‘ಸೀತಾರಾಮ ಕಲ್ಯಾಣ’ ಮುಗಿಸಿ ಸೀದಾ ಬಾಸ್ಕೆಟ್ ಬಾಲ್ ಗ್ರೌಂಡಲ್ಲಿ ನಿಂತಿದ್ಯಾಕೆ ‘ರೈಡರ್’ ನಿಖಿಲ್​

‘ಸೀತಾರಾಮ ಕಲ್ಯಾಣ’ ಮುಗಿಸಿ ಸೀದಾ ಬಾಸ್ಕೆಟ್ ಬಾಲ್ ಗ್ರೌಂಡಲ್ಲಿ ನಿಂತಿದ್ಯಾಕೆ ‘ರೈಡರ್’ ನಿಖಿಲ್​

‘ಸೀತಾರಾಮ ಕಲ್ಯಾಣ’ ಸಿನಿಮಾವನ್ನ ಮುಗಿಸಿ ‘ರೈಡರ್’ ಆಗಲು ಹೊರಟ ಸ್ಯಾಂಡಲ್​ವುಡ್ ಯುವರಾಜ ನಿಖಿಲ್ ಕುಮಾರ್ ಯಾವ ಪಾತ್ರ ಮಾಡ್ತಿದ್ದಾರೆ ಎಂಬ ಕುತೂಹಲವಿತ್ತು.. ಈ ಬಾರಿಯೂ ಲವ್ವರ್ ಬಾಯ್ ಆಗಿ ಖಡಕ್-ಧಡಕ್ ಹ್ಯಾಂಡ್ಸಮ್ ಹಂಕ್ ರೀತಿ ನಿಖಿಲ್ ಕಂಗೊಳಿಸುತ್ತಾರಾ ಅನ್ನೋ ಊಹೆಗೆ ಹೊಸ ರೂಪ ಸಿಕ್ಕಿದೆ.. ಕ್ರೀಡಾ ಅಡ್ವೆಂಚರ್ ಸಿನಿಮಾದಲ್ಲಿ ನಿಖಿಲ್ ಕುಮಾರ್ ನಿಂತಿದ್ದಾರೆ.

blank

ನಿಖಿಲ್ ಕುಮಾರ್.. ಸ್ಯಾಂಡಲ್​​ವುಡ್ ಯುವರಾಜ, ಜಾಗ್ವಾರ್ ಸ್ಟಾರ್.. ಕುರುಕ್ಷೇತ್ರದ ಅಭಿಮನ್ಯು.. ಸಿನಿಮಾ , ರಾಜಕೀಯ ಎರಡರಲ್ಲೂ ಬ್ಯುಸಿ ಇರೋ ಯುವ ಪ್ರತಿಭೆ.. ಸದ್ಯ ರೈಡರ್ ಸಿನಿಮಾದ ಟಾಕಿ ಪೋಷನ್ ಮುಗಿಸಿ ಇನ್ನೊಂದು ಸಾಂಗ್ ಶೂಟಿಂಗ್​​ ಒಂದನ್ನ ಉಳಿಸಿಕೊಂಡಿದ್ದಾರೆ. ಸೋ ಅಲ್ಲಿಗೆ ರೈಡರ್ ಸಿನಿಮಾದ ಅರ್ಧ ಕೆಲಸ ಮುಗಿದು ಹೋಗಿದೆ.. ಇನ್ನೆನಿದ್ರು ಒಂದು ಸಾಂಗ್ ಶೂಟ್ ಮತ್ತು ಪೋಸ್ಟ್​​​​​ ಪ್ರೊಡಕ್ಷನ್ ಕಾರ್ಯ ಮಾತ್ರ ಬಾಕಿ ಇದೆ.. ಈ ತಂಪಾದ ಟೈಮ್​​ನಲ್ಲಿ ರೈಡರ್ ಬಳಗದಿಂದ ಒಂದು ಮಸ್ತ್ ಸಮಾಚಾರ ಹೊರ ಬಂದಿದೆ..

ಸ್ಪೋರ್ಟ್ಸ್ ಡ್ರಾಮಾ ಫಿಲ್ಮ್ ನಿಖಿಲ್ ​​‘ರೈಡರ್’
ಬಾಸ್ಕೆಟ್ ಬಾಲ್ ಆಟಗಾರನಾದ ನಿಖಿಲ್ ಮಿಂಚು

ಲಹರಿ ಆಡಿಯೋ ಕಂಪನಿ ನಿರ್ಮಾಣದ ತೆಲುಗಿನ ವಿಜಯ್ ಕುಮಾರ್ ಕೊಂಡ ನಿರ್ದೇಶನದ ರೈಡರ್ ಸಿನಿಮಾ ಪೊಸ್ಟರ್ಸ್​​​​​​ ಟೀಸರ್ಸ್​​ಗಳಿಂದ ಚಿತ್ರಪ್ರೇಮಿಗಳನ್ನ ಇಂಪ್ರೇಸ್ ಮಾಡಿತ್ತು.. ಈಗ ಕಥಾ ನಾಯಕ ನಿರ್ವಹಿಸುತ್ತಿರೋ ಪಾತ್ರ ಯಾವುದು ಅನ್ನೋ ವಿಚಾರವನ್ನ ಬಹಿರಂಗಪಡಿಸಿ ಇನ್ನಷ್ಟು ಕುತೂಹಲ ಹೆಚ್ಚಾಗುವಂತೆ ಮಾಡಿದೆ..

blank

‘ರೈಡರ್‌ ಕ್ರೀಡೆಯನ್ನು ಆಧರಿಸಿದ ಒಂದು ಮನರಂಜನಾತ್ಮಕ ಸಿನಿಮಾ. ಕನ್ನಡದ ಜೊತೆ ತೆಲುಗು ಭಾಷೆಯಲ್ಲಿಯೂ ಪ್ರೇಕ್ಷಕರ ಮುಂದೆ ರೈಡರ್ ಸವಾರಿ ಮಾಡಲಿದೆ.. ಮೈಸೂರು, ಮಂಗಳೂರು, ಬೆಂಗಳೂರು, ಶಿರಸಿಯ ಸುತ್ತಮುತ್ತ ಲೇ, ಲಡಾಖ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಕಾಲೇಜು ನಂತರ ನಾಯಕ ನಟ ಬಾಸ್ಕೆಟ್‌ ಬಾಲ್‌ ಆಟಗಾರನಾಗಿ ಏನು ಮಾಡುತ್ತಾನೆ ಅನ್ನೋದೆ ರೈಡರ್ ಒನ್​​ಲೈನ್ ಸ್ಟೋರಿ.. ಅದಷ್ಟು ಬೇಗ ಸೂಕ್ತ ಸಮಯದಲ್ಲೇ ಪ್ರೇಕ್ಷಕರ ಮುಂದೆ ರೈಡರ್ ಸಿನಿಮಾ ಮೂಡಿಬರಲಿದೆ..

Source: newsfirstlive.com Source link