ಸಿಬ್ಬಂದಿಯಿಂದಲೇ ಕಳ್ಳತನ.. ನಗರಸಭೆ ಕಡತಗಳಿಗೆ ಕನ್ನ ಹಾಕಿದ ಆರೋಪ

ಸಿಬ್ಬಂದಿಯಿಂದಲೇ ಕಳ್ಳತನ.. ನಗರಸಭೆ ಕಡತಗಳಿಗೆ ಕನ್ನ ಹಾಕಿದ ಆರೋಪ

ಹಾಸನ: ನಗರಸಭೆಯ ಸಿಬ್ಬಂದಿಯೇ ನಗರಸಭೆಯ ಕಡತಗಳಿಗೆ ಕನ್ನ ಹಾಕಿ ಹೊತ್ತೊಯ್ದ ಘಟನೆ ಅರಸೀಕೆರೆ ನಗರ ಸಭೆಯಲ್ಲಿ ನಡೆದಿದ್ದು, ಸಿಬ್ಬಂದಿಯ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಗರಸಭೆಯಲ್ಲಿನ ಮಹತ್ವದ ಕಡತಗಳನ್ನು ನಗರಸಭೆಯ ಸಿಬ್ಬಂದಿಯಾದ, ಮ್ಯಾನೇಜರ್ ಕೃಷ್ಣೇಗೌಡ ಹಾಗೂ ಎಸ್.ಡಿ.ಎ. ಪ್ರವೀಣ್ ಎಂಬುವವರು ಹೊತ್ತೊಯ್ದಿದ್ದಾರೆ ಎಂದು, ನಗರ ಸಭೆ ಅಧ್ಯಕ್ಷ ಗಿರೀಶ್ ಗಂಭೀರ ಆರೋಪ ಮಾಡಿದ್ದಾರೆ.

blank

ಇದನ್ನೂ ಓದಿ:  ಚಿಕ್ಕಮಗಳೂರಲ್ಲಿ ಗಾಂಜಾ ಘಾಟು: ಹೊರ ರಾಜ್ಯದಿಂದ ಗಾಂಜಾ ತರ್ತಿದ್ದ ಐವರ ಬಂಧನ

ಕಡತ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಡತ ಕಳ್ಳತನ ಮಾಡಿ ಸಿಕ್ಕಿಬಿದ್ದ ವೇಳೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಕಡತನ ಕಳ್ಳತನ ಮಾಡಿದ ಇಬ್ಬರು ನೌಕರರ ಮೇಲೆ ಕ್ರಮ ಕೈಗೊಳ್ಳುವಂತೆ ನಗರಸಭೆ ಅಧ್ಯಕ್ಷ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

Source: newsfirstlive.com Source link