ಬಿಹಾರ್​ದಲ್ಲಿ ಕೊಲೆ, ಬೆಂಗಳೂರಲ್ಲಿ ಕಳ್ಳತನ; ಪೊಲೀಸ್​ ಬಲೆಗೆ ಬಿದ್ದ ಖತರ್ನಾಕ್​ ಖದೀಮರು

ಬಿಹಾರ್​ದಲ್ಲಿ ಕೊಲೆ, ಬೆಂಗಳೂರಲ್ಲಿ ಕಳ್ಳತನ; ಪೊಲೀಸ್​ ಬಲೆಗೆ ಬಿದ್ದ ಖತರ್ನಾಕ್​ ಖದೀಮರು

ಬೆಂಗಳೂರು: ಬಿಹಾರದಲ್ಲಿ ಗುಂಡು ಹಾರಿಸಿ ಕೊಲೆ ಮಾಡಿ ಬೆಂಗಳೂರಿಗೆ ಬಂದು ಕಳ್ಳತನದಲ್ಲಿ ತೊಡಗಿದ್ದ ಖತರ್ನಾಕ್​ ಖದೀಮರನ್ನು, ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಜಾಲ ಪೊಲೀಸರು ಬಂಧಿಸಿದ್ದು, 1.45 ಲಕ್ಷ ಮೌಲ್ಯದ ಮೊಬೈಲ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಿಹಾರ ಮೂಲದ ಮೊಹಮ್ಮದ್ ಇಪ್ತಾಕರ್ ಆಲಿಂ, ಮತ್ತು ಮೊಹಮದ್ ಸಾಹಿಬ್ ಬಂಧಿತ ಆರೋಪಿಗಳು. ಆಗಸ್ಟ್​ 1ರಂದು ಹುಣಸಮಾರನಹಳ್ಳಿಯಲ್ಲಿ ಎರಡು ಮೊಬೈಲ್ ಅಂಗಡಿಗೆ ಕನ್ನ ಹಾಕಿ ಎಸ್ಕೇಪ್ ಆಗಿದ್ದ ಆರೋಪಿಗಳು, ಬೆಂಗಳೂರಿನಲ್ಲಿ ಮೊಬೈಲ್ ಕದ್ದು ದೆಹಲಿಯಲ್ಲಿ ಮಾರಾಟ ಮಾಡ್ತಿದ್ದರಂತೆ.

blank

ಇದನ್ನೂ ಓದಿ: ಉಗ್ರರ ಆತ್ಮಾಹುತಿ ದಾಳಿಗೆ ಅಮೆರಿಕ ಪ್ರತೀಕಾರ; ಏರ್​​ಸ್ಟ್ರೈಕ್ ಮೂಲಕ ಸೇಡು ತೀರಿಸಿಕೊಂಡ ದೊಡ್ಡಣ್ಣ

ಸಿಲಿಕಾನ್​ ಸಿಟಿಯ ಪ್ರಮುಖ ಅಂಗಡಿಗಳಿಗೆ ಕನ್ನ ಹಾಕ್ತಿದ್ದ ಇಬ್ಬರು ಖದೀಮರು, ಹೆಣ್ಣೂರು, ಹೆಬ್ಬಗೋಡಿ, ಚಿಕ್ಕಜಾಲ, ದ.ಕನ್ನಡದಲ್ಲೂ ಕೈ ಚಳಕ ತೋರಿ, ಮೊಬೈಲ್, ಹಾರ್ಡ್ವೇರ್ ಸೇರಿದಂತೆ ರಸ್ತೆ ಬದಿಯಲ್ಲಿನ ಅಂಗಡಿಗಳಲ್ಲಿ ಕರಾಮತ್ತು ತೋರಿದ್ದಾರೆ ಎನ್ನಲಾಗಿದೆ.
ಮೊಬೈಲ್ ಅಂಗಡಿ ಕಳ್ಳತನ ಪ್ರಕರಣ ಬೆನ್ನತಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಬಿಹಾರ್​ನಲ್ಲಿ ಓರ್ವನನ್ನು ಕೊಲೆ ಮಾಡಿ ತಲೆ ಮರೆಸಿಕೊಳ್ಳಲು ರಾಜ್ಯಕ್ಕೆ ಬಂದಿರುವುದಾಗಿ ಹೇಳಿದ್ದಾರೆಂದು ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

Source: newsfirstlive.com Source link