ಮೈಸೂರು: ಅತ್ಯಾಚಾರ ಪ್ರಕರಣ ಭೇದಿಸಲು ಫೀಲ್ಡಿಗೆ ಇಳಿದಿದ್ದ 26 ಕ್ರೈಂ ಎಕ್ಸ್​​ಪರ್ಟ್​ಗಳು

ಮೈಸೂರು: ಅತ್ಯಾಚಾರ ಪ್ರಕರಣ ಭೇದಿಸಲು ಫೀಲ್ಡಿಗೆ ಇಳಿದಿದ್ದ 26 ಕ್ರೈಂ ಎಕ್ಸ್​​ಪರ್ಟ್​ಗಳು

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಕೇಸ್​ ಸಂಬಂಧ ಮೈಸೂರು ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರು ಮತ್ತು ಮೈಸೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಘಟನೆ ನಡೆದ 85 ಗಂಟೆಗಳ ಬಳಿಕ ತಮಿಳುನಾಡು ಮೂಲದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಮಿಳುನಾಡಿನ ಸತ್ಯಮಂಗಲದ ಐವರು ಆರೋಪಿಗಳನ್ನು ಬಂಧಿಸಿ ಮೈಸೂರಿಗೆ ಕರೆ ತಂದಿದ್ದಾರೆ. ಇವರನ್ನು ಪತ್ತೆಹಚ್ಚಲು ಸಿಎಂ ಆದೇಶದ ಮೇರೆಗೆ ಗೃಹ ಸಚಿವರು ಬರೋಬ್ಬರಿ 26 ಮಂದಿ ಕ್ರೈ ​ ಎಕ್ಸ್‌ಪರ್ಟ್‌ಗಳನ್ನು ಫೀಲ್ಡಿಗೆ ಇಳಿಸಿದ್ದರು. ದಕ್ಷಿಣ ವಲಯದ ಐದು ಜಿಲ್ಲೆಗಳ ಅನುಭವಿ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

blank

ಐದು ಜಿಲ್ಲೆಯ ಕ್ರೈಂ ತನಿಖೆಯ ಎಕ್ಸ್‌‌ಪರ್ಟ್‌ಗಳನ್ನ ನಿಯೋಜನೆ ಮಾಡಿದ್ದರು ಐಜಿಪಿ ಪ್ರವೀಣ್​ ಸೂದ್​​. ಚಾಮರಾಜನಗರ, ಮಂಡ್ಯ, ಮೈಸೂರು, ಕೊಡಗು, ಹಾಸನ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಈ ಹಿಂದೆ ದೊಡ್ಡ ದೊಡ್ಡ ಕ್ರೈಂ ಪ್ರಕರಣ ಭೇದಿಸಿದ್ದ ಎಕ್ಸ್‌ಪರ್ಟ್‌ಗಳನ್ನೇ ಈ ಕೇಸಿಗೂ ನಿಯೋಜನೆ ಮಾಡಲಾಗಿತ್ತು.

ಇದನ್ನೂ ಓದಿ: ಮೈಸೂರು ಕೇಸ್​​: ಸಂಬಂಧಿಕರ ಮನೆಯಲ್ಲಿ ಅವಿತಿದ್ದರಂತೆ ಶಂಕಿತರು.. ಹೇಗಿತ್ತು ಪೊಲೀಸ್ ಬೇಟೆ?

ದಕ್ಷಿಣ ವಲಯ ಪೊಲೀಸರ ಪಟ್ಟಿ ಮಾಡಿಕೊಂಡು ಪ್ರವೀಣ್​ ಸೂದ್​ ತಂಡ ರಚನೆ ಮಾಡಿದ್ದರು. ಕೊನೆಗೂ 26 ಪೊಲೀಸ್​​​​​ ಎಕ್ಸ್‌ಪರ್ಟ್‌ಗಳು ಪ್ರಕರಣ ಭೇದಿಸಿದರು.

Source: newsfirstlive.com Source link