ಕೊರೊನಾದಿಂದ ಗುಣಮುಖರಾದವರಿಗೆ ಒಂದೇ ಡೋಸ್ ಕೊವ್ಯಾಕ್ಸಿನ್ ಪರಿಣಾಮಕಾರಿ- ICMR

ಕೊರೊನಾದಿಂದ ಗುಣಮುಖರಾದವರಿಗೆ ಒಂದೇ ಡೋಸ್ ಕೊವ್ಯಾಕ್ಸಿನ್ ಪರಿಣಾಮಕಾರಿ- ICMR

ನವದೆಹಲಿ: ಕೊರೊನಾ ವೈರಸ್​​​ ನಿಯಂತ್ರಣಕ್ಕೆ ತರಲು, ಭಾರತೀಯರಿಗೆ ಲಸಿಕೆ ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಗಲು ರಾತ್ರಿಯೆನ್ನದೇ ಶ್ರಮಿಸುತ್ತಲೇ ಇದೆ. ದೇಶದಲ್ಲಿ ಲಸಿಕೆ ಕೊರತೆ ಇದ್ದರೂ ಎಲ್ಲರಿಗೂ ಲಸಿಕೆ ನೀಡುವ ಪ್ರಯತ್ನಗಳು ನಡೆಯುತ್ತಲೇ ಇವೆ. ಹೀಗಿರುವಾಗಲೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಡೆಸಿದ ಪ್ರಾಥಮಿಕ ಅಧ್ಯಯನ ವರದಿಯಲ್ಲಿ ಹೊಸ ಅಂಶವೊಂದು ಬಹಿರಂಗವಾಗಿದೆ.

ಅಧ್ಯಯನ ವರದಿ ಪ್ರಕಾರ, ಕೋವಿಡ್‌ನಿಂದ ಗುಣಮುಖರಾದವರಿಗೆ ಒಂದು ಡೋಸ್ ಕ್ಯೋವ್ಯಾಕ್ಸಿನ್​​ ಸಾಕಷ್ಟು ಪರಿಣಾಮಕಾರಿಯಾಗಿದೆ. ಕೊರೊನಾದಿಂದ ಗುಣಮುಖರಾದವರಲ್ಲಿ ಆ್ಯಂಟಿ ಬಾಡಿ ಉತ್ಪಾದನೆ ಹೆಚ್ಚು ಇರುತ್ತದೆ. ಸೋಂಕು ಕಾಣಿಸಿಕೊಳ್ಳದ ವ್ಯಕ್ತಿಗಳಲ್ಲಿ ಎರಡು ಡೋಸ್ ನೀಡುವುದು, ಗುಣಮುಖರಾವರಿಗೆ ಒಂದು ಡೋಸ್ ಕೊಡುವುದು ಎರಡೂ ಒಂದೇ ರೀತಿಯ ಪರಿಣಾಮ ಬೀರುತ್ತದೆ. ಗುಣಮುಖರಾದವರಿಗೆ ಕೇವಲ ಒಂದು ಡೋಸ್ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ಅಧ್ಯಯನ ವರದಿ ಹೇಳುತ್ತಿದೆಯಂತೆ.

ಕೊರೊನಾದಿಂದ ಗುಣಮುಖರಾದವರ ಮೇಲೆ ಒಂದೇ ಡೋಸ್ ಕೊವ್ಯಾಕ್ಸಿನ್ ಲಸಿಕೆ ಪರಿಣಾಮ ಬೀರಲಿದೆ.. ಇದರಿಂದ ಸದ್ಯ ಎದುರಾಗಿರುವ ಲಸಿಕೆ ಅಭಾವ ಕಡಿಮೆ ಮಾಡಬಹುದು ಎಂದು ಐಸಿಎಂಆರ್ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಹೊಸ ದಾಖಲೆ! ದೇಶದಲ್ಲಿ ಇಂದು ಒಂದೇ ದಿನ 90 ಲಕ್ಷ ಮಂದಿಗೆ ವ್ಯಾಕ್ಸಿನೇಷನ್

Source: newsfirstlive.com Source link