ಕಿಚ್ಚನ ಹುಟ್ಟುಹಬ್ಬಕ್ಕೆ ಸಿಗಲಿದೆ ‘ವಿಕ್ರಾಂತ್ ರೋಣ’ ಸಿನಿಮಾದ ಝಲಕ್

ಕಿಚ್ಚನ ಹುಟ್ಟುಹಬ್ಬಕ್ಕೆ ಸಿಗಲಿದೆ ‘ವಿಕ್ರಾಂತ್ ರೋಣ’ ಸಿನಿಮಾದ ಝಲಕ್

ಸ್ಯಾಂಡಲ್​ವುಡ್​ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ರವರ ಬರ್ತ್​ಡೇಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಕಿಚ್ಚನ ಅಭಿಮಾನಿಗಳಿಗೆ ವಿಕ್ರಾಂತ್​ ರೋಣ ಚಿತ್ರತಂಡದಿಂದ ಒಂದು ಸಿಹಿ ಸುದ್ದಿ ಸಿಕ್ಕಿದೆ.

ಹೌದು, ಸೆಪ್ಟೆಂಬರ್​ 2 ನೇ ತಾರಿಖಿನಂದು ಕಿಚ್ಚ ಸುದೀಪ್​ ತಮ್ಮ 50 ನೇ ವಸಂತಕ್ಕೆ ಕಾಲಿಡಲಿದ್ದಾರೆ. ಇನ್ನು ಕಿಚ್ಚನ ಹುಟ್ಟು ಹಬ್ಬದ ದಿನ ಸುದೀಪ್ ಅವರ ​ಮುಂದಿನ ಸಿನಿಮಾಗಳ ಬಗ್ಗೆ ಅನ್ಸೌನ್​ಮೆಂಟ್​ ಕೂಡ ಅಗಲಿದೆ. ಇದೀಗ ಕಿಚ್ಚ ಸುದೀಪ್​ ಅಭಿನಯದ ಬಹುನಿರೀಕ್ಷಿತ ಪ್ಯಾನ್​ ಇಂಡಿಯನ್​ ಮೂವಿ ‘ವಿಕ್ರಾಂತ್​ ರೋಣ’ ಚಿತ್ರದ ಒಂದು ಝಲಕ್​ ಸೆಪ್ಟೆಂಬರ್​ 2 ನೇ ತಾರೀಖು ಬಿಡುಗಡೆ ಅಗಲಿದೆ.

‘ವಿಕ್ರಾಂತ್​ ರೋಣ’ ಚಿತ್ರದ ನಿರ್ದೇಶಕ ಅನೂಪ್​ ಭಂಡಾರಿ ಚಿತ್ರದ ಹೊಸ ಪೋಸ್ಟರ್​ ಒಂದನ್ನ ಬಿಟ್ಟು ಕಿಚ್ಚನ ಹುಟ್ಟು ಹಬ್ಬದಂದು ‘ವಿಕ್ರಾಂತ್​ ರೋಣ’ ಚಿತ್ರದ ಫಸ್ಟ್​ ಗ್ಲಿಂಪ್ಸ್ ವಿಡಿಯೋವನ್ನು ರಿಲೀಸ್​ ಮಾಡೋದಾಗಿ ತಿಳಿಸಿದ್ದಾರೆ.

Source: newsfirstlive.com Source link