ಕೂಲಿ ಕೆಲಸದತ್ತ ಮುಖ ಮಾಡಿದ ಮಕ್ಕಳು -ಬಳ್ಳಾರಿಯಲ್ಲಿ ಡಂಗೂರ ಸಾರಿ ಪೋಷಕರಿಗೆ ಎಚ್ಚರಿಕೆ

ಕೂಲಿ ಕೆಲಸದತ್ತ ಮುಖ ಮಾಡಿದ ಮಕ್ಕಳು -ಬಳ್ಳಾರಿಯಲ್ಲಿ ಡಂಗೂರ ಸಾರಿ ಪೋಷಕರಿಗೆ ಎಚ್ಚರಿಕೆ

ಬಳ್ಳಾರಿ: ಕೂಲಿ ಕೆಲಸಕ್ಕೆ ಮಕ್ಕಳನ್ನ ಕಳುಹಿಸಿದ್ರೆ ಪಾಲಕರಿಗೆ ದಂಡ ಹಾಕಲಾಗುವುದು ಅಂತ ಜಿಲ್ಲೆಯಲ್ಲಿ ಗ್ರಾಮಸ್ಥರು ಡಂಗೂರ ಸಾರಿದ್ದಾರೆ.

ಶಾಲಾ ಕಾಲೇಜು ಪ್ರಾರಂಭವಾದ ಹಿನ್ನಲೆ, ಕುರುಗೋಡು ಗ್ರಾಮದ ಸರ್ಕಾರಿ ಪ್ರೌಡ ಶಾಲೆಯಲ್ಲಿ ಸುಮಾರು 184 ವಿಧ್ಯಾರ್ಥಿಗಳ ಸಂಖ್ಯೆಯಿದೆ. ಆದರೆ ಮಕ್ಕಳು ಶಾಲೆಗೆ ಬಾರದೇ, ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ಶಾಲೆ ಪ್ರಾರಂಭವಾಗಿದ್ದರೂ 50%ಅಷ್ಟು ಮಕ್ಕಳು ಶಾಲೆಗೆ ಬರುತ್ತಿಲ್ಲ. ಕಾರಣ ಪೋಷಕರ ಲಾಕ್​ಡೌನ್​ ಅಂತ ತಮ್ಮ ಮಕ್ಕಳನ್ನ ಕೂಲಿ ಕೆಲಸಕ್ಕೆ ಕಳುಹಿಸುತ್ತಿದ್ದಾರೆ. ಹೀಗಾಗಿ ಕುರುಗೋಡು ಗ್ರಾಮಸ್ಥರು ಪಾಲಕರು ಮಕ್ಕಳನ್ನ ಕೆಲಸಕ್ಕೆ ಕರೆದುಕೊಂಡು ಹೋಗೋರಿಗೆ ದಂಡ ವಿಧಿಸಲಾಗುವುದು. ಮಕ್ಕಳನ್ನ ಶಾಲೆಗೆ ಕಳಿಸಿ, ಕೂಲಿಗೆ ಕಳುಹಿಸಬೇಡಿ ಬೇಡಿ’ ಎಂದು ಡಂಗುರ ಸಾರಿದ್ದಾರೆ.

Source: newsfirstlive.com Source link