ಮೈಸೂರು ಕೇಸ್​​: ಸಂಬಂಧಿಕರ ಮನೆಯಲ್ಲಿ ಅವಿತಿದ್ದರಂತೆ ಶಂಕಿತರು.. ಹೇಗಿತ್ತು ಪೊಲೀಸ್ ಬೇಟೆ?

ಮೈಸೂರು ಕೇಸ್​​: ಸಂಬಂಧಿಕರ ಮನೆಯಲ್ಲಿ ಅವಿತಿದ್ದರಂತೆ ಶಂಕಿತರು.. ಹೇಗಿತ್ತು ಪೊಲೀಸ್ ಬೇಟೆ?

ಮೈಸೂರು: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು ಐವರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಇಂದು ಬೆಳಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದೇ ಒಂದು ರೋಚಕ.

ಆಗಸ್ಟ್ 24ನೇ ತಾರೀಕಿನಂದು ಎಂಬಿಎ ವಿದ್ಯಾರ್ಥಿನಿ ತನ್ನ ಸ್ನೇಹಿತನೊಂದಿಗೆ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದಳು. ಈ ವೇಳೆ ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರದ ನಿರ್ಜನ ಪ್ರದೇಶದಲ್ಲಿ ನಾಲ್ವರು ಯುವಕರು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಬಳಿಕ ಯಾರಿಗೂ ಸಿಗದಂತೆ ಮೈಸೂರಿನಿಂದ ಕಾಲ್ಕಿತ್ತಿದ್ದರು.

ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಕೇವಲ ಮೈಸೂರು ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಸರ್ಕಾರದ ಮೇಲೆ ಮಹಿಳಾ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಒತ್ತಡ ಹಾಕಿದ್ದರು.

ಇದನ್ನೂ ಓದಿ: ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಕೇಸ್: ತಮಿಳುನಾಡಿನಲ್ಲಿ 4 ಶಂಕಿತರು ಪೊಲೀಸರ ವಶಕ್ಕೆ

ಮೂರು ದಿನಗಳಿಂದ ಸತತ ಹುಡುಕಾಟದಲ್ಲಿದ್ದ ಪೊಲೀಸರು ಈಗ ಆರೋಪಿಗಳಿಗೆ ಬಲೆ ಬೀಸಿ ವಶಕ್ಕೆ ಪಡೆದಿದ್ದಾರೆ. ತಮಿಳುನಾಡಿನ ಸತ್ಯಮಂಗಲದ ತಿರ್ಪೂರಿನಲ್ಲಿ ಶಂಕಿತರು ಅವಿತುಕೊಂಡಿದ್ದರು ಎನ್ನಲಾಗಿದೆ. ತಮ್ಮ ಸ್ನೇಹಿತರು, ಸಂಬಂಧಿಕರ ಮನೆಯಲ್ಲಿ ತಲೆಮರೆಸಿಕೊಂಡಿದ್ದ ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸತ್ಯಮಂಗಲದಿಂದ ಕರೆದುಕೊಂಡು ಬಂದ ಪೊಲೀಸರು ಈಗ ಅಜ್ಞಾತ ಸ್ಥಳದಲ್ಲಿ ಗೌಪ್ಯ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Source: newsfirstlive.com Source link