ಗ್ಯಾಂಗ್‍ರೇಪ್ ಪ್ರಕರಣದ ಆರೋಪಿಗಳಲ್ಲಿ ಓರ್ವ ಮಾವನನ್ನೇ ಕೊಲೆ ಮಾಡಿದವನು!

ಮೈಸೂರು: ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣದಲ್ಲಿರುವ ಆರೋಪಿಗಳಲ್ಲಿ ಒಬ್ಬನು ಮಾವನನ್ನೆ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.

ಗ್ಯಾಂಗ್ ರೇಪ್ ಪ್ರಕರಣ ಆರೋಪಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ. ಪ್ರಕರಣ ಆರೋಪಿಯೊಬ್ಬ ಕೊಲೆ ಆರೋಪಿಯಾಗಿದ್ದಾನೆ. ಪ್ರೀತಿಸಿದ ಹುಡುಗಿಯನ್ನ ಮದುವೆ ಮಾಡಕೊಡದಿದ್ದಾಗ ಹುಡುಗಿ ತಂದೆಯನ್ನು ಕೊಲೆ ಮಾಡಿದ್ದನು. ಸದ್ಯ ಪೊಲೀಸರ ತನಿಖೆ ವೇಳೆ ಬೆಳಕಿಗಿ ಬಂದಿದೆ. ಆರೋಪಿಗಳ ಉಳಿದ ಪ್ರಕರಣ ಹಿನ್ನೆಲೆಗಳನ್ನ ಪೊಲೀಸರು ಕೆದಕುತ್ತಿದ್ದಾರೆ. ಇದನ್ನೂ ಓದಿ: ದರೋಡೆ ಮಾಡಲು ಹೋಗಿ ಏನೂ ಸಿಗದಿದ್ದಾಗ ಯುವತಿಯ ಅತ್ಯಾಚಾರವೆಸಗಿದ ಕಾಮುಕರು!

ಆರೋಪಿಗಳು ಮೈಸೂರಿನಲ್ಲಿ ತಮಿಳುನಾಡಿನಲ್ಲಿ ಖರೀದಿಸಿದ್ದ ಸಿಮ್ ಬಳಕೆ ಮಾಡಿದ್ದು, ಪೊಲೀಸರಿಗೆ ತನಿಖೆ ವೇಳೆ ತಿಳಿದಿದೆ. ನಂಬರ್‍ಗಳ ಟ್ರೇಸ್ ಮಾಡಿದ್ದು, ಈ ಘಟನ ಸ್ಥಳದಲ್ಲಿ ಹೆಚ್ಚಾಗಿ ಬಳಕೆಯಾಗಿ ಮತ್ತೆ ತಮಿಳುನಾಡಿನಲ್ಲಿ ಬಳಕೆಯಾದ ಹಿನ್ನೆಲೆಯನು ಹುಡುಕುತ್ತಾ ಆರೋಪಿಗಳ ಪತ್ತೆ ಹಚ್ಚಲಾಗಿದೆ.

ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐವರನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿದ ಸತ್ಯಮಂಗಲದಲ್ಲಿ ಇಂದು ಬೆಳಗ್ಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಮೂವರು ರಸ್ತೆಯಲ್ಲಿ ದರೋಡೆ ಮಾಡುತ್ತಿದ್ದವರಾಗಿದ್ದಾರೆ. ರಸ್ತೆಗಳಲ್ಲಿ ವಾಹನ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಗಳು ಇವರ ಮೇಲಿದೆ. ಅಂತೆಯೇ ಯುವಕ ಹಾಗೂ ಯುವತಿಯನ್ನೂ ದರೋಡೆ ಮಾಡಲು ತಂಡ ಹೋಗಿತ್ತು. ಇವರ ಬಳಿ ಏನೂ ಸಿಗದಕ್ಕೆ ಯುವತಿ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದರು ಎನ್ನಲಾಗಿದೆ.

Source: publictv.in Source link