ಪೊಲೀಸರ ಕಾರ್ಯಾಚರಣೆ ಇಂಥ ಕೃತ್ಯ ನಡೆಸುವವರಿಗೆ ಪಾಠ- ಆರಗ ಜ್ಞಾನೇಂದ್ರ

ಪೊಲೀಸರ ಕಾರ್ಯಾಚರಣೆ ಇಂಥ ಕೃತ್ಯ ನಡೆಸುವವರಿಗೆ ಪಾಠ- ಆರಗ ಜ್ಞಾನೇಂದ್ರ

ಬೆಂಗಳೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರು 5 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಹಿನ್ನೆಲೆ ಮಾಧ್ಯಮಗಳಿಗೆ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರಿನಲ್ಲಿ ನಡೆದಿದ್ದು ಅಮಾನವೀಯ ಕೃತ್ಯ.. ಪ್ರವಾಸಿಗರು ಸೇರುವ ಸಾಂಸ್ಕೃತಿ ನಗರ ಮೈಸೂರು.. ಈ ಘಟನೆಯಿಂದ ಸಾಕಷ್ಟು ಆತಂಕ ಸೃಷ್ಟಿಯಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಇಂದು ಕಾರ್ಯಾಚರಣೆಗೆ ತೆರೆ ಬಿದ್ದಿದೆ. ಇಂಥ ಘಟನೆಗಳು ನಡೆದಾಗ ಆರೋಪಿಗಳ ಹೆಡೆಮುರಿ ಕಟ್ತೇವೆ ಅನ್ನೋದನ್ನ ಸಾಬೀತು ಮಾಡಿದ್ದೀವಿ.. ಆರೋಪಿಗಳನ್ನ ಬಂಧಿಸಿದ ಪೊಲೀಸರಿಗೆ ಅಭಿನಂದನೆಗಳನ್ನ ಸಲ್ಲಿಸುತ್ತೇನೆ ಎಂದಿದ್ದಾರೆ.

ನಿನ್ನೆ ಪೊಲೀಸರೊಂದಿಗೆ 2 ಸುತ್ತಿನ ಮಾತುಕತೆ ಮಾಡಿದ್ದೀನಿ. ನಮ್ಮ ಪೊಲೀಸರ ಕಾರ್ಯಾಚರಣೆ ನೀಚರಿಗೆ ಪಾಠವಾಗಿದೆ. ಇಂತಹ ಕೃತ್ಯ ಎಸಗುವವರಿಗೆ ಇದು ಪಾಠವಾಗಲಿದೆ. ಸಂತ್ರಸ್ತೆ ಇನ್ನೂ ಹೇಳಿಕೆ ಕೊಡುವ ಸ್ಥಿತಿಯಲ್ಲಿಲ್ಲ. ಪೊಲೀಸರಿಗೆ ಇದು ಸವಾಲಿನ ಪ್ರಕರಣವಾಗಿತ್ತು. ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದಯ ಗೃಹ ಸಚಿವ ಆರಗ ಜ್ಞಾನೇಂದ್ರ ಸುದ್ದಿಗೋಷ್ಠಿ ನಡೆಸಿದ್ದಾರೆ.

Source: newsfirstlive.com Source link