ಅತ್ಯಾಚಾರ ಕೇಸ್: ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ​ ₹5ಲಕ್ಷ ಬಹುಮಾನ ಘೋಷಣೆ​

ಅತ್ಯಾಚಾರ ಕೇಸ್: ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ​ ₹5ಲಕ್ಷ ಬಹುಮಾನ ಘೋಷಣೆ​

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಡಿ.ಜಿ/ ಐಜಿಪಿ ಪ್ರವೀಣ್ ಸೂದ್ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಐವರು ಆರೋಪಿಗಳನ್ನು ಬಂಧಿಸಿರುವುದಾಗಿ ಮಾಹಿತಿ ನೀಡಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸ್​ ತಂಡಕ್ಕೆ 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದಾರೆ.

ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತಂತೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಿದ್ದೇವೆ. ಐದು ಜನರೂ ಸಹ ತಮಿಳುನಾಡಿನ ತಿರುಪುರ್ ಮೂಲದವರು. ಆರೋಪಿಗಳಲ್ಲಿ ಓರ್ವ 17 ವರ್ಷದ ಬಾಲಕನಾಗಿದ್ದಾನೆ ಎಂದಿದ್ದಾರೆ.

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ: ಬಂಧಿತ ಆರೋಪಿಗಳ ಪೈಕಿ ಓರ್ವ 17 ವರ್ಷದ ಬಾಲಕ- ಪ್ರವೀಣ್ ಸೂದ್

ಇನ್ನು ಪೊಲೀಸರ ಕಾರ್ಯಾಚರಣೆಯನ್ನು ಶ್ಲಾಘಿಸಿದ ಅವರು ವೈಜ್ಞಾನಿಕ ಮತ್ತ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ತಂಡ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಇನ್ಮುಂದೆ ಕೃತ್ಯ ಎಸಗುವ ಆರೋಪಿಗಳಿಗೆ ಸಂದೇಶ ರವಾನಿಸಿದ್ದಾರೆ. ಪ್ರಾಥಮಿಕ ತನಿಖೆ ಮೂಲಕ ಆರೋಪಿಗಳನ್ನಿ ಶೀಘ್ರವಾಗಿ ಬಂಧಿಸಿದ ಪೊಲೀಸ್​ ತಂಡಕ್ಕೆ ಗೃಹ ಸಚಿವರ ಆದೇಶದ ಮೇಲೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾಗಿ ಹೇಳಿದರು.

ಎಡಿಜಿಪಿ ಪ್ರತಾಪ್​ ರೆಡ್ಡಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಲಾಗುತ್ತಿದ್ದು, ತಂಡದಲ್ಲಿ ಮೈಸೂರು ಪೊಲೀಸರು ಸೇರಿದಂತೆ ದಕ್ಷಿಣ ವಲಯದ ಪೊಲೀಸರು ಭಾಗಿಯಾಗಿದ್ದರು.

Source: newsfirstlive.com Source link