ರೇಪ್ ಕೇಸ್​​ ಬಗ್ಗೆ ಮಾತಾಡದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಣ್ಣಲ್ಲವೇ? -ಹೆಚ್​​.ಎಂ.ರೇವಣ್ಣ ಆಕ್ರೋಶ

ರೇಪ್ ಕೇಸ್​​ ಬಗ್ಗೆ ಮಾತಾಡದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಣ್ಣಲ್ಲವೇ? -ಹೆಚ್​​.ಎಂ.ರೇವಣ್ಣ ಆಕ್ರೋಶ

ಬೆಂಗಳೂರು: ಮೈಸೂರು ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಮತ್ತು ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಸದಸ್ಯ ಹೆಚ್.ಎಂ.ರೇವಣ್ಣ ಪ್ರತಿಕ್ರಿಯಿಸಿದ್ದು, ಪ್ರಕರಣದ ಮೇಲ್ನೋಟಕ್ಕೆ ಮೈಸೂರು ಪೊಲೀಸ್ ಕಮಿಷನರ್​ ಬೇಜವಾಬ್ದಾರಿ ಕಾಣ್ತಿದೆ ಎಂದು ಆರೋಪಿಸಿದ್ದಾರೆ.

ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣ ಕುರಿತಂತೆ ನಾವು ನಿನ್ನೆ ಮೈಸೂರಿಗೆ ತೆರಳಿ ಮಾಹಿತಿ ಕಲೆ ಹಾಕಿದ್ದೇವೆ. ಇಂದು ಸಂಜೆ ಅಧ್ಯಕ್ಷರಿಗೆ ವಿಸ್ತೃತ ವರದಿ ನೀಡಲಿದ್ದೇವೆ ಎಂದಿದ್ದಾರೆ.

ವೈದ್ಯರು ಅತ್ಯಾಚಾರ ನಡೆದಿದೆ ಅಂತಾರೆ. ಆದ್ರೆ, ಪೊಲೀಸರು ದರೋಡೆ ಪ್ರಕರಣ ದಾಖಲಿಸಲು ಪ್ರಯತ್ನ ಮಾಡಿದ್ದಾರೆ. ಆ ಯುವಕನದು ಒಂದು ಕೇಸ್ ಮಾಡಿದ್ರೆ, ಯುವತಿಯದ್ದೇ ಪ್ರತ್ಯೇಕ ಕೇಸ್​ ದಾಖಲಾಗಿದೆ. ತಮ್ಮ ಸರ್ಕಾರದ ಮೇಲೆ ಕೆಟ್ಟ ಹೆಸರು ಬರಬಾರದು ಎಂದು ಸರ್ಕಾರ ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ: ಬಂಧಿತ ಆರೋಪಿಗಳ ಪೈಕಿ ಓರ್ವ 17 ವರ್ಷದ ಬಾಲಕ- ಪ್ರವೀಣ್ ಸೂದ್

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ವಾಗ್ದಾಳಿ ಮಾಡಿರುವ ಅವರು, ಬಿಜೆಪಿಗರು ಒಬ್ಬೊಬ್ಬರು ಒಂದೊಂದು ರೀತಿ ಮಾತಾಡ್ತಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈಗ ಕೆಂದ್ರ ಸಚಿವರಾಗಿದ್ದು ಮಾತನಾಡಲು ಹಿಂದೆ ಮುಂದೆ ನೋಡ್ತಿದ್ದಾರೆ. ಶೋಭಾ ಕರಂದ್ಲಾಜೆ ನಾನು ಈ ಪ್ರಕರಣದ ಬಗ್ಗೆ ಮಾತಾಡಲ್ಲ ಅಂತಾರೆ ಅವರು ಸಚಿವೆಯಾದರೂ ಹೆಣ್ಣು ಹೆಣ್ಣೆ ಅಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ.

ಸಂಜೆ ವೇಳೆ ಘಟನೆ ನಡೆದು ರಾತ್ರಿ 10 ಗಂಟೆಗೆ ಪೊಲೀಸ್​ಗೆ ಮಾಹಿತಿ ಇದ್ದರೂ, ಪ್ರಕರಣ ದಾಖಲಿಸಿಲ್ಲ. ಇಂತಹ ಕೇಸ್​ನಲ್ಲಿ ಸುಮೋಟೊ‌ ಕೇಸ್ ದಾಖಲಿಸಬೇಕು ಅಂತಿದೆ. ಆದರೆ ಪೊಲೀಸರು ಮಾತ್ರ ಪ್ರಕರಣ ದಾಖಲಿಸುವಾಗ ಬೇರೆ ರೀತಿ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟಾರೆಯಾಗಿ ಪೊಲೀಸ್​ ಲೋಪ ಎದ್ದು ಕಾಣ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೈಸೂರು ಕೇಸ್​​: ಸಂಬಂಧಿಕರ ಮನೆಯಲ್ಲಿ ಅವಿತಿದ್ದರಂತೆ ಶಂಕಿತರು.. ಹೇಗಿತ್ತು ಪೊಲೀಸ್ ಬೇಟೆ?

Source: newsfirstlive.com Source link