಲಾಗಿದೆ.

Source: newsfirstlive.com Source link