ಸಾಮೂಹಿಕ ಅತ್ಯಾಚಾರ: ಬಂಧಿತ ಆರೋಪಿಗಳ ಪೈಕಿ ಓರ್ವ 17 ವರ್ಷದ ಬಾಲಕ- ಪ್ರವೀಣ್ ಸೂದ್

ಸಾಮೂಹಿಕ ಅತ್ಯಾಚಾರ: ಬಂಧಿತ ಆರೋಪಿಗಳ ಪೈಕಿ ಓರ್ವ 17 ವರ್ಷದ ಬಾಲಕ- ಪ್ರವೀಣ್ ಸೂದ್

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಡಿಜಿ/ಐಜಿಪಿ ಪ್ರವೀಣ್ ಸೂದ್ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಐವರು ಆರೋಪಿಗಳನ್ನು ಬಂಧಿಸಿರುವುದಾಗಿ ಹೇಳಿಕೆ ನೀಡಿದರು.

ಓರ್ವ 17 ವರ್ಷದ ಬಾಲಕನಾಗಿದ್ದಾನೆ..

ಏಳು ತಂಡಗಳನ್ನ ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದೇವೆ. ಐದು ಜನರೂ ಸಹ ತಮಿಳುನಾಡಿನ ತಿರುಪುರ್ ಮೂಲದವರು. ಆರೋಪಿಗಳಲ್ಲಿ ಓರ್ವ 17 ವರ್ಷದ ಬಾಲಕನಾಗಿದ್ದಾನೆ ಎಂದಿದ್ದಾರೆ. ಆರೋಪಿಗಳು ಆಗಾಗ್ಗೆ ಮೈಸೂರಿಗೆ ಬಂದು ಹೋಗುತ್ತಿದ್ದರು. ಆರೋಪಿಗಳು ವೈರಿಂಗ್, ಡ್ರೈವಿಂಗ್, ಕಾರ್ಮಿಕರು. ಏಳು ಎಂಟನೇ ಕ್ಲಾಸ್ ಓದಿದ್ದಾರೆ. ಆಗಾಗ್ಗೆ ಪಾರ್ಟಿ ಮಾಡೋದು ಕುಡಿಯೋದು ಮಾಡ್ತಿದ್ದರು ಎಂದು ಪ್ರವೀಣ್ ಸೂದ್ ಮಾಹಿತಿ ನೀಡಿದ್ದಾರೆ.

ಆರೋಪಿಗಳು ಸಣ್ಣಪುಟ್ಟ ಪ್ರಕರಣಗಳಲ್ಲಿ ಭಾಗಿಯಾಗಿರೋದು ಪತ್ತೆಯಾಗಿದೆ..

ಸೈಂಟಿಫಿಕ್ ಕ್ಲೂನಿಂದ ಆರೋಪಿಗಳನ್ನ ಪತ್ತೆ ಮಾಡಲಾಗಿದೆ. ಪ್ರತಾಪ್ ರೆಡ್ಡಿ ಇಲ್ಲೇ ಇದ್ದು ತನಿಖೆ ಮಾಡಿದ್ದಾರೆ. ಪ್ರಾಥಮಿಕ ಹಂತದ ತನಿಖೆಯಲ್ಲಿ ಆರೋಪಿಗಳು ಸಣ್ಣಪುಟ್ಟ ಪ್ರಕರಣಗಳಲ್ಲಿ ಭಾಗಿಯಾಗಿರೋದು ಪತ್ತೆಯಾಗಿದೆ.

ಓರ್ವ ಎಸ್ಕೇಪ್ ಆಗಿದ್ದಾನೆ..

ಬಂಡಿಪಾಳ್ಯಕ್ಕೆ ಎಪಿಎಂಸಿಗೆ ಬಂದಾಗ ಡ್ರೈವರ್ ಜೊತೆ ಇವರು ಬರ್ತಿದ್ರು. ಆಗಾಗ ಪಾರ್ಟಿ ಮಾಡಿ ಹೋಗ್ತಿದ್ರು.. ಈ ಬಾರಿ ಈ ಕೃತ್ಯ ಎಸಗಿದ್ದಾರೆ. ಇದುವರೆಗೂ ಪ್ರಾಥಮಿಕವಾಗಿ ತನಿಖೆ ಮಾತ್ರ ನಡೆದಿದೆ. ಮೈಸೂರು ಸಿಟಿ, ದಕ್ಷಿಣ ವಲಯ ಪೊಲೀಸ್ರು ಸೇರಿ ವಿಶೇಷ ತಂಡ ಮಾಡಲಾಗಿತ್ತು.. ಒಟ್ಟು ಆರು ಜನ ಇದ್ದು, ಐದು ಮಂದಿ ಬಂಧನವಾಗಿದೆ.. ಓರ್ವ ಎಸ್ಕೇಪ್ ಆಗಿದ್ದಾನೆ. ಟ್ರಯಲ್ ಸಂದರ್ಭದಲ್ಲಿ ಯುವತಿ ಸಹಕಾರ ಕೊಡ್ತಾರೆ ಅಂತ ನಿರೀಕ್ಷಿಸುತ್ತೇವೆ ಎಂದಿದ್ದಾರೆ.

Source: newsfirstlive.com Source link